May 8, 2024

Bhavana Tv

Its Your Channel

ಪುರಸಭೆ ವ್ಯಾಪ್ತಿ ಸದಸ್ಯರ ಬೇಡಿಕೆ ಆಧಾರದ ಮೇಲೆ ಶೌಚಾಲಯ ನಿರ್ಮಾಣ

ರೋಣ :-ನಗರದ ಪುರಸಭೆ ವ್ಯಾಪ್ತಿಯಲಿ ಬರುವ ನಗರದ ೧ರಿಂದ ೬ವಾರ್ಡಿಗೆ ಅನುಕೂಲ ಆಗುವ ದೃಷ್ಟಿಯಿಂದ ಹಾಗೂ ನಗರದ ನಾಗರಿಕರಿಗೆ ಸ್ವಚ್ಛತೆಗೆ ಆದ್ಯತೆ ನೀಡುವ ಸಲುವಾಗಿ ಶೌಚಾಲಯ ನಿರ್ಮಾಣಕ್ಕೆ ಪುರಸಭೆ ವ್ಯಾಪ್ತಿ ಸದಸ್ಯರ ಬೇಡಿಕೆ ಆಧಾರದ ಮೇಲೆ ಶೌಚಾಲಯ ನಿರ್ಮಿಸಿರುವುದು ಆಯಾ ವಾರ್ಡ ಸದಸ್ಯರ ಪಾತ್ರವು ಬಹಳ ಮಹತ್ವದಾಗಿದೆ. ರೋಣ ಪುರಸಭೆಯ ಅಧ್ಯಕ್ಷರು ವಿದ್ಯಾ ಎಸ್ ದೊಡ್ಡಮನಿ ಇವರ ಸಹಯೋಗದಲ್ಲಿ ೧ರಿಂದ ೬ವಾರ್ಡಿನ ಶೌಚಾಲಯ ಉದ್ಘಾಟನೆ ಕಾರ್ಯಕ್ರಮ ಜರುಗಿಸಿದರು.
ಒಂದನೇ ವಾರ್ಡಿನ ಪುರಸಭೆ ಸದಸ್ಯ ಮಾತಾನಾಡಿ ಮಲಯ್ಯ ಅಜ್ಜನವರು ಮಹಾಪುರಷ ಮಠ ರವರು ಜನಪರ ಕಾಳಜಿ ಮತ್ತು ಸಾಮಾಜಿಕ ಚಿಂತಕರು ಆಗಿ ತಮ್ಮ ವಾರ್ಡನ ಜನರ ಹಿತ ಕಾಪಾಡುವಲ್ಲಿ ಜನ ಮೆಚ್ಚುಗೆ ಪಡೆದಿದ್ದಾರೆ.ಧಾರ್ಮಿಕ ಮತ್ತು ಪೌರಾಣಿಕ ಚಿಂತನೆವುಳ್ಳ ಮಲಯ್ಯಾ ಅಜ್ಜ ಮಹಾಪುರಷ ಮಠ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವುದು ಮೆಚ್ಚುವಂತ ವಿಷಯವಾಗಿರುತ್ತದೆ.
ನಗರದ ಶೌಚಾಲಯ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಡೆಸಿಕೊಟ್ಟಿರುವ ಮಹಾಪುರಷಮಠ ಮಲಯ್ಯಾ ಅಜ್ಜನವರು ನಗರದ ನಾಗರಿಕರಿಗೆ ಸ್ವಚ್ಛತೆ ಅರಿವು ಮೂಡಿಸುವ ಮೂಲಕವಾಗಿ ಶೌಚಾಲಯ ಸಾರ್ವಜನಿಕರ ಆಸ್ತಿ ಆಗಿರುವುದರಿಂದ ಸರಿಯಾಗಿ ಉಪಯೋಗಿಸಿ ಸ್ವಚ್ಚತೆ ಕಾಪಾಡಿಕೊಳ್ಳಲು ಮನವರಿಕೆ ಮಾಡಿದರು.
ಪುರಸಭೆಯ ಅಧ್ಯಕ್ಷರು ವಿದ್ಯಾ ಎಸ್ ದೊಡ್ಡಮನಿ, ನಗರದ ನಾಗರಿಕರಿಗೆ ಶೌಚಾಲಯದ ಮಹತ್ವ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲು ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ನಗರದ ಪುರಸಭೆ ಎಲ್ಲಾ ಸದಸ್ಯರು, ಪುರಸಭೆ ಸಿಬಂದ್ದಿಗಳು ಉಪಸ್ಥಿತರಿದ್ದು

ವರದಿ ವೀರಣ್ಣ ಸಂಗಳದ ರೋಣ

error: