December 22, 2024

Bhavana Tv

Its Your Channel

ಶ್ರೀ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ರೋಣ ನಗರಕ್ಕೆ ಆಗಮಿಸಿದ ಶ್ರೀ ಕುಮಾರ ಜ್ಯೋತಿ.

ರೋಣ: ಗಜೇಂದ್ರಗಡ ತಾಲೂಕ ನಿಡಗುಂದಿಕೊಪ್ಪ ಶ್ರೀ ಮಠದ ಶತಮಾನೋತ್ಸವ ಹಾಗೂ ಉತ್ತರಾಧಿಕಾರಿಗಳಾದ ಪೂಜ್ಯ ಶ್ರೀ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ರೋಣ ನಗರಕ್ಕೆ ಆಗಮಿಸಿದ ಶ್ರೀ ಕುಮಾರ ಜ್ಯೋತಿಯನ್ನು ಮಿಥುನ್ ಜಿ. ಪಾಟೀಲ ಉಪಾಧ್ಯಕ್ಷರು ಪುರಸಭೆ ರೋಣ ಇವರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಯಾತ್ರಿಗಳಿಗೆ ತಂಪು ಪಾನೀಯಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬಸಣ್ಣ ನವಲಗುಂದ, ಯೂಸುಫ್ ಇಟಗಿ, ಅಂದಪ್ಪ ಬಿಚ್ಚುರ್, ಪುರಸಭೆ ಸದಸ್ಯರುಗಳಾದ ಬಾವಾಸಾಬ ಬೆಟಗೇರಿ, ಗದಿಗೆಪ್ಪ ಕೀರೆಸೂರ್, ಅಂದಪ್ಪ ಗಡಗಿ, ಹನಮಂತ ತಳ್ಳಿಕೇರಿ, ದಾವಲಸಾಬ ಬಾಡಿನ, ಈಶಪ್ಪ ಕಡಬಿನಕಟ್ಟಿ, ದುರ್ಗಪ್ಪ ಹಿರೇಮನಿ, ಸಂಗು ನವಲಗುಂದ, ಅಪ್ಪು ಗಿರಡ್ಡಿ, ವಿಜಯ್ ಚಿತ್ರಗಾರ, ಸಂಜಯ್ ದೊಡ್ಡಮನಿ, ಯಲ್ಲಪ್ಪ ಕೀರೆಸೂರ್, ಸುರೇಶ ಭಜಂತ್ರಿ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ ವೀರಣ್ಣ ಸಂಗಳದ ರೋಣ

error: