December 20, 2024

Bhavana Tv

Its Your Channel

ಶಾಂತಗೇರಿ ಗ್ರಾ.ಪಂ ಮತ್ತೆ ಬಿಜೆಪಿ ಮಡಿಲಿಗೆ: ಅಧ್ಯಕ್ಷರಾಗಿ ಶರಣಮ್ಮ ಪಡಿಯಪ್ಪ ಗಡ್ಡಿ, ಉಪಾಧ್ಯಕ್ಷರಾಗಿ ಪಡಿಯಪ್ಪ ಕುಂಕದ ಆಯ್ಕೆ

ಬಿಜೆಪಿ ಭದ್ರಕೋಟೆ ಶಾಂತಗೇರಿ ಗ್ರಾ.ಪಂ ಮತ್ತೆ ಬಿಜೆಪಿ ಬೆಂಬಲಿತರ ಪಾಲಾಗಿದೆ. ಬುಧವಾರ ನಡೆದ ಅಧ್ಯಕ್ಷ , ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಶರಣಮ್ಮ ಪಡಿಯಪ್ಪ ಗಡ್ಡಿ, ಉಪಾಧ್ಯಕ್ಷರಾಗಿ ಪಡಿಯಪ್ಪ ಮರಿತಿಮ್ಮಪ್ಪ ಕುಂಕದ ತಲಾ ೧೩ ಮತಗಳನ್ನು ಪಡೆದು ಆಯ್ಕೆಯಾದರು.
ಶಾಂತಗೇರಿ ಗ್ರಾ.ಪಂ ಒಟ್ಟು ೨೦ ಗ್ರಾ.ಪಂ ಸದಸ್ಯರನ್ನು ಒಳಗೊಂಡಿದ್ದು, ಕಾಂಗ್ರೆಸ್ ಬೆಂಬಲಿತ ನಿರ್ಮೂಲ ಸಿ.ರಾಠೋಡ ಅಧ್ಯಕ್ಷ ಸ್ಥಾನಕ್ಕೆ, ಚಂದ್ರು ಠಾಕಪ್ಪ ಜಾಲಿಹಾಳ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿ, ೭ ಮತಗಳನ್ನು ಪಡೆದು ಪರಾಭವಗೊಂಡರು.
ಶಾAತಗೇರಿ ಗ್ರಾಮ ಪಂಚಾಯತಿಯ ಎದುರು ನೂರಾರು ಬಿಜೆಪಿ ಬೆಂಬಲಿಗರ ದಂಡು ಸೇರಿದ್ದರು, ಚುನಾವಣಾಧಿಕಾರಿ ಸಂತೋಷ ಪಾಟೀಲ ಅವರು ಫಲಿತಾಂಶ ಘೋಷಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಮತ್ತು ಮುಖಂಡರುಗಳು ಟಮಟೆ ವಾದ್ಯ, ಜೈಕಾರಗಳ ಕೂಗು ಮುಗಿಲು ಮುಟ್ಟಿತ್ತು, ನಂತರ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ನೂತನ ಗ್ರಾ.ಪಂ ಅಧ್ಯಕ್ಷೆ ಶರಣಮ್ಮ ಗಡ್ಡಿ ಮಾತನಾಡಿ, ಅಧಿಕಾರ ಬರುವುದು, ಹೋಗುವುದು ಕಾಕತಾಳಿಯವಷ್ಟೇ . ಅಧಿಕಾರದಲ್ಲಿದ್ದಾಗ ಜನರ ಕಷ್ಟಗಳಲ್ಲಿ ಪಾಲ್ಗೊಳ್ಳಬೇಕು. ಸಿಕ್ಕಿರುವ ಅವಕಾಶ ಸದ್ಭಳಕೆ ಮಾಡಿಕೊಂಡು ಉತ್ತಮ ಆಡಳಿತಕ್ಕೆ ಆದ್ಯತೆ ನೀಡಲಾಗುವುದು. ಗ್ರಾಮದಲ್ಲಿರುವ ಮೂಲ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಒದಗಿಸಲು, ಸರ್ಕಾರ ಸವಲತ್ತುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಪ್ರಾಮಾಣಿಕ ಶ್ರಮಿಸಲಾಗುವುದು. ಅಭಿವೃದ್ದಿ ಕಾಮಗಾರಿಗಳನ್ನ ಇನ್ನು ಮುಂದೆ ವೇಗ ನೀಡುವುದಾಗಿ ಭರವಸೆ ನೀಡಿದರು.

ಬಿಜೆಪಿ ಮುಖಂಡ ಅಶೋಕ ವನ್ನಾಲ ಮಾತನಾಡಿ, ಶಾಂತಗೇರಿ ಗ್ರಾ.ಪಂ ಬಿಜೆಪಿ ಪಕ್ಷದ ಭದ್ರಕೋಟೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಇಲ್ಲಿ ಸ್ವಚ್ಛಂದ , ಸುಭದ್ರ ಆಡಳಿತ ನಡೆಸಿದ್ದಾರೆ. ಈ ಬಾರಿಯೂ ಅಧಿಕಾರ ಗದ್ದುಗೆ ಏರುವ ವಿಶ್ವಾಸವಿತ್ತು ಆ ವಿಶ್ವಾಸವನ್ನು ಮೂಡಿಸಿದ್ದಾರೆ. ಬಿಜೆಪಿ ಪಕ್ಷಕ್ಕೆ ಚೈತನ್ಯವನ್ನು ತುಂಬಿದ್ದಾರೆ. ಇದು ವಿಜಯದ ಸಂಕೇತ. ಮುಂಬರುವ ತಾ.ಪಂ. ಜಿ.ಪಂ ಚುನಾವಣೆಗಳಲ್ಲಿ ಶಾಸಕ ಕಳಕಪ್ಪ ಬಂಡಿ ನೇತೃತ್ವದಲ್ಲಿ ಗೆಲ್ಲುವ ಮುನ್ಸೂಚನೆ. ಮುಂದೆ ಬಿಜೆಪಿ ಪಕ್ಷ ಸೋಲುವುದಕ್ಕೆ ನಾವು ಬಿಡುವುದಿಲ್ಲ

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಚಂದ್ರಶೇಖರ ನಾಗನೂರ, ನೀಲವ್ವ ಪರಮನಟ್ಟಿ, ಚಂದ್ರಶೇಖರ ಜಾಲಿಹಾಳ, ಪಡಿಯಪ್ಪ ಹುಲ್ಲಣ್ಣವರ, ನಿರ್ಮಲಾ ರಾಥೋಡ, ಜಯಶ್ರೀ ಜಾಲಿಹಾಳ, ಭೀಮಪ್ಪ ಲಮಾಣಿ, ಲಕ್ಷಿಂಬಾಯಿ ರಾಠೋಡ ಇತರರು ಇದ್ದರು.

ವರದಿ- ವೀರಣ್ಣ ಸಂಗಳದ ರೋಣ.

error: