ಗದಗ ಜಿಲ್ಲೆ ರೋಣ ತಾಲ್ಲೂಕಿನ ಗುರು ಭವನ ಸಭಾಭವನದಲ್ಲಿ ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಹಾಗೂ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಸನ್ಮಾನ್ಯ ಕಳಕಪ್ಪ ಬಂಡಿ ಜನಪ್ರಿಯ ಶಾಸಕರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಸಂಗೀತ ಬೇನಕನಕೊಪ್ಪರವರು ಮಾತನಾಡಿ. ಈಗಾಗಲೇ ರಾಜ್ಯ ಸರ್ಕಾರ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ೩೦೦೦ ಯನ್ನು ಜಮಾ ಮಾಡುತ್ತಿದೆ. ಇನ್ನು ಕೆಲವರು ನೊಂದಾಯಿಸಲು ಬಾಕಿ ಇರುವವರು ಆಧಾರ್ ಕಾರ್ಡ್ ಫೋಟೋ ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ಕಾರ್ಮಿಕ ಇಲಾಖೆ ಭೇಟಿ ನೀಡಿ ಎಂದು ಸಲಹೆ ನೀಡಿದರು
ಉದ್ಘಾಟಕರಾಗಿ ಆಗಮಿಸಿದಂತಹ ಕಳಕಪ್ಪ ಬಂಡಿ ಅವರು ಮಾತನಾಡಿ ಎಲ್ಲರೂ ಮುಂಜಾಗ್ರತೆಯಾಗಿ ಲಸಿಕೆಯನ್ನು ಹಾಕಿಸಿಕೊಳ್ಳಿ ಅದೇ ರೀತಿ ಮೂರನೆಯ ಅಲೆ ಬರುವ ಸಂದರ್ಭವಿದ್ದು, ಎಲ್ಲರೂ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಈ ಸಂದರ್ಭದಲ್ಲಿ ಮುತ್ತಣ್ಣ ಕಡಗದ ರೋಣ ತಾಲ್ಲೂಕು ಮಂಡಲ ಅಧ್ಯಕ್ಷರೂ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು
ದಿನಿಸಿ ಕಿಟ್ ವಿತರಣೆ ಮಾಡಿ. ಮಾತನಾಡಿ ಅವರು ಈಗಾಗಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಹಳಷ್ಟು ಶ್ರಮವಹಿಸಿ ಎಲ್ಲರಿಗೂ ಲಸಿಕೆ ನೀಡುವಲ್ಲಿ ಸತತ ಪ್ರಯತ್ನ ನಡೀತಾ ಇದೆ ಉಳಿದವರೆಲ್ಲರೂ ಲಸಿಕೆ ಹಾಕಿಸಿಕೊಳ್ಳಿ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡರು.
ನಂತರ ಮಾತನಾಡಿದ ಹೊಳೆ ಆಲೂರು ಎಪಿಎಂಸಿ ಅಧ್ಯಕ್ಷರಾದ ರಾಜಣ್ಣ ಹುಲಿ ರವರು ಮಾತನಾಡಿ ಈಗಾಗಲೇ ಕೆಲವು ಕಾರ್ಮಿಕರು ಲಸಿಕೆಯನ್ನು ಪಡೆದುಕೊಂಡಿರುತ್ತಾರೆ. ಇನ್ನು ಕೆಲವರು ಬಾಕಿ ಉಳಿದವರು ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಿ ಅಂದು ಕಾರ್ಮಿಕರಿಗೆ ಮನವಿಯ ಮೂಲಕ ವಿನಂತಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಸಂಗೀತ ಬೆನಕನಕ ಕೊಪ್ಪ. ಹಾಗೂ ಅದೇ ರೀತಿ. ಕುಮಾರ ಪಲ್ಲೇದ ಸಂಗಪ್ಪ ಜಿಡ್ಡಿಬಾಗಿಲ ಬಸವರಾಜ ಕೊಟಗಿ ಅಶೋಕ್ ನವಲಗುಂದ ಕುಬೇರಗೌಡ ಲಿಂಗನಗೌಡ್ರ ಇನ್ನೂ ಅನೇಕರು ಉಪಸ್ಥಿತರಿದ್ದರು
ವರದಿ: ವೀರಣ್ಣ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ