ರೋಣ:ಸೇವೆ ಮತ್ತು ಸಮರ್ಪಣಾ ಅಭಿಯಾನ ಕಾರ್ಯಕ್ರಮ ರೋಣ ತಾಲೂಕಿನ. ಡ.ಸ. ಹಡಗಲಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ನರೇಂದ್ರ ಮೋದಿಜಿ ಅವರ ೭೧ನೇ ಹುಟ್ಟು ಹಬ್ಬದ ನಿಮಿತ್ತ ವಾಗಿ ಲೋಕೋಪಯೋಗಿ ಸಚಿವರಾದ ಸಿ ಸಿ ಪಾಟೀಲ ರವರ ಆದೇಶದ ಮೇರೆಗೆ ಲಕ್ಕುಂಡಿ ಮಂಡಲದ ವತಿಯಿಂದ ಸೇವೆ ಮತ್ತು ಸಮರ್ಪಣಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಕಾರ್ಯಕ್ರಮದಲ್ಲಿ ಸಚಿವರ ಪುತ್ರರಾದ ಉಮೇಶ್ ಗೌಡ ಸಿ. ಪಾಟೀಲ ಮಾತನಾಡಿ
ನರೇಂದ್ರ ಮೋದಿಜಿಯವರ ೨೦ನೇ ವರ್ಷದ ಅಧಿಕಾರದ ಅವಧಿಯಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಬಾರದಂತೆ ಸರ್ಕಾರ ನಡೆಸುತ್ತಿದ್ದಾರೆ ಅದರಂತೆ ಶಾಲಾ ಶಿಕ್ಷಣಕ್ಕಾಗಿ ಹಾಗೂ ವ್ಯವಸಾಯಕ್ಕಾಗಿ ರೈತರಿಗೆ ಎಲ್ಲ ತರದ ಅನುಕೂಲತೆಯನ್ನು ಮಾಡುತ್ತಿದ್ದಾರೆ ಅದೇ ರೀತಿ ಮನೆಮನೆಗೆ ನಳ ಗಂಗೆ ಹರಿಸುವ ಯೋಜನೆ ಕೂಡ ನಡೆಯುತಿದೆ.
ಹುಟ್ಟು ಹೋರಾಟಗಾರರಾದ ನರೇಂದ್ರಮೋದಿಯವರು ನಿರಂತರ ೧೮ ತಾಸುಗಳ ಕಾಲ ದೇಶ ಸೇವೆಯನ್ನು ಮಾಡುತ್ತಿದ್ದಾರೆ ಯಾವುದೇ ಒಂದು ರಜೆ ಇಲ್ಲ ಯಾವುದೇ ಒಂದು ಕುಟುಂಬದ ಪ್ರವಾಸ ವಿಲ್ಲ ಎಷ್ಟು ವರ್ಷಗಳ ಕಾಲ ಹಿಮಾಲಯದಲ್ಲಿ ತಪಸ್ಸನ್ನು ಗೈದು ರಾಷ್ಟ್ರಮಟ್ಟದಲ್ಲಿ ಪ್ರಪಂಚದಲ್ಲಿ ನಮ್ಮ ಭಾರತದೇಶ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಅಂತಹ ಮಹಾನ್ ಭಾವರು ದೇಶ ಸೇವೆ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ ಎಂದು ಹೇಳಿದರು
ಅದೇ ರೀತಿ ವಸಂತ ಮೇಟಿಯರ್ ಮಾತನಾಡಿ ಈ ಕಾರ್ಯಕ್ರಮದಲ್ಲಿ ಶೌಚಾಲಯ ಸ್ವಚ್ಛಗೊಳಿಸುವುದು ಸ್ಮಶಾನ ಸ್ವಚ್ಛ ಮಾಡುವುದು ಬಸ್ ತಂಗುದಾಣ ಸ್ವಚ್ಛತೆ ಮಾಡುವುದು ಓಣಿ ಓಣಿ ಪ್ಲಾಸ್ಟಿಕ್ ಬಳಕೆ ಕುರಿತು ಮಾಹಿತಿ ನೀಡುವುದು ಅದರಲ್ಲಿ ಗಿಡ ಮರಗಳನ್ನು ನೆಡುವುದು ಇಂತಹ ಹಲವಾರು ಯೋಜನೆಗಳನ್ನು ಸೇವೆ ಮತ್ತು ಸಮರ್ಪಣೆಯಲ್ಲಿ ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು
ಅದೇ ರೀತಿ ರೋಣ ತಾಲೂಕಿನ ವಾಲ್ಮೀಕಿ ಸಮಾಜದ ಅಧ್ಯಕ್ಷ. ಹಾಗೂ ಗದಗ ಜಿಲ್ಲಾ ಬಿಜೆಪಿ ಎಷ್ಟಿ ಮೋರ್ಚಾದ ಮಾಜಿ ಅಧ್ಯಕ್ಷರಾದ ಬಸವಂತಪ್ಪ ಎಚ್ ತಳವಾರ್ ಮಾತನಾಡಿ ಸಿ ಸಿ ಪಾಟೀಲ್ ಅವರ ಆದೇಶದ ಮೇರೆಗೆ ನಿರಂತರ ನಮ್ಮ ಜಿಲ್ಲೆಯಲ್ಲಿ ಯಾವುದೇ ಸರ್ಕಾರ ಮಾಡದಿರುವಂತಹ ಕಾರ್ಯವನ್ನು ನಮ್ಮ ನರೇಂದ್ರ ಮೋದಿಜಿ ಅವರ ಸರ್ಕಾರ ಮಾಡುತ್ತಿದೆ ಅದೇ ರೀತಿ ಮಾನ್ಯ ಸಚಿವರಾದ ಸಿ ಸಿ ಪಾಟೀಲ ಹಗಲಿರುಳು ಎನ್ನದೆ ಜನರ ಸೇವೆಯಲ್ಲಿ ತೊಡಗಿರುತ್ತಾರೆ ಯಾವುದೇ ಕಷ್ಟ ಬಂದರೂ ಕೂಡ ಸರಿಪಡಿಸಿ ಕಾರ್ಯಕರ್ತನನ್ನು ಹುರಿದುಂಬಿಸುತ್ತಾರೆ ಎಂದವರು ಹೇಳಿದರು
ಅದೇ ರೀತಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನೋಟ್ ಬುಕ್ ವಿತರಣೆ ಮಾಡಿದರು ಮೂಲಕ ಹಾಗೂ ಪರಿಸರ ಕಾಳಜಿ ವಹಿಸುವುದರಿಂದ ಶಾಲಾ ಆವರಣ ಸ್ವಚ್ಛ ಮಾಡಿದರು ಅದೇ ರೀತಿ ಸಸಿ ನಾಟಿ ಮಾಡಿ ಅದಕ್ಕೆ ನೀರುಣಿಸುವ ಮೂಲಕ ಸೇವೆ ಮತ್ತು ಸಮರ್ಪಣಾ ಅಭಿಯಾನವನ್ನು ಮುಕ್ತಾಯಗೊಳಿಸಿದರು
ಈ ಸಂದರ್ಭದಲ್ಲಿ ಉಮೇಶ್ ಗೌಡ ಸಿ ಪಾಟೀಲ. ಬಸವಂತಪ್ಪ ಎಚ್ ತಳವಾರ. ವಸಂತ ಮೇಟಿ. ಹಾಗೂ ಎಸ್ಡಿಎಂಸಿ ಅಧ್ಯಕ್ಷರು.ಶಾಲಾ ಶಿಕ್ಷಕರಿಂದ. ಹಾಗೂ ಲಕ್ಕುಂಡಿ ಮಂಡಲದ ಅಧ್ಯಕ್ಷರು ನಿಂಗಪ್ಪ ಮನ್ನುರ. ಅದೇ ರೀತಿ ಗುರುಗಳು ದಾನರೆಡ್ಡಿ. ಹಾಗೂ ಜೆ.ಬಿ ಪೂಜಾರ್. ಎಂಸಿ ಪೊಲೀಸ ಪಾಟೀಲ್.ಹಾಗೂ ಗ್ರಾಮದ ಗುರುಹಿರಿಯರು ಶಾಲೆಯ ಮುದ್ದು ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ