May 4, 2024

Bhavana Tv

Its Your Channel

ಸಮುದ್ರ ಮಧ್ಯೆ ಕಾಣೆಯಾದ್ರೂ ಬದುಕಿ ಬಂದ ಕಾರ್ಮಿಕ “ಸುನಿಲ್ ಡಿಸೋಜ”.

ಮಂಗಳೂರು: ಸಮುದ್ರ ಮಧ್ಯೆ ಕಾಣೆಯಾದರೆ ಯಾರಾದ್ರೂ ಬದುಕು ಬರೋದುಂಟೇ..? ಆದರೆ ಇಲ್ಲೂಬ್ಬ ಮೀನು ಕಾರ್ಮಿಕ ಸಮುದ್ರ ಮಧ್ಯೆ ಪರ್ಸೀನ್ ಬೋಟ್ ನಿಂದ ಮಿಸ್ಸಿಂಗ್ ಆಗಿದ್ದರೂ ಎರಡು ದಿನಗಳ ನಂತರ ಪವಾಡ ಸದೃಶ ಬದುಕಿ ಬಂದಿದ್ದಾನೆ. ಹೌದು.. ಆಯುಷ್ಯ ಇದ್ದರೆ ಸಮುದ್ರಕ್ಕೆ ಬಿದ್ದರೂ ಬದುಕಿ ಬರಬಹುದು ಎನ್ನುವ ಮಾತು ಬಂದಿದ್ದು ಇದಕ್ಕೇ ಇರಬೇಕು. ಮಂಗಳೂರಿನ ಹಳೆ ಬಂದರಿನಿಂದ ತೆರಳಿದ್ದ ಫಾಲ್ಕನ್ ಹೆಸರಿನ ಪರ್ಸೀನ್ ಬೋಟ್ ಎರಡು ದಿನಗಳ ಹಿಂದೆ ಸಮುದ್ರ ಮಧ್ಯೆ ಮೀನಿಗೆ ಬಲೆ ಹಾಕುವ ಯತ್ನದಲ್ಲಿತ್ತು. ಈ ವೇಳೆ, ಪರ್ಸೀನ್ ಬೋಟಿನ ಜೊತೆಗಿರುವ ಡಿಂಗಿ ಹೆಸರಿನ ಸಣ್ಣ ಬೋಟಿನಲ್ಲಿ ಕುಳಿತು ಕಾರ್ಮಿಕ ಸುನಿಲ್ ಡಿಸೋಜ ಬಲೆ ವಿಸ್ತರಿಸಲೆಂದು ನೀರಿಗೆ ಇಳಿದಿದ್ದರು. ಆದರೆ ಈ ವೇಳೆ ಜೋರಾಗಿ ಗಾಳಿ ಬಂದಿದ್ದರಿಂದ ಡಿಂಗಿ ಬೋಟಿಗೆ ಕಟ್ಟಿದ್ದ ಹಗ್ಗ ಕಡಿದು ಹೋಗಿದೆ. ಡಿಂಗಿ ಬೋಟ್ ಕಾರ್ಮಿಕನ ಸಹಿತ ಗಾಳಿಯೊಂದಿಗೆ ತೇಲಿ ಹೋಗಿದ್ದು, ಪರ್ಸೀನ್ ಬೋಟಿನಿಂದ ಮಿಸ್ ಆಗಿತ್ತು. ಪರ್ಸೀನ್ ಬೋಟಿನಲ್ಲಿದ್ದ ಸಿಬಂದಿ ಸಮುದ್ರ ಮಧ್ಯೆ ಹುಡುಕಾಟ ನಡೆಸಿದ್ರೂ ಡಿಂಗಿ ಆಗಲೀ, ಅದರಲ್ಲಿದ್ದ ಕಾರ್ಮಿಕನಾಗಲೀ ಪತ್ತೆಯಾಗಿರಲಿಲ್ಲ. ಆನಂತ್ರ ಪರ್ಸೀನ್ ಬೋಟ್ ಮಂಗಳೂರು ಬಂದರಿಗೆ ಹಿಂತಿರುಗಿ ಬಂದಿತ್ತು. ಎರಡು ದಿನಗಳ ಬಳಿಕ ಉಡುಪಿ ಜಿಲ್ಲೆಯ ಮಲ್ಪೆಯ ಟ್ರಾಲ್ ಬೋಟಿನವರು ಆಳಸಮುದ್ರ ಮೀನುಗಾರಿಕೆಯಿಂದ ಹಿಂತಿರುಗುತ್ತಿದ್ದಾಗ ಸಮುದ್ರ ಮಧ್ಯದಲ್ಲಿ ಪತ್ತೆಯಾದ ಡಿಂಗಿಯನ್ನು ಗಮನಿಸಿದ್ದು ಅದರಲ್ಲಿದ್ದ ಕಾರ್ಮಿಕನನ್ನು ರಕ್ಷಣೆ ಮಾಡಿದ್ದಾರೆ. ಗಾಳಿ ಬಂದ ದಿಕ್ಕಿನಲ್ಲಿ ಸಮುದ್ರ ಮಧ್ಯೆ ಚಲಿಸುತ್ತಾ ಹೋಗುತ್ತಿದ್ದ ಡಿಂಗಿ ಬೋಟಿನಲ್ಲಿ ಅನ್ನ, ನೀರು ಇಲ್ಲದೆ ಎರಡು ದಿನ ಕಳೆದ ಕಾರ್ಮಿಕನನ್ನು ಹಿಡಿದು ಮಲ್ಪೆ ಬಂದರಿಗೆ ಕರೆತಂದಿದ್ದಾರೆ. ಕಾರ್ಮಿಕ ಸುನಿಲ್ ಡಿಸೋಜನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಎರಡು ದಿನ ಕಳೆದಿದ್ದರಿಂದ ಸುನಿಲ್ ಜೀವಂತ ಬರುವುದು ಸಂಶಯ ಆಗಿತ್ತು. ಡಿಂಗಿ ಬೋಟ್ ಸಮುದ್ರ ಮಧ್ಯೆ ಮುಳುಗಿರಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ, ಸುನಿಲ್ ಡಿಸೋಜ ಪವಾಡ ಸದೃಶ ಬದುಕಿ ಬಂದಿದ್ದಾರೆ

error: