December 22, 2024

Bhavana Tv

Its Your Channel

ಸುದೀಪ್ ಅಭಿಮಾನಿ ಬಳಗದಿಂದ ಕಿಚ್ಚ ಸುದೀಪ್ ಹುಟ್ಟುಹಬ್ಬ ಆಚರಣೆ

ರೋಣ ಸುದೀಪ್ ಅಭಿಮಾನಿ ಬಳಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಪಟ್ಟಣದಲ್ಲಿ ಇಂದು ಹಲವು ಸೇವಾ ಕಾರ್ಯಗಳ ಮೂಲಕ ಅರ್ಥ ಪೂರ್ಣವಾಗಿ ಆಚರಿಸಿದರು. ಕಿಚ್ಚ ಸುದೀಪ್ ವತಿಯಿಂದ ಸಂಘದ ಅಭಿಮಾನಿಗಳು ಮೊದಲಿಗೆ ಪಟ್ಟಣದ ಹೊರವಲಯದ ಪಾಂಡುರAಗ ವಿಠಲನಗುಡಿ ಹನುಮಂತ ದೇವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುದೀಪ್ ಅವರಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಕಿಚ್ಚನ ಪರ ಜಯಘೋಷಗಳನ್ನು ಮೊಳಗಿಸಿದರು.
ನಂತರ ಸುದೀಪ್ ಅವರ ಜನ್ಮದಿನ ಹಲವಾರು ಅಭಿಮಾನಿಗಳು ತಮ್ಮ ಪಟ್ಟಣದ ಶಾರದಾ ಬಾಲಕಿಯರ ಪ್ರೌಢಶಾಲೆ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಿದರು. ನಂತರ ಕೇಕ್ ಕತ್ತರಿಸಿ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿ ಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ ಕಡಿವಾಲ ಸ್ಯಾಂಡಲ್ ವುಡ್ ಅಷ್ಟೇ ಅಲ್ಲದೇ ಬಾಲಿವುಡ್ ಸಿನಿಮಾಗಳಲ್ಲೂ ತಮ್ಮ ಅಮೋಘ ಅಭಿನಯದ ಮೂಲಕ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸುತ್ತಿರುವ ನಮ್ಮ ಆರಾಧ್ಯ ದೈವ ಕಿಚ್ಚ ಸುದೀಪ್ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮ ದಲ್ಲಿ ಸಂಘಟನೆಯ ಪದಾಧಿಕರು ಪ್ರಮೋದ ಕಡಿವಾಲ ವಿನೋದ ಕಡಿವಾಲ ರಮೇಶ ತಳವಾರ ಮಂಜು ಸಾಗರ ಸಂಜು ರಾಗು ಅನಿಲ ಕಿರಣ ಮಾರುತಿ ಪ್ರತಾಪ ಆಸಿಫ್ ಮತ್ತು ರವಿ ಮಹದೇವ ತೆಗ್ಗಿನಮನಿ ಯಮನೂರಪ್ಪ ಭಜಂತ್ರಿ ಮತ್ತಿತರರು ಪಾಲ್ಗೊಂಡಿದ್ದರು

ವರದಿ ವೀರಣ್ಣ ಸಂಗಳದ

error: