December 21, 2024

Bhavana Tv

Its Your Channel

ಪ್ರಗತಿಪರ ರೈತ ಮಹಾ ನಂದೀಶ ಪುಂಡಲಿಕಪ್ಪ ಉಳ್ಳಾಗಡ್ಡಿ

ಗದಗ: ಸಮಗ್ರ ಕೃಷಿ ಘಟಕ ಗದಗ ಜಿಲ್ಲೆ ರೋಣ ತಾಲೂಕಿನ ಮುದೇನಗುಡಿ ಗ್ರಾಮದ ಪ್ರಗತಿಪರ ರೈತರಾದ ಮಹಾ ನಂದೀಶ ಪುಂಡಲಿಕಪ್ಪ ಉಳ್ಳಾಗಡ್ಡಿ ಇವರು ೩.೨೦ ಎಕ್ಕರೆ ಜಾಗೆಯಲ್ಲಿ ಪಪ್ಪಾಯಿ ಕೃಷಿ ಮಾಡಿದ್ದು ಒಟ್ಟು ೩೦೦೦ ಗಿಡ ನಾಟಿ ಮಾಡಲಾಗಿದೆ

.

ಇದಕ್ಕೆ ಎನ್ ಆರ್ ಇ ಜಿ ಯೋಜನೆ ಅಡಿಯಲ್ಲಿ ಸಸಿ ನಾಟಿ ಮಾಡಲು ಇಲಾಖೆ ವತಿಯಿಂದ ೯೭೦೦೦ ಹಣವನ್ನು ಗುಂಡಿ ತೋಡಲು ಸಹಾಯ ಮಾಡಿರುತ್ತಾರೆ. ರೈತನು ತನ್ನ ಸ್ವಂತ ಜಮೀನಲ್ಲಿ ಮತ್ತೆ ತನ್ನ ಕೈಯಿಂದ ೪೦೦೦೦ ರೂ. ಹಾಕಿ. ಪಪ್ಪಾಯಿ ಕೃಷಿಯಲ್ಲಿ.ಉತ್ತಮ ಫಸಲನ್ನು ಪಡೆಯುತ್ತಿದ್ದಾನೆ ಪಪ್ಪಾಯಿ ಕೃಷಿ ಮಾಡಿ ಒಂದು ವರ್ಷ ಆಗಿದೆ ಅದರಲ್ಲಿ ೫೦೦೦೦೦ ಆದಾಯವನ್ನು ಪಡೆದುಕೊಂಡಿರುತ್ತಾರೆ. ಇನ್ನೂ ಒಂದು ವರ್ಷದ ಅವಧಿ ಸುಮಾರು ೮ ಲಕ್ಷದವರೆಗೂ ಆದಾಯ ಬರುವುದಾಗಿ ನಿರೀಕ್ಷೆಯನ್ನು ಮಾಡಿಕೊಂಡಿರುತ್ತಾರೆ.ಅದೇ ರೀತಿ ಪೇರಲ ಹಣ್ಣಿನ ಕೃಷಿ. ಮಧ್ಯದಲ್ಲಿ ಮಾವು ಕೃಷಿ. ಹಾಗೆ ಗಂಧದ ಮರವನ್ನು ನಾಟಿ ಮಾಡುತ್ತಾರೆ.
ಅದೇ ರೀತಿ ಕೃಷಿ ಹೊಂಡ. ಸಾವಯವ ಕೃಷಿ.ಮತ್ತು ಕೋಳಿ ಸಾಕಾಣಿಕೆ ಆಕಳು ಸಾಕಾಣಿಕೆ ಕುರಿ ಸಾಕಾಣಿಕೆ ಮಾಡುತ್ತಾ ರೈತನೇ ದೇಶದ ಬೆನ್ನೆಲುಬು ಎಂದು ತೋರಿಸಿ ಕೊಟ್ಟಿರುತ್ತಾರೆ.

ವರದಿ ವೀರಣ್ಣ ಸಂಗಳದ

error: