December 22, 2024

Bhavana Tv

Its Your Channel

ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ-ಸಂತೋಷ ಪಾಟೀಲ

ಕೊತಬಾಳ ಗ್ರಾ.ಪಂ.ಗೆ ಕಸ ವಿಲೇವಾರಿ ವಾಹನ ಹಸ್ತಾಂತರ

ರೋಣ: ಗ್ರಾಮದ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಪ್ರತಿಯೊಬ್ಬರ ಪಾತ್ರ ತುಂಬಾ ಇದೆ. ಈ ನಿಟ್ಟಿನಲ್ಲಿ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಂಡಲ್ಲಿ ಮಾತ್ರ ರೋಗಗಳಿಂದ ದೂರವಿರಲು ಸಾಧ್ಯವಿದೆ ಎಂದು ರೋಣ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ಹೇಳಿದರು.

ಸ್ವಚ್ಚ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಗ್ರಾಮ ಪಂಚಾಯ್ತಿಗಳಿಗೆ ಖರೀದಿಸಲಾದ ಕಸ ವಿಲೇವಾರಿ ವಾಹನವನ್ನು ತಾಲ್ಲೂಕಿನ ಕೊತಬಾಳ ಗ್ರಾಮ ಪಂಚಾಯ್ತಿಗೆ ಸೋಮವಾರ ಹಸ್ತಾಂತರಿಸಿ ಮಾತನಾಡಿದರು.

ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆಯದೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಚರಂಡಿ ನೀರು ಸರಾಗವಾಗಿ ಹರಿದುಹೊಗುವಂತೆ ಸ್ಥಳೀಯರು ಜಾಗೃತಿ ವಹಿಸಬೇಕು ಎಂದರು. ಕೊತಬಾಳ, ಮುಗಳಿ, ತಳ್ಳಿಹಾಳ ಗ್ರಾಮಗಳು ಸೇರಿದಂತೆ ಕೊತಬಾಳ ಗ್ರಾಪಂಗೆ ಕಸ ವಿಲೇವಾರಿ ವಾಹನವನ್ನು ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷ ವೀರಣ್ಣ ಯಾಳಗಿ ಮಾತನಾಡಿ, ಗ್ರಾಮದ ಜನರು ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು ಕಸವನ್ನು ಬೇಕಾಬಿಟ್ಟಿ ಜಾಗದಲ್ಲಿ ಹಾಕಬಾರದು ಎನ್ನುವ ಉದ್ದೇಶದಿಂದ ಓಣಿಗೆ ಒಂದರAತೆ ದೊಡ್ಡ ಗಾತ್ರದ ಕಸ ತುಂಬುವ ಡಬ್ಬಿಯನ್ನು ಇಡಲಾಗಿದೆ ಹಾಗೂ ಮನೆಗೆ ಎರಡು ಕಸದ ಬುಟ್ಟಿಗಳನ್ನು ನೀಡಲಾಗಿದೆ ಎಂದರು. ಹಸರೀಕರಣಕ್ಕೆ ಮಹತ್ವ ನೀಡಿರುವ ಉದ್ಧೇಶದಿಂದ ೩ ಸಾವಿರ ಸಸಿಗಳನ್ನು ಬೆಳೆಸುವ ಪ್ರತಿಜ್ಞೆ ಮಾಡಲಾಗಿದೆ ಎಂದರು. ಮಾದರಿ ಗ್ರಾಮ ಪಂಚಾಯ್ತಿಯನ್ನಾಗಿ ಮಾಡುವ ಮೂಲಕ ಎಲ್ಲರೂ ಸೇರಿ ಗಾಂಧೀಜಿಯವರ ಕನಸ್ಸನ್ನು ನನಸು ಮಾಡೋನ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಗಂಗಾಧರ ಸ್ವಾಮೀಜಿ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಪಾರ್ವತೆವ್ವ ಬಿಸಾಟಿ, ಮುತ್ತಪ್ಪ ಅಸೂಟಿ, ಮುತ್ತಣ್ಣ ಪಲ್ಲೇದ, ಬಸೆಟ್ಟಪ್ಪ ಅಂಗಡಿ, ಚಂದ್ರಶೇಖರ ಪಾಗದ, ಎಸ್. ಆರ್. ಸಂಕಣ್ಣವರ, ಕಲ್ಪನಾ ಕಡಗದ, ಕಮಲವ್ವ ಕೋಡಿಕೊಪ್ಪ, ಕಾಳಿಂಗಪ್ಪ ಉಪ್ಪಾರ ಇದ್ದರು.

ವರದಿ ವೀರಣ್ಣ ಸಂಗಳದ ತಾಲ್ಲೂಕಾ ವರದಿಗಾರ

error: