December 22, 2024

Bhavana Tv

Its Your Channel

ನರಗುಂದದಲ್ಲಿ ಹಳ್ಳಿಕೇರಿಮಠ ದಂಪತಿಗಳಿಗೆ ಸನ್ಮಾನ

ಗದಗ:ಖ್ಯಾತ ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ದಂಪತಿಗಳಿಗೆ ಶ್ರೀ ಸಾಯಿ ನಿತ್ಯ ದಾಸೋಹ ಕೇಂದ್ರದಲ್ಲಿ ಸನ್ಮಾನಿಸಲಾಯಿತು .ಅವರ ಪ್ರಥಮ ಮದುವೆಯ ವಾರ್ಷಿಕೋತ್ಸವದ ನಿಮಿತ್ತವಾಗಿ ಇಂದು ನರಗುಂದ ನಗರದಲ್ಲಿ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ಶ್ರೀ ಸಾಯಿ ನಿತ್ಯ ದಾಸೋಹ ಕೇಂದ್ರದ ಮುಖಾಂತರ ಗೆಳೆಯರ ಬಳಗದಿಂದ ಬಡ ರೋಗಿಗಳಿಗೆ ಹಾಗೂ ಅವರ ಸಂಬAಧಿಕರಿಗೆ ಅನ್ನದಾನ ಮಾಡುವ ಮುಖಾಂತರ ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಲಾಯಿತು .ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಸಂಜೀವಿನಿ ಹೆಲ್ತ್ ಪ್ರಾಡಕ್ಟ್ ನ ಸಹಾಯಕರಾದ ನಜೀರ್ ನದಾಫ್ ಅವರು ಸಂಜೀವಿನಿ ಪೌಷ್ಟಿಕ ಆಹಾರ ಹಾಗೂ ಹಾಲನ್ನು ವಿತರಿಸಲಾಯಿತು .ತದನಂತರ ಹಳ್ಳಿಕೇರಿಮಠ ದಂಪತಿಗಳಿಗೆ ಶ್ರೀಸಾಯಿ ನಿತ್ಯ ದಾಸೋಹ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು .ಸನ್ಮಾನದ ಕಾರ್ಯಕ್ರಮವನ್ನು ಸಾಯಿ ದಾಸೋಹ ಕೇಂದ್ರದ ಅಧ್ಯಕ್ಷರಾದ ಶ್ರಿ ಸುರೇಶ ಚೋಪ್ರಾ ಗೌರವ ಅಧ್ಯಕ್ಷರಾದ ವಿ ಎಸ್ ಕೆಂಚನಗೌಡರ ಉಪಾಧ್ಯಕ್ಷರಾದ ಚನ್ನು ಗಡ್ಡದ್ದೇವರಮಠ ದ್ಯಾಮಣ್ಣ ಮೇಗಲಮನಿ ಪ್ರಕಾಶ್ ಮರ ಬದ ರವಿ ಚಿಂತಾಲ ಶಿವಾನಂದ್ ಮೋಹಿತೆ ವಿ ಕೆ ಸಾಲಿಮಠ ನೆರವೇರಿಸಿದರು.
ವಿ ಕೆ ಸಾಲಿಮಠ

ವಿ ಕೆ ಸಾಲಿಮಠ

error: