December 21, 2024

Bhavana Tv

Its Your Channel

ವಿವಿಧ ಸಮುದಾಯಗಳಿಂದ ನಡೆದ ಬೃಹತ್ ಮಟ್ಟದ ಹೋರಾಟ

ಗಜೇಂದ್ರಗಡ: ಕರ್ನಾಟಕ ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿ ಹಾಗೂ ಬಂಜಾರ ಸಮಾಜದ ವತಿಯಿಂದ ಗಜೇಂದ್ರಗಡ ತಾಲ್ಲೂಕಿನಲ್ಲಿ ಕರೆ ನೀಡಲಾಗಿದ್ದ ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ, ಅರೆಅಲೆಮಾರಿ ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಹೋರಾಟವು ಬುಧವಾರ ಗಜೇಂದ್ರಗಡ ಪಟ್ಟಣದಲ್ಲಿ ಬೃಹತ್ ಮಟ್ಟದಲ್ಲಿ ನಡೆಯಿತು.

ಈ ವೇಳೆ ಬಂಜಾರ ಸಮುದಾಯದ ನಿಂದಕರನ್ನು ಬಂಧಿಸುವAತೆ, ನ್ಯಾ. ಸದಾಶಿವ ಆಯೋಗ ವರದಿಯನ್ನು ಬಹಿರಂಗ ಚರ್ಚೆಗೆ ಒಳಪಡಿಸುವಂತೆ ಹಾಗೂ ಆಡಳಿತ ನಡೆಸುವ ಸರ್ಕಾರ ದಲಿತರ ನಡುವೆ ಜಗಳ ಹಚ್ಚಿ ಮೋಜು ನೋಡುವ ಹುನ್ನಾರವನ್ನು ಕೈಬಿಡುವಂತೆ ಆಗ್ರಹಿಸಲಾಯಿತು.
ಹೋರಾಟದ ಸಾನಿಧ್ಯ ವಹಿಸಿ ಮಾತನಾಡಿದ ನೀಲಾನಗರ ಬಂಜಾರ ಪೀಠದ ಕುಮಾರ ಮಹಾರಾಜ ಸ್ವಾಮೀಜಿ, ತುಳಿತಕ್ಕೊಳಗಾದ ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ ಹಾಗೂ ಇತರೆ ದಲಿತ ಸಮುದಾಯಗಳ ಜನರು ನಿತ್ಯ ಜೀವನ ನಡೆಸಲು ಅನುಭವಿಸುತ್ತಿದ್ದ ಕಷ್ಟ ಹಾಗೂ ಬಡತನವನ್ನು ಗುರುತಿಸಿ ಸಂವಿಧಾನಾತ್ಮಕವಾಗಿ ಪರಿಶಿಷ್ಟ ಜಾತಿ(ಎಸ್.ಸಿ) ಮೀಸಲಾತಿಯನ್ನು ನೀಡಲಾಗಿದೆ. ಆದ್ದರಿಂದ ಮೀಸಲಾತಿ ಎನ್ನುವುದು ಭಿಕ್ಷೆಯಲ್ಲ ಅದು ಡಾ. ಬಿ. ಆರ್. ಅಂಬೇಡ್ಕರ್‌ರವರ ಆಸೆಯದಂತೆ ನಮಗೆ ದೊರೆತ ಹಕ್ಕಾಗಿದೆ ಎಂದು ಹೇಳಿದರು.
ಹೋರಾಟದಲ್ಲಿ ಪಾಲ್ಗೊಂಡಿರುವ ಎಲ್ಲಾ ದಲಿತ ಸಮುದಾಯದ ಶೇ. ೯೮ ರಷ್ಟು ಕುಟುಂಬಗಳಿಗೆ ಇಂದಿಗೂ ಮನೆ, ಆಸ್ತಿ, ಜಮೀನುಗಳು ಇಲ್ಲ. ಹೊಟ್ಟೆ ಪಾಡಿಗಾಗಿ ಕಟ್ಟಿಗೆ ಹೊತ್ತು, ಕಲ್ಲು ಹೊಡೆದು, ಕಸಬರಗಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಸರಿಯಾದ ನೆಲೆ ಸಿಗದೆ ಅಲ್ಲಿ, ಇಲ್ಲಿ ಅಂತ ಗುಳೆ ಹೋಗಿ ಬದುಕುತ್ತಿದ್ದಾರೆ. ಇಷ್ಟೊಂದು ಕಷ್ಟದಲ್ಲಿ ಜೀವನ ನಡೆಸುತ್ತಿರುವ ತುಳಿತಕ್ಕೊಳಗಾದ ಸಮುದಾಯಗಳ ಮೀಸಲಾತಿ ಹುನ್ನಾರಕ್ಕೆ ಸರ್ಕಾರಿ ಏನಾದರು ಕೈ ಹಾಕಿದರೆ ಕಟ್ಟಿಗೆ, ಕಲ್ಲು, ಕಸಬರಗಿ ಹೊರೆಗಳನ್ನು ಹೊತ್ತು ವಿಧಾನ ಸೌಧದ ಮುಂದೆ ಹಾಗೂ ರಾಜ್ಯಾದ್ಯಂತ ಉಗ್ರವಾದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೊಪ್ಪಳ ಬಹದ್ದೂರ ಬಂಡದ ಬಂಜಾರ ಪೀಠದ ಗುರು ಗೊಸಾಯಿ ಭಾವ ಮಾತನಾಡಿ, ಈಚೆಗೆ ದಾವಣಗೇರಿ ಜಿಲ್ಲೆಯ ನ್ಯಾಮತಿಯಲ್ಲಿ ಹಾಗೂ ಕೊಪ್ಪಳದಲ್ಲಿ ನಡೆಸಿದ ನೆಪದ ಹೋರಾಟದಲ್ಲಿ ಮಾದೀಗ ದಂಡೋರ ಸಮಿತಿಯ ಕೆಲವು ಕಿಡಗೇಡಿಗಳು ಬಂಜಾರ ಸಮುದಾಯದ ಧಾರ್ಮಿಕ ಕುಲಗುರು ಸಂತ ಸೇವಾಲಾಲ್ ಮಹಾರಾಜರನ್ನು ಹಾಗೂ ರಾಜ್ಯ ಸಂಪುಟದ ಸಚಿವ ಪ್ರಭು ಚವ್ಹಾಣ ಅವರನ್ನು ನಿಂದನೆ ಮಾಡಿರುವ ವ್ಯಕ್ತಿಗಳನ್ನು ಈ ಕೂಡಲೇ ಬಂಧಿಸಬೇಕು ಹಾಗೂ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಂಜಾರ ಸಮಾಜದ ಹಿರಿಯ ಪ್ರಶಾಂತ ರಾಠೋಡ ಮಾತನಾಡಿ, ರಾಜಕೀಯ ಪ್ರೇರಣೆಯಿಂದ ಮೀಸಲಾತಿ ಹೋರಾಟದ ನೆಪದಲ್ಲಿ ಎಲ್ಲೋ ಕೆಲವು ಪುಂಡರು ಕಾನೂನು ಬಾಹಿರ ಹೇಳಿಕೆ ನೀಡುತ್ತಿರುವುದರಿಂದ ಸಹೋದರತೆಯ ಭಾವನೆಯಿಂದ ಜೀವಿಸುತ್ತಿದ್ದ ಸಮುದಾಯಗಳ ನಡುವೆ ದ್ವೇಷ, ವೈಷಮ್ಯ ಭಾವನೆಗಳನ್ನು ಬಿತ್ತುತ್ತಿದ್ದಾರೆ. ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದ ಆಗ್ರಹಿಸಿದರು. ಆಡಳಿತ ನಡೆಸುತ್ತಿರುವ ಸರ್ಕಾರಗಳು ದಲಿತರ ನಡುವೆ ಜಗಳ ಹಚ್ಚಿ ತಮಾಷೆ ನೋಡುತ್ತಿದ್ದಾರೆ. ಮುಂದೊAದು ದಿನ ಸಂಪೂರ್ಣ ಮೀಸಲಾತಿ ಮಿಸಲಾತಿ ತೆಗೆದು ಹಾಕುವ ಹುನ್ನಾರ ರಾಜಕೀಯ ನಾಯಕರು ಮಾಡಿದ್ದಾರೆ ಇದನ್ನು ಸಹೋದರ ಮಾದಿಗ ಸಮುದಾಯದ ಜನರು ಅರ್ಥೈಸಿಕೊಳ್ಳಬೇಕು ಎಂದರು.
ಹೋರಾಟದ ಆರಂಭದಲ್ಲಿ ಗಜೇಂದ್ರಗಡ ತಾಲ್ಲೂಕಿನ ಭೈರಾಪುರ, ಲಕ್ಕಲಕಟ್ಟಿ, ಬೆಣಚಮಟ್ಟಿ, ಕುಂಟೋಜಿ, ರಾಜೂರ, ನಾಗರಸಕೊಪ್ಪ, ದಿಂಡೂರ, ಗೌಡಗೇರಿ, ನರೇಗಲ್, ರುದ್ರಾಪುರ, ಸೂಡಿ, ಉಣಚಗೇರಿ, ಪುರ್ತಗೇರಿ, ರಾಂಪುರ ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಜನರು ಗಜೇಂದ್ರಗಡ ಪಟ್ಟಣದ ಲಂಬಾಣಿ ತಾಂಡಾದಿAದ ಮೆರವಣಿಗೆ ನಡೆಸಿದರು. ಡಾ. ಬಿ. ಆರ್. ಅಂಬೇಡ್ಕರ್ ಸರ್ಕಲ್, ದುರ್ಗಾ ಸರ್ಕಲ್, ಶಿವಾಜಿ ಸರ್ಕಲ್ ಹಾಗೂ ಕೆ. ಕೆ. ಸರ್ಕಲ್ ನಲ್ಲಿ ಬಂದು ಮಾನವ ಸರಪಳಿ ನಿರ್ಮಿಸಿದರು. ಕೆಲಹೊತ್ತು ವಾಹನ ಸಂಚಾರವನ್ನು ತಡೆಯಲಾಗಿತ್ತು. ಕೆ.ಕೆ. ಸರ್ಕಲ್ ನಲ್ಲಿ ನಡೆದ ಹೋರಾಟದ ಸಭೆಯ ನಂತರ ತಹಶೀಲ್ದಾರ ಕಚೇರಿಯ ಅಧಿಕಾರಿ ವೀರಣ್ಣ ಅಡಗತ್ತಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಲಾಲಪ್ಪ ರಾಠೋಡ, ರಾಮಚಂದ್ರಪ್ಪ ಮಾಳೋತ್ತರ, ಗಣೇಶ ಮಾಳೋತ್ತರ, ನೂರಪ್ಪ ರಾಠೋಡ, ಗಣೇಶ ರಾಠೋಡ, ಉಮೇಶ ರಾಠೋಡ, ಪೀರು ರಾಠೋಡ, ಪ್ರಶಾಂತ ರಾಠೋಡ, ರವಿಕಾಂತ ಅಂಗಡಿ, ಎಫ್. ಎಸ್. ಕರಿದುರ್ಗಣ್ಣನವರು, ಯಲ್ಲಪ್ಪ ಬಂಕದ, ಪರಶುರಾಮ ಚವ್ಹಾಣ, ನಾಗಪ್ಪ ಭಜಂತ್ರಿ, ರವಿ ಭಜಂತ್ರಿ, ನಾಗಪ್ಪ ಶಿಂಫ್ರೀ, ರಾಜು ಪಮ್ಮಾರ, ಶರಣು ಪೂಜಾರ, ಈಶ್ವರ ದೊಡ್ಡಮನಿ, ಗಿರೀಶ ರಾಠೋಡ, ಶಂಕ್ರಪ್ಪ ಚವ್ಹಾಣ, ರೂಪಲೇಪ್ಪ ರಾಠೋಡ, ಪರಶುರಾಮ ಗುಗಲೋತ್ತರ, ಬಾಲು ರಾಠೋಡ, ಶಿವಕುಮಾರ ಜಾಧವ, ಶೇಖಪ್ಪ ರಾಠೋಡ, ಶರಣಪ್ಪ ಜಾಧವ, ಶಿವಪ್ಪ ರಾಠೋಡ, ಸಿಂಧೂರ ರಾಠೋಡ, ಶರಣಪ್ಪ ಮಾಳೋತ್ತರ, ದಾನು ರಾಠೋಡ, ಗಣೇಶ ಗುಗಲೋತ್ತರ, ಮಾಂತೇಶ ಪೂಜಾರ, ಶಿವು ಚವ್ಹಾಣ, ಸುರೇಶ ನಾಯಕ, ಈಶಪ್ಪ ರಾಠೋಡ, ಉಮೇಶ ರಾಠೋಡ, ಅವರೇಶ ಪೂಜಾರ, ದೇವಿಂದ್ರಪ್ಪ ಚವ್ಹಾಣ, ಶೇಖಪ್ಪ ನಾಯಕ, ಶಂಕ್ರಪ್ಪ ಮಾಳೋತ್ತರ, ಮನ್ನಾ ನಾಯಕ, ನಾರಾಯಣಪ್ಪ ರಾಠೋಡ, ಗಣೇಶ ರಾಠೋಡ, ಪಾಂಡಪ್ಪ ಚವ್ಹಾಣ, ಕುಮಾರ ರಾಠೋಡ, ನಾರಾಯಣಪ್ಪ ಮಾಳೋತ್ತರ, ಸುರೇಶ ಕಾರಬಾರಿ, ಕಮಲಪ್ಪ ರಾಠೋಡ, ಅಂದಪ್ಪ ರಾಠೋಡ, ಮುತ್ತು ರಾಠೋಡ ಹಾಗೂ ಯಲಬುರ್ಗಾ, ಗದಗ, ಕೊಪ್ಪಳ, ಶಿವಮೊಗ್ಗ, ದಾವಣಗೇರಿ, ಬಳ್ಳಾರಿ, ಬಾಗಲಕೋಟೆಯ ದಲಿತ ನಾಯಕರು ಪಾಲ್ಗೊಂಡಿದ್ದರು.

ವರದಿ ವೀರಣ್ಣ ಸಂಗಳದ ರೋಣ

error: