December 22, 2024

Bhavana Tv

Its Your Channel

ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

ಗದಗ ಜಿಲ್ಲೆ ರೋಣ ತಾಲ್ಲೂಕಿನ ಹೊಳೆ ಆಲೂರು ಎಪಿಎಂಸಿ ಸಭಾಭವನದಲ್ಲಿ ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಗದಗ ಜಿಲ್ಲೆ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕಾ ಸಚಿವರು ಹಾಗೂ ವಾರ್ತಾ ಇಲಾಖೆಯ ಸಚಿವರಾದಂತಹ ಸಿ.ಸಿ ಪಾಟೀಲ್ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಸಂಗೀತ ಬೇನಕನಕೊಪ್ಪರವರು ಮಾತನಾಡಿ. ಈಗಾಗಲೇ ರಾಜ್ಯ ಸರ್ಕಾರ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ೩೦೦೦ ಯನ್ನು ಜಮಾ ಮಾಡುತ್ತಿದೆ. ಇನ್ನು ಕೆಲವರು ನೊಂದಾಯಿಸಲು ಬಾಕಿ ಇರುವವರು ಆಧಾರ್ ಕಾರ್ಡ್, ಫೋಟೋ, ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ಕಾರ್ಮಿಕ ಇಲಾಖೆ ಭೇಟಿ ನೀಡಿ ಎಂದು ಸಲಹೆ ನೀಡಿದರು.
ಉದ್ಘಾಟಕರಾಗಿ ಆಗಮಿಸಿದಂತಹ ಸಿಸಿ ಪಾಟೀಲ್ ಅವರು ಮಾತನಾಡಿ ಎಲ್ಲರೂ ಮುಂಜಾಗ್ರತೆಯಾಗಿ ಲಸಿಕೆಯನ್ನು ಹಾಕಿಸಿಕೊಳ್ಳಿ ಅದೇ ರೀತಿ ಮೂರನೇಯ ಅಲೆ ಬರುವ ಸಂದರ್ಭವಿದ್ದು. ಎಲ್ಲರೂ ಮಾಸ್ಕ , ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಈ ಸಂದರ್ಭದಲ್ಲಿ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದರು

ಈ ಸಂದರ್ಭದಲ್ಲಿ ಹೊಳೆ ಆಲೂರು ಎಪಿಎಂಸಿ ಅಧ್ಯಕ್ಷರಾದ ರಾಜಣ್ಣ ಹುಲಿ ರವರು ಮಾತನಾಡಿ ಈಗಾಗಲೇ ಕೆಲವು ಕಾರ್ಮಿಕರು ಲಸಿಕೆಯನ್ನು ಪಡೆದುಕೊಂಡಿರುತ್ತಾರೆ. ಇನ್ನು ಬಾಕಿ ಉಳಿದವರು ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಕಾರ್ಮಿಕರಿಗೆ ಮನವಿಯ ಮೂಲಕ ವಿನಂತಿಸಿದರು.
ಅದೇ ರೀತಿ ಘನತಾಜ್ಯ ವಿಲೇವಾರಿ ವಾಹನಕ್ಕೆ ಚಾಲನೆ ನೀಡಿದ ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿಗಳಾದ ಜೆ ಬಿ ಜಕ್ಕನ್ ಗೌಡ. ಕಾರ್ಮಿಕ ಇಲಾಖೆಯ ಸಂಗೀತ ಬೆನಕನಕ ಕೊಪ್ಪ. ತಾಲೂಕ ಕಾರ್ಯನಿರ್ವಾಹನ. ಅಧಿಕಾರಿಗಳಾದ ಪಲ್ಲವಿ ಸಾತೇನಹಳ್ಳಿ. ಹಾಗೂ ಎಪಿಎಂಸಿ ಅಧ್ಯಕ್ಷರಾದ ರಾಜಣ್ಣ ಹುಲಿ ಉಪಸ್ಥಿತರಿದ್ದರು

ವರದಿ ವೀರಣ್ಣ ರೋಣ

error: