December 21, 2024

Bhavana Tv

Its Your Channel

ರೋಣ ತಾಲ್ಲೂಕಿನಲ್ಲಿ ಶಾಲಾ ಕಾಲೇಜು ಆರಂಭ; ಮಕ್ಕಳ ಮುಖದಲ್ಲಿ ಇಮ್ಮುಡಿಗೊಂಡ ಖುಷಿ

ರೋಣ: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ತಾಲ್ಲೂಕಿನ ಶಾಲಾ – ಕಾಲೇಜುಗಳು ಒಂದೂವರೆ ವರ್ಷದ ಬಳಿಕ ಆರಂಭವಾದವು. ಸೋಮವಾರದ ಭೌತಿಕ ತರಗತಿಗಳಿಗೆ ಬಂದ ಮಕ್ಕಳ ಹಾಗೂ ಶಿಕ್ಷಕರ ಮುಖದಲ್ಲಿ ಸಂತೋಷ ಇಮ್ಮುಡಿಯಾಗಿತ್ತು.
ರೋಣ, ಬೆಳವಣಿಕಿ, ಹೊಳೆಆಲೂರ, ಮೆಣಸಗಿ, ಸವಡಿ, ಇಟಗಿ, ಹೊಸಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರೌಢಶಾಲೆ ಹಾಗೂ ಪಿಯುಸಿಯ ಭೌತಿಕ ತರಗತಿಗಳು ಆರಂಭವಾದವು. ಎಲ್ಲೆಡೆ ಮಕ್ಕಳಿಗೆ ಉಚಿತ ಮಾಸ್ಕ್ ವಿತರಣೆ ಮಾಡಿ, ತಿಳುವಳಿಕೆ ನೀಡಿ ನಂತರ ಸಿಹಿ ತಿನಿಸಿ ಸ್ವಾಗತಿಸಲಾಯಿತು.
ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಸಾವಿತ್ರಿ ಸಜ್ಜನ ಮಾತನಾಡಿ, ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ೧೪ಕ್ಕೂ ಹೆಚ್ಚು ಪ್ರೌಢಶಾಲೆಗಳಿಗೆ ನಮ್ಮ ತಂಡದೊAದಿಗೆ ಭೇಟಿ ಮಾಡಲಾಗಿದೆ ಹಾಗೂ ಭೌತಿಕ ತರಗತಿ ಆರಂಭಕ್ಕೆ ಕೈಗೊಂಡಿರುವ ವ್ಯವಸ್ಥೆಗಳ ಕುರಿತು ಪರಿಶೀಲನೆ ಮಾಡಲಾಗಿದೆ ಎಂದರು. ಉಳಿದ ಶಾಲೆಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ ಆದರೆ ಶಾಲಾ ಆರಂಭದ ಮೊದಲ ದಿನ ಯಾವುದೇ ರೀತಿಯ ಸಮಸ್ಯೆ ಕಂಡು ಬಂದಿಲ್ಲ ಎಂದರು. ಶಿಕ್ಷಕ, ಪಾಲಕ ಹಾಗೂ ಮಕ್ಕಳು ಮೂವರು ಶಾಲೆ ಆರಂಭಕ್ಕೆ ಖುಷಿಯಾಗಿದ್ದಾರೆ ಇದರಿಂದ ಮಕ್ಕಳ ಶಿಕ್ಷಕರ ಬಾಂಧವ್ಯ ಮತ್ತೆ ಗಟ್ಟಿಯಾಗಿದೆ ಎಂದರು.
ಕೊರೊನಾ ಮೂರನೇ ಅಲೆ ಬಗ್ಗೆ ಚರ್ಚೆ ನಡೀತಾ ಇದ್ದರೂ, ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅವರ ಭವಿಷ್ಯ ಹಾಳಾಗುತ್ತದೆ. ಮಕ್ಕಳಿಗೆ ಆರೋಗ್ಯದ ಜೊತೆಗೆ ಉತ್ತಮ ಶಿಕ್ಷಣವನ್ನು ಕೊಡಬೇಕಿದೆ. ಈ ನಿಟ್ಟಿನಲ್ಲಿ ಶಾಲೆ ಆರಂಭ ಮಾಡಿರುವುದು ಮಕ್ಕಳಿಗೆ ಸಹಕಾರಿಯಾಗಿದೆ ಎಂದು ಹೊಳೆಆಲೂರ ಗ್ರಾಮದ ಪಾಲಕ ಮಹಾಂತೇಶ ಚಲವಾದಿ ತಿಳಿಸಿದರು

ರೋಣ ನಗರದಲ್ಲಿ ಒಂದೂವರೆ ವರ್ಷದ ನಂತರ ಸೋಮವಾರ ಆರಂಭವಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳು ಖುಷಯಿಂದ ಪ್ರಾರ್ಥನೆ ಹಾಡಿದರು

ವರದಿ ವೀರಣ್ಣ ಸಂಗಳದ

error: