December 22, 2024

Bhavana Tv

Its Your Channel

ನಿಡಗುಂದಿಕೊಪ್ಪ ಸಿದ್ದರಾಮ ದೇವರ ಚರಪಟ್ಟಾಧಿಕಾರ ಹಾಗೂ ಶತಮಾನೋತ್ಸವ ಕಾರ್ಯಕ್ರಮ

ರೋಣ: ಗಜೇಂದ್ರಗಡ ನೀಡಗುಂದಿಕೊಪ್ಪ ನೂರರ ಶತಮಾನೋತ್ಸವದ ಅಂಗವಾಗಿ ಪುರಾಣ ಪ್ರಾರಂಭೋತ್ಸವ ಪಂಡಿತ ಶ್ರೀ ಅನ್ನದಾನ ಶಾಸ್ತ್ರಿಗಳು ಗುಡೂರು ದೇಶ ಹಾಗೂ ಸಮಾಜ ಧರ್ಮದ ತಳಹದಿಯ ಮೇಲೆ ನಿಂತಿದೆ ಎಂದು ಹೇಳಿದರು.

ಗಜೇಂದ್ರಗಡ ತಾಲ್ಲೂಕಿನ ನಿಡಗುಂದಿಕೊಪ್ಪ ಗ್ರಾಮದ ಶಿವಯೋಗ ಮಂದಿರದ ಶಾಖಾ ಮಠದ ನಿಯೋಜಿತ ಉತ್ತರಾಧಿಕಾರಿ ಸಿದ್ದರಾಮ ದೇವರ ಚರಪಟಾಧಿಕಾರ ಹಾಗೂ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಮಾತನಾಡಿದರು,
ಪ್ರತಿ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಚಿಂತನೆ ಇದ್ದಲ್ಲಿ ಶ್ರೇಷ್ಠತೆ ಕಾಣಬಹುದು. ಭಕ್ತಿಯ ಮನೋಭಾವನೆಯನ್ನು ಅಳವಡಿಸಿಕೊಂಡರೆ ಸಮಾಜವೂ ಸಂಸ್ಕಾರಗೊಳ್ಳುತ್ತದೆ. ಅದಕ್ಕಾಗಿ ಮಠಗಳ, ಶ್ರೀಗಳ ಸಂಪರ್ಕ ಪ್ರತಿ ಮನುಷ್ಯನಿಗೆ ಅಗತ್ಯವಾಗಿದೆ ಎಂದರು. ನಮ್ಮ ಭಾಗದ ಆರೋಗ್ಯ ದಾಸೋಹ ಮಠವೆಂದೆ ಹೆಸರು ಪಡೆದಿರುವ ನಿಡಗುಂದಿಕೊಪ್ಪ ಮಠದಲ್ಲಿ ನಡೆಯುವ ಚರಪಟ್ಟಾಧಿಕಾರ ಹಾಗೂ ಶತಮಾನೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಮುಂದಾಗಬೇಕು ಎಂದರು.

ಈ ವೇಳೆ ವಿವಿಧ ಮಠದ ಶ್ರೀಗಳ ವ್ಯಸನಗಳ ಭಿಕ್ಷೆ, ಸದ್ಗುಣಗಳು ಎಂದು ಹೇಳಿದರು ಹಾಳಕೇರಿ ಅನ್ನದಾನೀಶ್ವರ ಮಹಾಸ್ವಾಮಿಗಳು ಹಾಳಕೇರಿ ಪರಮ ಪೂಜ್ಯ ಸಿದ್ಧರಾಮ ದೇವರು ಶಾಖಾ ಶಿವಯೋಗ ಮಂದಿರ ಶ್ರೀ ಮುಪ್ಪಿನ ಬಸವಲಿಂಗ ದೇವರ ಹಾಳಕೇರಿ ಅಂಕಲಗಿ ಶ್ರೀ ವಿಜಯ ಕುಮಾರ ದೇವರು ಶೇಖರಯ್ಯ ಹಿರೇಮಠ ನಿಡಗುಂದಿಕೊಪ್ಪ ಇನ್ನೂ ಅನೇಕ ಪೂಜ್ಯರು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: