December 22, 2024

Bhavana Tv

Its Your Channel

ಸಂಚಾರಿ, ಅಡವಿ ಕುರುಬರಿಗೆ ಪ್ಯಾಕೇಜ್ ನೀಡಲು ಮನವಿ

ರೋಣ: ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಸಂಚಾರಿ ಕುರುಬರಿಗೆ ಹಾಗೂ ಅಡವಿ ಕುರುಬರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಸಂಗೋಳಿ ರಾಯಣ್ಣ ಸೇನಾ ವತಿಯಿಂದ ತಹಶೀಲ್ದಾರ ಜೆ. ಬಿ. ಜಕ್ಕನಗೌಡ್ರ ಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ತಾಲ್ಲೂಕಾ ಅಧ್ಯಕ್ಷ ರಾಮಣ್ಣ ಹಂಡಿ, ಕುರುಬರು ಸಂಕಷ್ಟದಲ್ಲಿದ್ದು ಅವರ ಅಗತ್ಯಕ್ಕೆ ತಕ್ಕಂತೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು. ಅಷ್ಟೇ ಅಲ್ಲದೆ ಮುಂಗಾರು ಸಂದರ್ಭದಲ್ಲಿ ರೈತರಿಗೆ ಅವಶ್ಯಕವಾಗಿರುವ ಬಿತ್ತನೆ ಬೀಜ, ಡಿ.ಎ.ಪಿ ಗೊಬ್ಬರ ಪೂರೈಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರು ಇದ್ದರು.
error: