December 22, 2024

Bhavana Tv

Its Your Channel

ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ ಸಚಿವ ಸಿ.ಸಿ.ಪಾಟೀಲ

ರೋಣ: ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ಚುನಾಯಿತ ಜನಪ್ರತಿನಿಧಿಗಳು ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸುವದರ ಮೂಲಕ ಗಾಂಧೀಜಿಯವರ ಗ್ರಾಮ ಸ್ವರಾಜ ಕನಸನ್ನು ನನಸಾಗಿಸಲು ಪ್ರಯತ್ನಿಸುವಂತೆ ರಾಜ್ಯ ಲೋಕೋಪಯೋಗಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ತಿಳಿಸಿದರು.

ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ೨೩೭೩ ಮನೆಗಳಿಗೆ೩೮೪ಲಕ್ಷ ಜಲಜೀವನ ಮೀಷನ್ ಯೋಜನೆಯ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಹಾಗೂ ಬೆನಹಾಳ ಗ್ರಾಮಗಳಲ್ಲಿ ೩೩೫ ಮನೆಗಳಿಗೆ ೫೫ ಲಕ್ಷ ಜಲಜೀವನ ಮೀಷನ್ ಯೋಜನೆಯ ಬೆನಹಾಳ ಗ್ರಾಮಕ್ಕೆ ಈಶ್ವರ ಸಮುದಾಯ ಭವನ ಅಂದಾಜು ೫ ಲಕ್ಷ ಭೂಮಿಪೂಜೆ ಸಮಾರಂಭ ಗ್ರಾಮೀಣ ಪ್ರದೇಶದ ಪ್ರತಿಯೊಂದು ಕುಟುಂಬಕ್ಕೂ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಮುಖ್ಯ ಉದ್ದೇಶದೊಂದಿಗೆ ಜಲ ಜೀವನ್ ಮೀಷನ್ ಯೋಜನೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು ಜಾರಿಗೊಳಿಸದ್ದು ಇದರಿಂದಾಗಿ ಮಹಿಳೆಯುರು ಕೊಡ ಹೊತ್ತು ಮೈಲುಗಟ್ಟಲೆ ನಡೆಯುವ ತಾಪತ್ರಯ ತಪ್ಪಲಿದೆ ಎಂದರು.

ಕೋವಿಡ್ ಸೊಂಕಿನಿAದಾಗಿ ಇಡೀ ಪ್ರಪಂಚದ ಆರ್ಥಿಕತೆ ಮೇಲೆ ಭೀಕರ ಪರಿಣಾಮ ಬೀರಿದ್ದು ಇದರಲ್ಲಿ ರಾಜ್ಯ ಸರ್ಕಾರದ ಆದಾಯವು ಕುಂಠಿತಗೊAಡಿದ್ದರೂ ಸಹ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮಗಳಿಗೆ ಮಂಜೂರಾಗುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಸ್ವ ಪ್ರತಿಷ್ಠೆಯನ್ನು ಬದಿಗೊತ್ತಿ ಗ್ರಾಮಗಳ ಅಭವೃದ್ಧಿಯತ್ತ ಗಮನಹರಿಸಲು ಸೂಚಿಸಿದರು.

ಮೂರನೇ ಅಲೆ ಈಗಾಗಲೇ ರಾಜ್ಯದ ಅಕ್ಕ ಪಕ್ಕದ ರಾಜ್ಯಗಳಲ್ಲಿ ಪ್ರಾರಂಭವಾಗಿದ್ದು ರಾಜ್ಯದಲ್ಲೂ ಇದರ ಪರಿಣಾಮ ಬೀರಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರು ಈ ಕುರಿತು ಅಗತ್ಯದ ಮುಂಜಾಗೃತಾ ಕ್ರಮಗಳಾದ ಕಡ್ಡಾಯ ಮಾಸ್ಕ ಧಾರಣೆ, ದೈಹಿಕ ಅಂತರ ಕಾಪಾಡಿಕೊಳ್ಳುವದು ಹಾಗೂ ಅನಾವಶಕವಾಗಿ ಮನೆಯಿಂದ ಹೊರ ಬರದೆ ಸಂಭಾವ್ಯ ಮೂರನೇ ಅಲೆಯನ್ನು ನಿಯಂತ್ರಿಸುವAತೆ ಸಾರ್ವಜನಿಕರಲ್ಲಿ ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿದರು.
ರೋಣ ತಾಲ್ಲೂಕು ಎಪಿಎಂಸಿ ಅಧ್ಯಕ್ಷರು ರಾಜನ ಹುಲಿ ನಿಂಗಪ್ಪ ಕೆಂಗಾರ ಜಗದೀಶ ಬ್ಯಾಡಗಿ ಮುತ್ತಣ್ಣ ಜಂಗಣ್ಣವರ ರೋಣ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ಜಗದೀಶ ಮಡಿವಾಳರ ಸೇರಿದಂತೆಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು ಮತ್ತು ಪಿಡಿಒಗಳು ಗ್ರಾಮಗಳ ಗಣ್ಯರು, ಸಾರ್ವಜನಿಕರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.

error: