December 21, 2024

Bhavana Tv

Its Your Channel

ಸಾಂಕ್ರಾಮಿಕ ಸಂಕಷ್ಟದ ನಡುವೆಯೂ ವೈದ್ಯರ ಕೊಡುಗೆ ಅಪಾರ-ಶಾಸಕ ಕಳಕಪ್ಪ ಜಿ. ಬಂಡಿ

ರೋಣ: ಕೋವಿಡ್ ಸಾಂಕ್ರಾಮಿಕದಲ್ಲಿ ಸಾವಿನ ಭಯ ಇದ್ದರೂ, ತಮ್ಮ ಮತ್ತು ತಮ್ಮ ಕುಟುಂಬದವರ ಸುರಕ್ಷತೆಯನ್ನು ಗಣನೆಗೆ ತೆಗೆದುಕೊಳ್ಳದೆ ವೈದ್ಯರು ಜನರಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಅವರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಕಳಕಪ್ಪ ಜಿ. ಬಂಡಿ ಹೇಳಿದರು.
ಪಟ್ಟಣದಲ್ಲಿ ಭಾರತೀಯ ವೈದ್ಯಕೀಯ ಸಂಘದ ರೋಣ ಶಾಖೆಯ ಮೊದಲ ಮಹಡಿಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು,
ಇಂದಿನ ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎಲ್ಲಾ ಅಪಾಯಗಳನ್ನು ಎದುರು ಹಾಕಿಕೊಂಡು ಜನರಿಗೆ ಚಿಕಿತ್ಸೆ ನೀಡಲು ವೈದ್ಯರು ದಿನವಿಡೀ ದುಡಿಯುತ್ತಿದ್ದಾರೆ ಎಂದರು. ಆದಕಾರಣ ಪ್ರತಿಯೊಬ್ಬರ ಪಾಲಿಗೆ ದೇವರಾಗಿ ಕಾಣುತ್ತಾರೆ ಎಂದರು.

ರೋಣ ಪಟ್ಟಣದಲ್ಲಿ ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕಾ ಶಾಖೆಯ ಮೊದಲ ಮಹಡಿಯ ಕಟ್ಟಡವನ್ನು ಉದ್ಘಾಟಿಸಲಾಯಿತು. ಶಾಸಕ ಕಳಕಪ್ಪ ಜಿ. ಬಂಡಿ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಡಾ. ಎಸ್. ಬಿ. ಲಕ್ಕೋಳ, ಡಾ. ಆರ್. ಜಿ. ಮಲ್ಲಾಪುರ, ಡಾ. ಎಂ. ವೆಂಕಟಾಚಲಪತಿ, ಡಾ ಎಲ್. ಡಿ. ಬಾಕಳೆ, ಡಾ. ಜಿ. ಕೆ. ಕಾಳೆ, ಡಾ. ಎಚ್. ಎಲ್. ಗಿರಡ್ಡಿ, ಡಾ. ಕೆ. ಬಿ. ಧನ್ನೂರ್, ಡಾ. ಕೃಷ್ಣ ಕಾಳೆ, ಎಂ. ಎ. ತರಪದಾರ, ಮಂಜು ಕೊಪ್ಪದ, ಅಶೋಕ ನವಲಗುಂದ, ವಿರೂಪಾಕ್ಷಗೌಡ ಪಾಟೀಲ ಇದ್ದರು.

ವರದಿ ವೀರಣ್ಣ ಸಂಗಳದ

error: