ರೋಣ ನಗರದ ಪ್ರಮುಖ ರಸ್ತೆಗಳು ಹಾಳಾಗಿವೆ, ರಸ್ತೆಗಳಳ್ಳಿ ದೊಡ್ಡ ದೊಡ್ಡ ಕುಣಿಗಳು ಬಾಯಿತೆರದಿದೆ ಇದರಿಂದ ಅಪಘಾತ ಸಂಭವವಿದೆ… ನಗರದಲ್ಲಿ ಯಾವುದೇ ಸಭೆ ಆದರೆ ರಾಜಕಾರಣಿ ಬರುತ್ತಾರೆ ಎಂದು ಈ ಗುಂಡಿಗಳು ಮುಚ್ಚಲು ಮಣ್ಣಿನ ಉಪಯೋಗಿಸಿ ವ್ಯಾಪಾರಸ್ಥರಿಗೆ ಹಾಗೂ ಜನರಿಗೆ ಧೂಳಿನ ಉಡುಗೊರೆಯನ್ನು ನೀಡಿ ಆರೋಗ್ಯ ಹಾಳು ಮಾಡುತ್ತಾಯಿದ್ದಾರೆ…..ಈಗ ಇರುವ ಕೋರೋಣದಿಂದ ಪಾರಾಗ ಬಹುದು ಆದರೆ ನಮ್ಮ ರೋಣ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ನೀಡುವ ಧೂಳುಯಿಂದ ಪಾರಾಗದು ಬಹಳ ಕಷ್ಟ…..ಈಗಿನ ಪರಿಸ್ಥಿತಿ ನೋಡಿದರೆ ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಅಗತ್ಯ…. ರಸ್ತೆ ಸೌರ‍್ಯ ಒದಗಿಸಿಕೊಳ್ಲುವುದು ನಮ್ಮ ಹಕ್ಕು ಈ ಬಂದಿಗೆ ಎಲ್ಲರು ಸಹಕರಿಸಿ ನಮ್ಮ ಹಕ್ಕುಗಳನ್ನು ಪಡೆಯ ಬೇಕು ಎಂದು ಈ ಬಂದಗೆ ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕನ್ನಡ ಪರ ಹೋರಾಟ ಸಮಿತಿಗಳು ಹಾಗೂ ರೋಣ ನಗರದ ಎಲ್ಲಾ ಸಂಘ ಸಮಿತಿಗಳು, ಆಜಾದ್ ಯುವಕ ಸಮಿತಿ ಬೆಂಬಲ ಸೂಚಿಸಿವೆ…
ಈ ಸಂರ‍್ಭದಲ್ಲಿ ರಾಜ್ಯ ರೈತ ಮಹಿಳಾ ಉಪಾಧ್ಯಕ್ಷರಾದ ಲೀಲಾ ಚಿತ್ರಗಾರ ವೀರಭದ್ರೇಶ್ವರ ಮಹಿಳಾ ಭಜನಾ ಸಂಘದ ಅಧ್ಯಕ್ಷರಾದ ಗೀತಾ ನಂದಿಕೋಲಮಠ, ದಲಿತ ಹಿರಿಯ ಮುಖಂಡರಾದ ವೀರಪ್ಪ ತೆಗ್ಗಿನಮನಿ , ಮೌನೇಶ್ ಹಾದಿಮನಿ, ಬೀದಿ ಬದಿ ವ್ಯಾಪಾರಸ್ಥರ ಅಧ್ಯಕ್ಷರಾದ ಇಮಾಂಸಾಬ್ ಜಲಾವರ್, ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷರಾದ, ಮುತ್ತು ಕೊಳ್ಳಿ, ದಲಿತ ಯುವ ಮುಖಂಡರಾದ ಹನುಮಂತಚಲವಾದಿ ಬಸವರಾಜ್ ಹಲಗಿ, ಮುಸಲ್ಮಾನ್ ಯುವ ಮುಖಂಡರಾದ ಅಬ್ದುಲ್ ಹೊಸೂರ್, ಎಗ್ ರೈಸ್ ಸಂಘದ ಅಧ್ಯಕ್ಷರಾದ ಶಂಕರ್ ರ‍್ವಾಡಿ, ಆಜಾದ್ ಯುವ ಸಂಘದ ಮುಖಂಡರಾದ ರಿಯಾಜ್ ಮುಲ್ಲಾ
ಹಾಗೂ ಶ್ರೀಧರ್ ಚಿತ್ರಗಾರ್ ಕೃಷ್ಣ ಕೊಪ್ಪದ ಕೃಷ್ಣ ರಂಗ್ರೆಜ್ ಪ್ರಮೋದ್ ಪೂಜಾರ್ ಹಾಗೂ ಇನ್ನು ಅನೇಕ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ