December 20, 2024

Bhavana Tv

Its Your Channel

ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡಲು ಆಗ್ರಹ

ರೋಣ: ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆಯ ಪದಾಧಿಕಾರಿಗಳು ಶಾಸಕರ ಜನಸಂಪರ್ಕ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.

ಈ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ರೋಣ ತಾಲ್ಲೂಕಾ ಅಧ್ಯಕ್ಷ ಮುತ್ತಣ್ಣ ಪವಾಡಶೆಟ್ಟರ, ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ರಾಜಕಾರಣಿಗಳು ನಡೆಸುವ ಜನಶ್ರೀರ್ವಾದ ಯಾತ್ರೆಯಲ್ಲಿ ಕೊರೊನಾ ಬರುವುದಿಲ್ಲ ಆದರೆ ಹಿಂದೂಗಳು ಸರ್ಕಾರದ ಕೋವಿಡ್ ನಿಯದಡಿ ಹಬ್ಬ ಆಚರಣೆ ಮಾಡುತ್ತೇವೆ ಎಂದರೆ ಸೋಂಕು ಹರಡುವ ನೆಪವೊಡ್ಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾಯಿತ ಪ್ರತಿನಿಧಿಗಳು ಲಕ್ಷಾಂತರ ಜನರು ಸೇರಿಸಿ ಮಾಡುವ ಸಭೆ, ಸಮಾರಂಭಗಳಿಗೆ ಕಡಿವಾಣ ಹಾಕದೇ ಸಾರ್ವಜನಿಕ ಗಣಪತಿಗೆ ಕಡಿವಾಣ ಹಾಕುತ್ತಿರುವುದು ಖಂಡನೀಯ. ಈ ಹಬ್ಬವು ಜನರ ಸಂಸ್ಕೃತಿಯಾಗಿದೆ, ಭಾವನೆಗಳ ಆಗರವಾಗಿದೆ ಆದ್ದರಿಂದ ಸರ್ಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಪ್ರತಿಭಟನೆಗೆ ಮಣಿಯದೇ ಇದ್ದರೆ ಉಗ್ರವಾದ ಹೋರಾಟಕ್ಕೆ ಮುಂದಾಗುತ್ತೇವೆ ಹಾಗೂ ಯಾವುದೇ ಕಾರಣಕ್ಕೂ ಹಬ್ಬದ ಆಚರಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಮೇಶ ಆದಿ, ರಾಕೇಶ ಹೊಸೂರ , ಹುಲ್ಲಪ್ಪ ಕೆಂಗಾರ , ಅಮರೇಶ ಜಾಲಿಹಾಳ , ಸಚಿನ ಹಡಗಲಿ , ನ್ಯಾಮದೇವ ಆರ್ಯರ , ಯಚ್ಚರಪ್ಪ ಬಾರಕೇರ, ರಮೇಶ ಕೊಪ್ಪದ, ಮಹೇಶ ಮೇಗೂರ ಇದ್ದರು.

ವರದಿ ವೀರಣ್ಣ ಸಂಗಳದ

error: