December 22, 2024

Bhavana Tv

Its Your Channel

ಅಧಿಕೃತ ಆದೇಶ ಪತ್ರ ವಿತರಣೆ, ಹಾಗೂ ಅಭಿನಂದನಾ ಸನ್ಮಾನ ಸಮಾರಂಭ

ರೋಣ: ಗದಗ ನಗರದ ಪ್ರತಿಷ್ಠಿತ ಶ್ರಿ ವೀರೇಶ್ವರ ಪುಣ್ಯಾಶ್ರಮದ ಸಭಾಂಗಣದಲ್ಲಿ ನಡೆದ ಡಾ ರಾಜಕುಮಾರ್ ಅಭಿಮಾನೀ ಸಂಘಗಳ ಒಕ್ಕೂಟ ಹಾಗೂ ಡಾ ಶಿವರಾಜಕಮಾರ್ ಅಭಿಮಾನಿಗಳ ಸಂಘ ಮತ್ತು ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಗದಗ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಕೊಪ್ಪಳ, ಬಳ್ಳಾರಿ, ಧಾರವಾಡ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳಿಗೆ ಅಧಿಕೃತ ಆದೇಶ ಪತ್ರ ವಿತರಣೆ, ಹಾಗೂ ಅಭಿನಂದನಾ ಸನ್ಮಾನ ಸಮಾರಂಭವನ್ನು ಜಿಲ್ಲಾಧ್ಯಕ್ಷರಾದ ಮಂಜುನಾಥ್ ಕೊಟ್ಟೂರು ಡಾ ರಾಜಕುಮಾರ್ ಅವರ ಕುಟುಂಬದ ಹಿರಿಮೆಯನ್ನು ಎತ್ತಿ ಹಿಡಿದು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶ್ರಿ ಕಲ್ಲಯ್ಯಜ್ಜನವರ ಸಭೆಯನ್ನು ಉದ್ಘಾಟಿಸಿದರು. ಡಾ ರಾಜಕುಮಾರ್ ಅವರ ಕುಟುಂಬದ ಹಿರಿಮೆಯನ್ನು ಹೆಚ್ಚಿಸುವುದರ ಜೊತೆಯಲ್ಲಿ ಗದಗ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿದೆ ಎನ್ನುವ ಅಭಿಪ್ರಾಯ ಎಲ್ಲರನ್ನು ಮೂಡಿದೆ.

ಈ ಸಂದರ್ಭದಲ್ಲಿ ಸರಾಲಾಕಾವ್ಯ, ಮಲ್ಲೇಶ್ ಪರಾಪೂರ್, ಪ್ರಿಯದರ್ಶಿನಿ ಕೊಪ್ಪಳ, ರೇಖಾ ಬಂಗಾರಶೆಟ್ಟರ್, ಪಾತಿಮಾ, ಪೂಜಾ ಬೇವೂರು, ಮಂಜುಳಾ ಬೇಳವನಕಿ, ಮಂಜುಳಾ ಕಲಕೆರಿ, ಇನ್ನು ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು .
ವರದಿ ವೀರಣ್ಣ ಸಂಗಳದ ರೋಣ

error: