ಕುರುವಿನಕೊಪ್ಪ ೨೭: ನವಿಲುತೀರ್ಥ ಜಲಾಶಯದ ಒಳ ಹರಿವು ಹೆಚ್ಚಾದ ಕಾರಣ ಜಲಾಶಯದಲ್ಲಿನ ನೀರು ಗರಿಷ್ಠ ಹೆಚ್ಚಾಗಿದ್ದರಿಂದ ಮಲಪ್ರಭಾ ನದಿಗೆ ಬೀಡಲಾಗಿದೆ. ನದಿಯ ದಂಡೆಯ ಬದಿಯಲ್ಲಿರುವ ಹಳ್ಳಿಗಳಿಗೆ ಬಸವಮತಪ್ಪ ಎಚ್. ತಳವಾರ ಮಾಜಿ ಅಧ್ಯಕ್ಷರು ಗದಗ ಜಿಲ್ಲಾ ಬಿಜೆಪಿ ಎಸ್. ಟಿ. ಮೋರ್ಚಾ ಹಾಗೂ ರೋಣ ತಾಲೂಕ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರು ಹಾಗೂ ಸಂತೋಷ ತಳವಾರ ಈ ಎಲ್ಲ ಹಳ್ಳಿಗಳಿಗೆ ಭೇಟಿಯಾಗಿ ರೈತರಿಗೆ ಮಲಪ್ರಭಾ ನದಿಯ ಪ್ರವಾಹದ ಬಗ್ಗೆ ಮನವರಿಕೆ ಮಾಡಿದರು.
ಅವರು ಭೇಟಿ ನೀಡಿದ ಹಳ್ಳಿಗಳಾದ ಕುರುವಿನಕೊಪ್ಪ, ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್. ಬೇಲೇರಿ, ಗಾಡಗೋಳಿ, ಹೊಳೆಮಣ್ಣೂರ, ಹೊಳೆಆಲೂರ, ಈ ಗ್ರಾಮೀಣ ಪ್ರದೇಶಗಳಿಗೆ ಮಲಪ್ರಭಾ ನದಿಯ ನೀರು ಬಿಡಲಾಗಿದೆ ಎಂದು ಈ ಎಲ್ಲ ಹಳ್ಳಿಯ ರೈತರಿಗೆ ಮತ್ತು ಸಾರ್ವಜನಿಕರಿಗೆ ತಿಳಿಹೇಳಿ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಅಭಿವೃದ್ಧಿ ಅಧಿಕಾರಿಗೆ ಡಂಗುರು ಹಾಕಿಸಬೇಕೆಂದು ಹೇಳಿದರು.
ದಂಡೆಯ ಬದಿಯಲ್ಲಿರುವ ಎಲ್ಲಾ ಹಳ್ಳಿಗಳಿಗೆ ಮುಂಜಾಗೃತ ಕ್ರಮವಾಗಿ ನವಿಲುತೀರ್ಥ ಡ್ಯಾಮ್‌ನಿಂದ ಸುಮಾರು ೧೮ ಸಾವಿರ ಕ್ಯೂಸೆಕ್ಸ ನೀರು ಬಿಡಲಾಗಿದೆ. ಮುನ್ನೆಚ್ಚರಿಕೆಯವಾಗಿ ತಮ್ಮ ತಮ್ಮ ಮನೆಯಲ್ಲಿದ್ದ ದವಸ ಧಾನ್ಯ ಸಾಮಗ್ರಿಗಳು, ದನಕರುಗಳು, ಹೊಸ ಊರಿಗೆ ಸ್ಥಳಾಂತರ ಮಾಡಬೇಕೆಂದು ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆಯ ಸಚಿವರಾದ ಸಿ. ಸಿ. ಪಾಟೀಲರ ಆದೇಶದ ಮೇರೆಗೆ ಬಿಜೆಪಿ ಕಾರ್ಯಕರ್ತರನಾಗಿ ಜನರಿಗೆ ಜಾಗೃತಿ ಮೂಡಿಸಿಲು ಮೇಲ್ಕಂಡ ಹಳ್ಳಿಗಳಲ್ಲಿ ಸಂಚರಿಸಿ ಎಲ್ಲಾ ರೈತರಿಗೂ ಗ್ರಾಮೀಣ ಪ್ರದೇಶದಲ್ಲಿ ಅವರೆಲ್ಲರನ್ನು ಗ್ರಾಮದಲ್ಲಿ ತಮ್ಮ ತಮ್ಮ ಸಾಮಗ್ರಿಗಳನ್ನು ಕೂಡಲೇ ಹೊಸ ಊರಿಗೆ ಹೋಗಬೇಕೆಂದು ಹೇಳಿದರು
ವರದಿ: ವೀರಣ್ಣ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ