ಗಜೇಂದ್ರಗಡ: ಗುರುವಿನ ಮಹತ್ವ ವಿದ್ಯಾರ್ಥಿಗಳಿಗೆ ಅರ್ಥವಾಗಬೇಕು. ವಿದ್ಯಾರ್ಥಿಯಲ್ಲಿನ ಜ್ಞಾನದ ಹಂಬಲ ಗುರುವಿಗೆ ಅರ್ಥವಾಗಬೇಕು. ಗುರು-ಶಿಷ್ಯರ ನಡುವೆ ಅವಿನಾಭಾವ ಸಂಬoಧವಿರಬೇಕು ಎಂದು ಪ್ರಾಚಾರ್ಯ ವಸಂತರಾವ್ ಆರ್. ಗಾರಗಿ ಹೇಳಿದರು.
ಪಟ್ಟಣದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಆಚರಣೆ ಮಾಡಲಾದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,
ಗುರು-ಶಿಷ್ಯರ ಸಂಬAಧ ತಾಯಿ-ಮಗುವಿನ ಸಂಬoಧದ0ತೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಪರಿಸರ ಕೊಡುವುದು ಗುರುವಿನ ಆದ್ಯತೆ. ವಿದ್ಯಾರ್ಥಿಯ ಬದುಕಿನ ಸಾರ್ಥಕತೆಯ ಹಿಂದೆ ಗುರುವಿನ ಶ್ರಮವಿದೆ ಎಂದರು. ಆದರೆ ಬದುಕು ಕಟ್ಟಿಕೊಂಡ ಮೇಲೆ ಅದನ್ನು ಒಳ್ಳೆಯದಕ್ಕೆ ಸದುಪಯೋಗ ಪಡಿಸಬೇಕು. ಸ್ವಾರ್ಥಕ್ಕಿಂತ ನಿಸ್ವಾರ್ಥ ಸೇವೆಗೆ ಹೆಚ್ಚು ಬೆಲೆ ಇದೆ. ವಿದ್ಯಾರ್ಥಿಗಳು ಗುರುವಿಗೆ ಶಾಲು, ಹೂಹಾರ, ಹಣ್ಣು ನೀಡುವುದಕ್ಕಿಂತ ತಮ್ಮ ಜೀವನದಲ್ಲಿ ಉತ್ತಮ ಪ್ರಜೆಯಾಗಿ ಬಾಳುವುದೇ ದೊಡ್ಡ ಗೌರವ ಎಂದರು.
ಭೌತಶಾಸ್ತ್ರದ ಉಪನ್ಯಾಸಕ ಸಂಗಮೇಶ ಎಸ್. ಬಾಗೂರ ಮಾತನಾಡಿ, ವಿದ್ಯಾರ್ಥಿಯನ್ನು ಭವಿಷ್ಯದ ಬದುಕಿಗೆ ಸಿದ್ಧಗೊಳಿಸುವ ಶಕ್ತಿ ಗುರುವಿಗಿದೆ. ಗುರುವಿನ ಸೇವೆಯ ಪ್ರಾಮಾಣಿಕತೆಯಿಂದ ಈ ದೇಶಕ್ಕೆ ಒಳ್ಳೆಯದನ್ನು ನೀಡಲು ಸಾಧ್ಯವಿದೆ ಎಂದರು. ವಿದ್ಯಾರ್ಥಿ ಜೀವನದಲ್ಲಿ ಕಂಡ ಕನಸುಗಳು ನನಸಾದಾಗ ಸಮಾಜ ಹಾಗೂ ದಾರಿ ತೋರಿದ ಕುಟುಂಬವನ್ನು ಮರೆಯಬಾರದು ಎಂದರು. ನಮ್ಮ ಬದುಕಿಗೆ ಶಿಕ್ಷ ಣ ಬಾಳು ನೀಡಿದಂತೆ, ಶೆಕ್ಷಣಿಕ ಸೌಲಭ್ಯದಿಂದ ವಂಚಿತರಾದವರಿಗೆ ಸೌಲಭ್ಯ ಒದಗಿಸಲು ಮುಂದಾಗಬೇಕು. ಸಮಾಜ ಸೇವೆಯಲ್ಲಿ ಸಿಗುವ ಸುಖ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಸಮಾಜ ಸೇವೆಗಾಗಿ ಒಂದಷ್ಟು ಸಮಯ ಕೊಡಿ ಎಂದರು.
ಪದವಿ ಪ್ರಾಚಾರ್ಯ ಬಸಯ್ಯ ಎಸ್. ಹಿರೇಮಠ ಮಾತನಾಡಿ, ಗುರುವಿನ ಋಣ ಎಷ್ಟೂ ತಿರಿಸಿದರೂ ಸಾಲದು. ತಾಯಿಯೇ ಮೊದಲ ಗುರು. ಶಾಲೆಯಲ್ಲಿ ಶಿಕ್ಷಕ ಗುರು ಆದರೆ ಜೀವನಪದ್ಧತಿ ಜೀವಿಸುವ ಕಲೆ ಗುರುವಿನಿಂದ ದೊರಕುತ್ತದೆ. ಅಲ್ಲದೇ ಮಾನವನನ್ನು ಮಹಾ ಮಾನವನ್ನಾಗಿ ಮಾಡುವವರು ಸದ್ಗುರುಗಳು ಎಂದರು. ಶಿಕ್ಷಕರ ಒಳ್ಳೆಯ ಮಾತುಗಳು ವಿದ್ಯಾರ್ಥಿಗಳ ಸಾಧನೆಗೆ ಸ್ಫೂರ್ತಿ ನೀಡುತ್ತದೆ ಹಾಗೂ ಅವರು ಉನ್ನತ ಗುರಿಯತ್ತ ಸಾಗಲು ಪೂರಕವಾಗುತ್ತದೆ ಎಂದರು,
ಈ ಸಂದರ್ಭದಲ್ಲಿ ಗೋಪಾಲ ಟಿ. ರಾಯಬಾಗಿ, ಆರ್. ಪಿ. ಹೊಳಗಿ, ಬಾಲಚಂದ್ರ ವಾಲ್ಮೀಕಿ, ರಸೂಲ್ ಚಾಮಲಾಪುರ, ಆನಂದ ಎಸ್. ಜೂಚನಿ, ಸಂಗಮೇಶ ವಸ್ತ್ರದ, ಎಸ್. ಬಿ. ಕರಬಾಶೆಟ್ಟರ, ಶಾಂತಯ್ಯ ಬೆಳವಣಿಕಿಮಠ, ಬೋದಕ-ಬೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು. ಗಜೇಂದ್ರಗಡ ಪಟ್ಟಣದ ಶ್ರೀ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು
ವರದಿ ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ