ರೋಣ: ಗಜೇಂದ್ರಗಡ ತಾಲೂಕಿನ ನಿಡಗುಂದಿ ಕೊಪ್ಪ ಗ್ರಾಮದಲ್ಲಿ ಪರಮಪೂಜ್ಯ ಶ್ರೀ ಸಿದ್ದರಾಮ ದೇವರು ಪಟ್ಟಾಧಿಕಾರದ ಅಂಗವಾಗಿ ಹಾಗೂ ಶ್ರೀಮಠದ ಶತಮಾನೋತ್ಸವದ ಅಂಗವಾಗಿ ಶ್ರೀಸಿದ್ಧರಾಮ ದೇವರ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಶ್ರೀಮಠದ ಭಕ್ತಾದಿಗಳು ಪೂಜ್ಯ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮವನ್ನು ನೆರವೇರಿಸಿದರು ಯಡಿಯೂರು ಸಿದ್ದಲಿಂಗೇಶ್ವರ ಪ್ರವಚನ ಕಾರ್ಯಕ್ರಮವನ್ನು ನಡೆಸಲಾಯಿತು
ಕಾರ್ಯಕ್ರಮದಲ್ಲಿ ಪೂಜಶ್ರೀ ಹಾಲಕೇರಿ ಅಭಿನವ ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳಿಗೆ ತುಲಾಭಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು
ಕಾರ್ಯಕ್ರಮದಲ್ಲಿ ಯಲಬುರ್ಗಾ ತಾಲೂಕಿನ ಚಿಕ್ಕೊಪ್ಪ ಹಿರೇಕೊಪ್ಪ ಸಂಗನಾಳ ತೊಂಡಿಹಾಳ ಬಂಡಿಹಾಳ ಮುಧೋಳ ಕರಮುಡಿ. ಹಾಗೂ ಗಜೇಂದ್ರಗಡ ರೋಣ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಭಕ್ತರೊಂದಿಗೆ ಪರಮಪೂಜ್ಯರಿಗೆ ತುಲಾಭಾರ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು ಅದರಂತೆ ಶ್ರೀಮಠಕ್ಕೆ ತನು-ಮನ-ಧನ ಸಹಾಯ ಮಾಡಿದ ಭಕ್ತರಿಗೆ ಆಶೀರ್ವಾದ ಮೂಲಕ ಸನ್ಮಾನಿಸಲಾಯಿತು
ಅದೇ ರೀತಿ ಶ್ರೀ ಯಡಿಯೂರ ಸಿದ್ದಲಿಂಗೇಶ್ವರ ಪ್ರವಚನದ ಮೂರನೇ ದಿನವಾದ ಇಂದು
ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಪುಟ್ಟ ಬಾಲಕನ ತೊಟ್ಟಿಲು ಕಾರ್ಯಕ್ರಮ ಭಕ್ತ ಸುಮಂಗಲೆಯರಿAದ ಏರ್ಪಡಿಸಲಾಯಿತು ಕಾರ್ಯಕ್ರಮದಲ್ಲಿ ಸುಮಾರು ೧೫ ಸಾವಿರದಿಂದ ೨೦ ಸಾವಿರ ಜನಸಂಖ್ಯೆ ಸೇರಿಕೊಂಡಿತ್ತು
ಪರಮಪೂಜ್ಯ ಶ್ರೀ ಶಿವಬಸವ ಮಹಾಸ್ವಾಮಿಗಳು. ಹಾಗೂ ಚನ್ನಬಸವ ಮಹಾಸ್ವಾಮಿಗಳು. ಅದೇ ರೀತಿ ಶ್ರೀ ಕುಮಾರೇಶ್ವರ ಕಾರ್ಯಕ್ರಮದಲ್ಲಿ ಮೂರು ಶ್ರೀಗಳ ಜೈಕಾರ ಘೋಷಣೆ ಮುಗಿಲುಮುಟ್ಟಿತು.
ಕಾರ್ಯಕ್ರಮದಲ್ಲಿ ಪೂಜಶ್ರೀ ಕೊಟ್ಟೂರು ದೇಶಿಕೇಂದ್ರ ಮಠದ ಶ್ರೀಗಳು, ಪರಮಪೂಜ್ಯ ಅಭಿನವ ಅನ್ನದಾನೇಶ್ವರ ಮಹಾಸ್ವಾಮಿಗಳು. ಅಂಕಲಗಿ ಮಠದ ಶ್ರೀಗಳು. ಹಾಳಕೇರಿ ಮುತ್ತಿನ ಬಸವಲಿಂಗ ಮಹಾಸ್ವಾಮಿಗಳು. ಇನ್ನು ಹಲವಾರು ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ