December 21, 2024

Bhavana Tv

Its Your Channel

ದಲಿತ ಸಂಘಟನೆಯ ಸಂಚಾಲಕ ಮತ್ತು ಸಂಚಾಲಕರ ನೇಮಕ

ರೋಣ: ತಾಲೂಕಿನ ಲೋಕೋಪಯೋಗಿ ಇಲಾಖೆಯ ಮಂದಿರದಲ್ಲಿ ಜಿಲ್ಲಾ ಸಂಘಟನೆಯ ಸಂಚಾಲಕರು ಎನ್.ಎಸ್. ಬಳ್ಳಾರಿ ಇವರ ನಾಯಕತ್ವದಲ್ಲಿ ಸಭೆ ಮಾಡುವದರ ಮೂಲಕ ನೂತನ ತಾಲೂಕ ಸಂಚಾಲಕ ಮತ್ತು ತಾಲ್ಲುಕ ಸಂಘಟನೆಯ ಸಂಚಾಲಕರುಗಳ ನೇಮಕ ಮಾಡಿ ಆದೇಶವನ್ನು ಹೊರಡಿಸಿದ್ದರು.ಸಮುದಾಯದ ಜನರ ಕಷ್ಟ ನಷ್ಟಗಳನ್ನು ಅರಿತು ನಡೆಯುವುದಾಗಿ ಹಾಗೂ ನೊಂದವರ ನೋವುಗಳನ್ನು ಅರಿತು ಸೇವೆ ಮಾಡುವುದಾಗಿ ನೂತನ ಸಂಚಾಲಕ ಮತ್ತು ಸಂಘಟನೆ ಸಂಚಾಲಕರಿಗೆಎಚ್ಚರಿಕೆ ನೀಡುವದರ ಮೂಲಕವಾಗಿ ತಾಲೂಕಿನ ಅಧಿಕಾರ ವಹಿಸಿಕೂಟ್ಟರು. ನೂತನವಾಗಿ ಆಯ್ಕೆಯಾದ ರೋಣ ತಾಲೂಕ ದಲಿತ ಸಂಚಾಲಕ ಹನಮಂತ ಪೂಜಾರ ಹಾಗು ರೋಣ ತಾಲೂಕಿನ ಸಂಘಟನೆ ಸಂಚಾಲಕ ಸುರೇಶ್ ನಡುವಿನಮನಿ ಅಧಿಕಾರ ವಹಿಸಿಕೂಂಡ ರೋಣ ತಾಲೂಕಿನ ಮಾದಿಗ ದಂಡೂರ ನಾಯಕರುಗಳು ಸನ್ಮಾನ ಮಾಡುವದರ ಮೂಲಕವಾಗಿ ಸಂತಸ ವ್ಯಕ್ತಪಡಿಸಿದ್ದರು.
ಪ್ರಕಾಶ್ ಹೂಸಳ್ಳಿ, ವೀರಪ್ಪ ತೇಗಿನಮನಿ, ಮಾದಿಗ ದಂಡೋರ, ಜಿಲ್ಲಾ ಅಧ್ಯಕ್ಷರು ಮುತ್ತಪ್ಪ ಜೋಗನ್ನವರ, ಮುತ್ತಪ್ಪ ಪೂಜಾರ. ಶರಣಪ್ಪ ಪೂಜಾರ. ಶಿವ ಶಂಕರಪ್ಪ ಹಾದಿಮನಿ. ತಾಲ್ಲೂಕ ಲೋಕ ಶಿಕ್ಷಣ ಇಲಾಖೆಯ ಶಿಕ್ಷಕರು ಹಾಗು ಸಹ ಶಿಕ್ಷಕರು ಕಾರ್ಯಕ್ರಮದ ಮಾರ್ಗದರ್ಶಕರು ಆಗಿ ಭಾಗವಹಿಸಿದರು.
ಗಜೆಂದ್ರಗಡ ತಾಲ್ಲೂಕ ಸಂಚಾಲಕ ಮಾರುತಿ ಹಾದಿಮನಿ, ಪರಸಪ್ಪ ಯಾವಗಲ್ ಹೇಮಂತ ಕಡಿಯವರ, ಹಿರಿಯಪ್ಪ ಹಲಗಿ, ಬಸವರಾಜ ಹಲಗಿ, ಸಂಗಪ್ಪ ಹೂಸಮನಿ, ತಾಲ್ಲೂಕು ಅಧ್ಯಕ್ಷರು ಮಾದಿಗ ದಂಡೋರ, ಈರಪ್ಪ ಹಿರೇಮನಿ, ಶಿವಪ್ಪ ಮುಶಿಗೇರಿ ಅನೇಕ ಮುಖಂಡರು ಉಪಸ್ಥಿತರಿದರು.

ವರದಿ: ವೀರಣ್ಣ ರೋಣ

error: