December 22, 2024

Bhavana Tv

Its Your Channel

ಚರಪಟ್ಟಾಧಿಕಾರ ಹಾಗೂ ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ.

ನರೇಗಲ್: ಭಕ್ತರೇ ಮಠದ ಆಸ್ತಿಯಾಗಿದ್ದು ಅವರ ಗುರು-ಭಕ್ತರ ಪರಂಪರೆ, ಧನ್ಯತಾಭಾವದಿಂದ ಮಠಗಳ ಉನ್ನತಿ ಸಾಧ್ಯ ಎಂದು ಹಾಲಕೆರೆ ಮಠದ ಅಭಿನವ ಅನ್ನದಾನ ಸ್ವಾಮೀಜಿ ಹೇಳಿದರು.

ಹಾಲಕೆರೆ ಗ್ರಾಮದ ಶ್ರೀಮಠದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಚರಪಟ್ಟಾಧಿಕಾರ ಹಾಗೂ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಅನ್ನದಾನೇಶ್ವರ ಮಠದ ಸಮುದಾಯ ಭವನದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದರು,
ಹಾಲಕೆರೆ ಶ್ರೀಮಠವು ಜನರ ಮನಸ್ಸುಗಳನ್ನು ಸುಜ್ಞಾನ, ಸಂಸ್ಕಾರದ ಗುಣಗಳ ಜೊತೆಗೆ ಕಟ್ಟಿಹಾಕಿ ಉತ್ತಮ ಜೀವನಕ್ಕೆ ಮಾರ್ಗದರ್ಶನ ತೋರುವ ಭಕ್ತಿಯ ನೆಲೆಯಾಗಿದೆ ಎಂದರು. ಮಠದ ವತಿಯಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮದ ಯಶಸ್ಸಿಗೂ ಭಕ್ತರ ಸೇವೆಯೇ ಕಾರಣವಾಗಿದೆ. ಅದರಂತೆ ನಿಯೋಜಿತ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗ ದೇವರ ಚರಪಟ್ಟಾಧಿಕಾರದ ಉತ್ಸವವನ್ನು ಎಲ್ಲಾ ಭಕ್ತರು ನಿಂತು ಮಾಡಬೇಕು ಎಂದರು.
ಮಾಜಿ ಶಾಸಕ ಜಿ. ಎಸ್. ಪಾಟೀಲ ಮಾತನಾಡಿ, ಸ್ವಾತಂತ್ರ‍್ಯ ಪೂರ್ವದಿಂದಲೇ ಶೈಕ್ಷಣಿಕವಾಗಿ, ಅಧ್ಯಾತ್ಮಿಕವಾಗಿ ಹೆಸರು ಪಡೆದ ರಾಜ್ಯದ ಮಠಗಳಲ್ಲಿ ಅನ್ನದಾನೇಶ್ವರ ಮಠ ಒಂದಾಗಿದೆ. ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಹಾಲಕೆರೆ ಮಠದ ಭಕ್ತರ ಮನೆಯ ಹಬ್ಬವಾಗಿರುತ್ತದೆ ಎಂದರು. ಅದರಂತೆ ಅನ್ನದಾನೇಶ್ವರ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಮ್ಮ ಕುಟುಂಬವು ಎಲ್ಲಾ ರೀತಿಯ ಸೇವೆ ಮಾಡಲು ಸಿದ್ದವಾಗಿದೆ ಎಂದರು.

ನಿಯೋಜಿತ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗ ಶ್ರೀಗಳು ಮಾತನಾಡಿ, ಚರಪಟ್ಟಾಧಿಕಾರದ ಮೊದಲು ಗುರುವಂದನಾ ಕಾರ್ಯಕ್ರಮ ನಡೆಸಲು ಮನವಿ ಮಾಡಿದ್ದೇ, ಅದರಂತೆ ಪರಮಪೂಜ್ಯರು ಅವಕಾಶ ಮಾಡಿಕೊಟ್ಟಿದ್ದಾರೆ, ನನಗೆ ಗುರುಗಳೆ ಜೀವಾಳವಾಗಿದ್ದು ಅವರ ಮಾರ್ಗದರ್ಶನದಂತೆ ನನ್ನ ಕರ್ತವ್ಯವನ್ನು ನಿರ್ವಹಿಸುವೆ ಎಂದರು. ಭಕ್ತರಲ್ಲಿ ಧರ್ಮ ಬೋಧನೆಯನ್ನು ಮಾಡಿರುವ ಕೀರ್ತಿಯನ್ನು ಹೊಂದಿರುವ ಮಠಕ್ಕೆ ಪರಮಪೂಜ್ಯರ ಕೃಪಾಶೀರ್ವಾದದಿಂದ ಸದ್ಭಕ್ತರ ಸಹಕಾರದೊಂದಿಗೆ ಗುರುಪರಂಪರೆಯನ್ನು ಅತ್ಯಂತ ಶ್ರದ್ಧೆಯಿಂದ ಮುಂದುವರೆಸಿಕೊAಡು ಹೋಗುವುದಾಗಿ ತಿಳಿಸಿದರು.
ಅನ್ನದಾನೇಶ್ವರ ಸಂಸ್ಥೆಯ ಪಿಯು ಪ್ರಾಚಾರ್ಯ ವೈ. ಸಿ. ಪಾಟೀಲ, ಪದವಿ ಪ್ರಾಚಾರ್ಯ ಎಸ್. ಜಿ. ಕೇಶಣ್ಣವರ, ಎಂ. ಬಿ, ಹಂಗರಗಿ, ಎಂ. ಬಿ. ಸಜ್ಜನವರ, ಎಂ. ಎಸ್. ಧಡೆಸೂರಮಠ ಮಾತನಾಡಿದರು.
ಈ ಸಂದರ್ಭದಲ್ಲಿ ದರೂರ ಕೊಟ್ಟೂರು ದೇಶಿಕರು, ಸಿದ್ದಣ್ಣ ಬಂಡಿ, ಗೀರೀಶಗೌಡ ಮುಲ್ಕಿಪಾಟೀಲ, ಶಿವಕುಮಾರ ನಂದಿ, ಅಶೋಕ ಮಾಳವಾಡ, ಹೊನ್ನಗೌಡ ಪಾಟೀಲ, ಮುದುಕಪ್ಪ ಪ್ರಭಣ್ಣವರ, ಚಂಬಣ್ಣ ಚವಡಿ, ಎ. ಸಿ. ಪಾಟೀಲ, ಮುತ್ತಣ್ಣ ತೋಟಪ್ಪ ಕಡಗದ, ಜಗದೀಶ ಕರಡಿ, ವಸಂತರಾವ್ ಗಾರಗಿ, ಮಹೇಶ ಕಳಕಾಪುರ, ನಿಂಗನಗೌಡ ಲಕ್ಕನಗೌಡ್ರ, ಬಸನಗೌಡ ಪೊಲೀಸ್ ಪಾಟೀಲ ಹಾಗೂ ಬೇಲೂರು, ಗಜೇಂದ್ರಗಡ, ಅಬ್ಬಿಗೇರಿ, ಕನಸಾವಿ, ರಮತ್ನಲ್, ನರೇಗಲ್, ಬೀಳಗಿ, ಹನುಮಸಾಗರ, ಕುಷ್ಟಗಿ, ಕಂದಗಲ್, ಗಂಜಿಹಾಳ, ಸಂಗನಾಳ, ಗೊಗೇರಿ, ಇಟಿಗಿ, ಗುಳಗುಳಿ ಗ್ರಾಮಗಳ ಶಾಖಾಮಠದ ಭಕ್ತರು ಪಾಲ್ಗೊಂಡಿದ್ದರು.

ವರದಿ :- ವೀರಣ್ಣ ಸಂಗಳದ ರೋಣ

error: