December 22, 2024

Bhavana Tv

Its Your Channel

ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ಅಪಾರ

ರೋಣ: ಶೈಕ್ಷಣಿಕ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ನೀಡಿದಷ್ಟು ಮಹತ್ವ ಬೇರಾವ ಸರ್ಕಾರಗಳೂ ನೀಡಿಲ್ಲ. ಅದರಲ್ಲೂ ರೋಣ ಕ್ಷೇತ್ರದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಶೈಕ್ಷಣಿಕ ಕ್ರಾಂತಿ ಆಗಿದೆ ಎಂದು ಶಾಸಕ ಕಳಕಪ್ಪ ಜಿ. ಬಂಡಿ ಹೇಳಿದರು.

ತಾಲ್ಲೂಕಿನ ಹಿರೇ ಅಳಗುಂಡಿಯಲ್ಲಿ ಮತ್ತು ಪ್ಯಾಟಿಯಲ್ಲಿ ನಿರ್ಮಿಸಲಾದ ಸರ್ಕಾರಿ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮತ್ತು ಲಕ್ಕಲಕಟ್ಟಿ ಗ್ರಾಮದಲ್ಲಿ ಶಾಲಾ ಕೊಠಡಿ ಭೂಮಿಪೂಜೆ ನೆರವೇರಿಸಿದರು ಮಾತನಾಡಿದರು,
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಅಭಿವೃದ್ದಿ ದೃಷ್ಟಿಯಿಂದ ಗುಣಮಟ್ಟದ ಅಕ್ಷರಭ್ಯಾಸ ದೊರಕುವಂತಾಗಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವುದು ಸವಾಲಿನ ಕೆಲಸವಾಗಿದೆ. ಶಿಕ್ಷಕರು, ಪಾಲಕರು, ಸಂಬAಧಿಸಿದ ಇಲಾಖೆಯವರು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುವುದು ಅವಶ್ಯವಿದೆ ಎಂದರು.
ಎಸ್. ಡಿ. ಎಂ. ಸಿ ಅಧ್ಯಕ್ಷ ಮಂಜಪ್ಪ ಭೀಮಪ್ಪ ಕುಂಕದ, ರೋಣ ಮಂಡಳ ಅಧ್ಯಕ್ಷ ಮುತ್ತಣ್ಣ ಕಡಗದ, ಬೀಜ ನಿಗಮದ ಅಧ್ಯಕ್ಷ ಬಸವರಾಜ ಬೆಲ್ಲದ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನ, ಬಿ.ಆರ್.ಸಿ ಎಲ್. ಕೆ. ಗಡಗಿ, ಎಂ. ಪಿ. ಪಾಟೀಲ ಇದ್ದರು.

ವಿರಣ್ಣ ಸಂಗಳದ ರೋಣ

error: