ರೋಣ: ಬ್ಯಾಂಕಿನಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆ ಮತ್ತು ದೌರ್ಜನ್ಯವನ್ನು ನಿಲ್ಲಿಸಿಕನ್ನಡದಲ್ಲಿ ಎಲ್ಲಾ ರೀತಿಯ ಸೇವೆಯನ್ನು ಕೊಡಲು ಒತ್ತಾಯಿಸುವ ಆಗ್ರಹ ಪತ್ರ ವನ್ನು ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಮೂಲಕ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ
ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಕಾರ್ಯನಿರ್ವಹಿಸುತ್ತಿರುವ ಹಿಂದಿ ಭಾಷಾ ಸಿಬ್ಬಂದಿಗಳನ್ನುಕೂಡಲೇ ಅವರನ್ನು ಬೇರೆ ಕಡೆ ವರ್ಗಾಯಿಸಿ ನಮ್ಮ ಕನ್ನಡದ ದೇಶಾಭಿಮಾನದ ಕನ್ನಡಿಗರನ್ನು ಸೇವೆಗೆಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯವರು ಪ್ರತಿಭಟನೆ ನಡೆಸಿದರ ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಮಂಡಿಸಿದರು
ಬ್ಯಾಂಕಿನ ಎಲ್ಲಾ ಸೇವೆಗಳು ಕನ್ನಡದಲ್ಲಿ ನೀಡಬೇಕು ಕನ್ನಡದಲ್ಲಿ ವ್ಯವಹಾರ ನಡೆಸಲು ಸುಲಭವಂತೆ ಕರ್ನಾಟಕದವರ ನೇಬ್ಯಾಂಕಿನ ಉದ್ಯೋಗಿಗಳಾಗಿ ನೇಮಿಸಬೇಕು
ಕನ್ನಡದ ಬಾರದ. ಸಿಬ್ಬಂದಿಗಳನ್ನು ಕೂಡಲೇ ಅವರ ಮಾತೃ ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು. ಕರ್ನಾಟಕದ ಉದ್ಯೋಗಗಳನ್ನು ಕನ್ನಡಿಗರೇ ಲಭಿಸಬೇಕು. ಬ್ಯಾಂಕಿನ ಎಲ್ಲಾ ಕಾಗದ ಪತ್ರಗಳು ಕನ್ನಡದಲ್ಲಿ ನಮೂದಿಸಿರಬೇಕು
ಹಿಂದಿ ದಿವಸ ಹಿಂದೀ ಸಪ್ತಾಹ ಇಂಥ ಆಚರಣೆಗಳನ್ನು ಕೂಡಲೇ ಸರ್ಕಾರ ಕೈಬಿಡಬೇಕು ಹಿಂದಿ ಆಚರಣೆ ಯಾವುದೇ ನೌಕರರು ಮಾಡಬಾರದು ಎಂದು ಒತ್ತಾಯಿಸಿದರು ಬ್ಯಾಂಕಿನ ನಾಮಫಲಕ. ಸೂಚನಾ ಫಲಕ.ಶೇಕಡ ೬೦ ರಷ್ಟು ಭಾಗ ಕನ್ನಡದಲ್ಲಿ ಬಳಸಬೇಕು ಎಂದು ಮನವಿ ಮೂಲಕ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಉಮೇಶ್ ಮೇಟಿಗದಗ ಜಿಲ್ಲಾ ಉಪಾಧ್ಯಕ್ಷರು ಕರವೇ. ನಿಂಗಪ್ಪ ಹೊನ್ನಾಪುರ ಗದಗ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು. ಹನುಮಂತ ಪೂಜಾರ್ ಶಿವರಾಜ್ ಹೊಸಮನಿ ಶರಣಪ್ಪ ಕರ್ಮುಡಿ.ಮಲ್ಲಿಕಾರ್ಜುನ ಮುಧೋಳ. ಬಿಬಿಜಾನ ಕದಡಿ. ಬಿಬಿ ಸ್ಥಾವರಮಠ, ಬಿಎಚ್ ರೆಡ್ಡರ್ ಶರಣಪ್ಪಕುರಿ, ಶರಣಪ್ಪ ಉಪ್ಪಾರ್, ಪರಶುರಾಮ್ ಮಾರನಬಸರಿ, ಶರಣಪ್ಪ ರೆಡ್ಡೇರ, ಬಸವರಾಜ ಅಬ್ಬಿಗೇರಿ, ಇನ್ನೂ ಅನೇಕ ಕಾರ್ಯಕರ್ತರುಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ