December 21, 2024

Bhavana Tv

Its Your Channel

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂಸದ ಬಿ. ವೈ.ರಾಘವೇಂದ್ರ

ರೋಣ: ದೇಶದ ಬೆಳವಣಿಗೆಗೆ ರೈತರ ಕೊಡುಗೆ ಅಪಾರವಿದೆ. ಅನ್ನದಾತರು ಮುನ್ನೆಡೆದರೆ ಮಾತ್ರ ದೇಶದ ಅಭಿವೃದ್ದಿ ಆಗುತ್ತದೆ. ಹಾಗಾಗಿ ಬಿಜೆಪಿ ಸರ್ಕಾರ ರೈತರ ಅಭಿವೃದ್ದಿಗೆ ಬದ್ದವಾಗಿದೆ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.

ತಾಲ್ಲೂಕಿನ ಸವಡಿ ಗ್ರಾಮದಲ್ಲಿ ಗುರುವಾರ ನಡೆದ ಎರೆಸೀಗಮ್ಮ ದೇವಿಯ ಸಮುದಾಯ ಭವನದ ಭೂಮಿ ಪೂಜೆ, ಎರೆಸೀಗಮ್ಮ ದಾರಿಯಲ್ಲಿ ಬರುವ ದೇವತಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಗೆ, ೩ ಕಿ.ಮೀ. ದೂರದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಜಲಜೀವನ್ ಮಿಷನ್ ಕಾಮಗಾರಿ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು,

ಫಾಸ್ಪರಿಕ್ ಆಮ್ಲ, ಅಮೋನಿಯಾ ಇತ್ಯಾದಿಗಳ ದರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳವಾಗಿದ್ದರು ಸಹ ರೈತರು ಹಿಂದಿನ ದರದಲ್ಲೇ ರಸಗೊಬ್ಬರ ಪಡೆಯಬೇಕು ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ ಎಂದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಮೊದಲ ಬಾರಿಗೆ ರೈತರ ಬ್ಯಾಂಕ್ ಖಾತೆಗೆ ಹಣ ಪಾವತಿಸಲಾಗುತ್ತಿದ್ದು ಇದರಿಂದ ರೈತರು ಯಾವುದೇ ಸಂಕಷ್ಟಕ್ಕೆ ಒಳಗಾಗದೆ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಿ ಸ್ವಾಭಿಮಾನದ ಬದುಕು ಸಾಗಿಸಲು ಅನುಕೂಲವಾಗಿರುವ ವಾತಾವರಣ ಸೃಷ್ಟಿಯಾಗಿದೆ ಎಂದು ತಿಳಿಸಿದರು

ಲೊಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ನಾಡಿನ ಅಭಿವೃದ್ದಿಯ ಹರಿಕಾರ ಎಂದೇ ಹೆಸರು ಪಡೆದಿರುವ ಬಿ.ಎಸ್. ಯಡಿಯೂರಪ್ಪನವರು ನಮಗೆ ಅಭಿವೃದ್ದಿ ಕೆಲಸಗಳ ಮೂಲಕ ಮಾತನಾಡಿ ಎಂದು ಹೇಳುತ್ತಿದ್ದರು. ಅವರ ಮಾರ್ಗದರ್ಶನದಂತೆ ಸಮಗ್ರ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಾ ಮತದಾರರ ಋಣ ತಿರಿಸುವ ಪ್ರಯತ್ನ ಮಾಡುತ್ತಿದ್ಧೇವೆ ಎಂದರು.

ತಂದೆಯAತೆ ಮಿಡಿಯುವ ಸಂಸದ ರಾಘವೇಂದ್ರ ಅವರು ನಮ್ಮ ಭಾಗದ ಎರೆಸೀಗಮ್ಮ ದೇವಿಯ ಸಮುದಾಯ ಭವನ ನಿರ್ಮಾಣಕ್ಕೆ ಹಾಗೂ ರಸ್ತೆ ಅಭಿವೃದ್ದಿಗೆ ರೂ. ೩ ಕೋಟಿ ಅನುದಾನ ನೀಡಿರುವುದು ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಬಿ. ವೈ. ರಾಘವೇಂದ್ರ, ಅವರ ಪತ್ನಿ ತೇಜಸ್ವಿನಿ ಎರೆಸೀಗಮ್ಮ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೋಣ ಶಾಸಕ ಕಳಕಪ್ಪ ಜಿ. ಬಂಡಿ, ಎಪಿಎಂಸಿ ಅಧ್ಯಕ್ಷ ರಾಜಣ್ಣ ಹೂಲಿ, ಬಿಜೆಪಿ ರೋಣ ಮಂಡಳ ಅಧ್ಯಕ್ಷ ಮುತ್ತಣ್ಣ ಕಡಗದ, ಶಿವಬಸವ ಬೆಲ್ಲದ, ಶ್ರೀ ಶೆಲ್ ಇಟಗಿ ಬಿ ಎಸ್ ನರೇಗಲ್ ಅಶೋಕ್ ಪವಾಡ ಶೆಟ್ಟರ ಮುತ್ತಣ್ಣ ಗದಗ, ಮುತ್ತಣ್ಣ ಲಿಂಗಣಗೌಡ್ರ, ಶಿವಾನಂದ ಜಿಡ್ಡಿಬಾಗಿಲ, ಅಶೋಕ ನವಲಗುಂದ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಪಿಡಿಒಗಳು ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ

error: