December 22, 2024

Bhavana Tv

Its Your Channel

ಹುನಗುಂಡಿ ಗ್ರಾಮಸ್ಥರಿಗೆ ಆರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕೆ

ಹುನಗುಂಡಿ ೨೩: ಹುನಗುಂಡಿ ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನದಲ್ಲಿ ಆರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕೆ ಗ್ರಾಮಸ್ಥರಿಗೆ ನೀಡಲಾಯಿತು. ಈ ಸಭೆಯಲ್ಲಿ ಶ್ರೀ ಬಸವಂತಪ್ಪ ಎಚ್. ತಳವಾರ ರೋಣ ತಾಲೂಕ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರು ಇವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಲಸಿಕೆಯನ್ನು ಪುರುಷರು ಮತ್ತು ಮಹಿಳೆಯರು ಪಡೆದುಕೊಳ್ಳಬೇಕು. ಯಾವುದೇ ರೀತಿ ಭಯ ಭೀತಿ ಇರುವುದಿಲ್ಲ. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮ ಆಗುವುದಿಲ್ಲ ಧೈರ್ಯದಿಂದ ಈ ಲಸಿಕೆ ಹಾಕಿಸಿಕೊಳ್ಳಬೇಕು ಕೊರೋನಾ ರೋಗದಿಂದ ಪಾರಾಗಾವುದು ಸಂಶಯವಿಲ್ಲ ಎಂದು ಹೇಳಿದರು.
ಈಗಾಗಲೇ ಗ್ರಾಮದಲ್ಲಿ ಮನೆ ಮನೆಗೆ ಪ್ರಚಾರ ಮಾಡಿ ಹಿರಿಯರಿಗೆ, ಯುವಕರಿಗೆ ಮನವರಿಕೆ ಮಾಡಿ ಕಾರ್ಯಕ್ರಮ ಯಶಸ್ವಿ ಮಾಡಿದರು. ಹುನಗುಂಡಿ ಗ್ರಾಮದಲ್ಲಿ ಕೋವಿಡ್ ಶೀಲ್ಡ್ ಲಸಿಕೆ ದೊಡ್ಡ ಪ್ರಮಾಣದಲ್ಲಿ ಹಾಕಿಸಿಕೊಂಡಿರುತ್ತಾರೆ. ಈ ಎಲ್ಲ ಹಿರಿಯರು, ಯುವಕರು ಗ್ರಾಮದಲ್ಲಿ ಸಹಕರಿಸುತ್ತಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಈ ಸಭೆಯಲ್ಲಿ ಎಸ್. ಬಿ. ಪಾಟೀಲ ಆರೋಗ್ಯ ಇಲಾಖೆಯ ನಿರೀಕ್ಷಕರು, ಯಶೋಧಾ ಚಿನ್ನಿ, ಸಿ. ಎಚ್. ಓ. ಶಿವು ಪಸಲಾದಿ, ಸಿ.ಎಚ್.ಓ., ಕವಿತಾ ಬ. ತಳವಾರ, (ಬೇವಿನಗಿಡದ) ಅಂಗನವಾಡಿ ಕಾರ್ಯಕರ್ತೆ, ನಾಗಮ್ಮ ನವಚಿದ್ರ ಅಂಗನವಾಡಿ ಕಾರ್ಯಕರ್ತೆ, ನಿರ್ಮಲಾ ಬ. ಕೊಡತಗೇರಿ ಆಶಾ ಕಾರ್ಯಕರ್ತೆ, ಸುಮಂಗಲಾ ವಸ್ತ್ರದ ಆಶಾ ಕಾರ್ಯಕರ್ತೆ, ಮುಂತಾದವರು ಗ್ರಾಮದ ಗುರು-ಹಿರಿಯರು ಕಾರ್ಯಕ್ರಮದಲ್ಲಿದ್ದರು.

ವರದಿ ವೀರಣ್ಣ ರೋಣ

error: