December 19, 2024

Bhavana Tv

Its Your Channel

ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿ- ಬಿಜೆಪಿ ಅಧ್ಯಕ್ಷ ಮುತ್ತಣ್ಣ ತೋಟಪ್ಪ ಕಡಗದ

ರೋಣ: ಕೇಂದ್ರ ಮತ್ತು ರಾಜ್ಯದಲ್ಲಿ ಉತ್ತಮವಾಗಿ ಅಭಿವೃದ್ದಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಬಿಜೆಪಿ ಪಕ್ಷದ ಪರ ದೇಶದ ಎಲ್ಲಾ ಜನರು ಇದ್ದಾರೆ ಹಾಗೂ ಜನಪರ ಆಡಳಿತವನ್ನು ಸ್ವಾಗತಿಸುತ್ತಿದ್ದಾರೆ ಎಂದು ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ತೋಟಪ್ಪ ಕಡಗದ ಹೇಳಿದರು.
ನಗರದಲ್ಲಿ ಬುಧವಾರ ನಡೆದ ಬಿಜೆಪಿ ಪಕ್ಷದ ರೋಣ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕಾರ್ಯಕರ್ತನ್ನೇ ಆಸ್ತಿಯನ್ನಾಗಿ ನಂಬಿಕೊAಡಿರುವ ರಾಜ್ಯದ ಎಲ್ಲಾ ಕ್ಷೇತ್ರದ ನಾಯಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ರೋಣ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ದಿ ಕೆಲಸಗಳು ನಡೆದಿವೆ ಇದು ಕಾರ್ಯಕರ್ತರ ಶ್ರಮದ ಹಾಗೂ ಜನರ ಸಹಕಾರದ ಫಲವಾಗಿದೆ ಎಂದರು.
ನಮ್ಮ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿಯೂ ಪಕ್ಷವನ್ನು ಇನ್ನಷ್ಟು ವಿಸ್ತಾರವಾಗಿ, ಬೇರುಮಟ್ಟದಿಂದ ಬಲಪಡಿಸಬೇಕು ಹಾಗೂ ಮುಂಬರುವ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಎಲ್ಲೆಡೆ ಜಯ ಸಾಧಿಸುವಂತಾಗಬೇಕು ಎಂದರು. ಆದ್ದರಿಂದ ಗ್ರಾಮ ಮಟ್ಟದಿಂದಲೇ ಬಿಜೆಪಿಯನ್ನು ಬಲಪಡಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದರು
ಪ್ರಧಾನ ಕಾರ್ಯದರ್ಶಿ ಉಮೇಶ ಮಲ್ಲಾಪುರ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದು ಜನರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಾ ಇದೆ, ಆದಷ್ಟು ಸರ್ಕಾರದ ಯೋಜನೆಗಳನ್ನು ತಳಮಟ್ಟದಲ್ಲಿರುವ ಸಾಮಾನ್ಯ ಜನರಿಗೆ ತಲುಪಿಸಬೇಕು. ಜನರೊಂದಿಗೆ ಇದ್ದು, ಪಕ್ಷವನ್ನು ಇನ್ನೂ ಬಲವಾಗಿ ಬೆಳೆಸಬೇಕು ಎಂದರು.

ಮುಖಂಡರಾದ ಶಿವಾನಂದ ಜಿಡ್ಡಿಬಾಗಿಲ, ಅಶೋಕ ಪವಾಡಶೆಟ್ಟರ, ಬಸವರಾಜ ಕೊಟಗಿ, ಸೋಮು ಹೋಂಗಲ್, ಉಮೇಶ ಪಾಟೀಲ, ಸತೀಶ ಭೀಕ್ಷಾವತಿಮಠ, ಸಂತೋಷ ನಿರಂಜನ ಇದ್ದರು.

ವರದಿ ವೀರಣ್ಣ ಸಂಗಳದ ರೋಣ ತಾಲ್ಲೂಕು ವರದಿಗಾರ

error: