ರೋಣ ತಾಲೂಕಿನ ನರಗುಂದ ಮತ ಕ್ಷೇತ್ರದ ಗುಜಮಾಗಡಿ ಕುರಡಗಿ ಮತ್ತು ಯರೆ ಬೇಲೆರಿ ಗ್ರಾಮದಲಿ ಜಲಜೀವನ್ ಮಿಷನ್ ಯೋಜನೆ ಅಡಿ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ದೃಷ್ಟಿಯಿಂದ ಭೂಮಿ ಪೂಜೆ ಕಾರ್ಯಕ್ರಮ ಜರುಗಿತು.
ಲೋಕೊಪಯೋಗಿ ಸಚಿವರು ಸಿ ಸಿ ಪಾಟೀಲ ಭೂಮಿ ಪೂಜೆ ಕಾರ್ಯಕ್ರಮ ನೇರವೇರಿಸಿದರು. ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷವನ್ನು ಪರಿಗಣಿಸಿ ಉಳಿದ ಸಮಯದಲಿ ಜನಪ್ರತಿನಿಧಿ ಯಾದವರು ಸೇವಕರು, ಮನೆ ಆಯ್ಕೆ ಮಾಡುವ ಸಮಯದಲಿ ನಮ್ಮ ಪಕ್ಷಕೆ ಮತ ಹಾಕದಿರುವ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಕ್ಷ ಮುಖ್ಯವಲ್ಲ ಸೇವೆ ಮುಖ್ಯ ಎಂದು ಪ್ರಾಸ್ತಾವಿಕವಾಗಿ ಮಾತ್ತನಾಡಿದರು.
ಗುಜಮಾಗಡಿ ಗ್ರಾಮದ ಜಲಜೀವನ ಯೋಜನೆಗೆ ೬೫.೩೬ಲಕ್ಷ, ಶ್ರೀ ಕಲ್ಮಶ್ವರ ಸಮುದಾಯದ ಭವನ ೫ಲಕ್ಷ, ಕುರಡಗಿ ಗ್ರಾಮದ ಜಲಜೀವನ ಕಾಮಗಾರಿಗೆ ೮೯ಲಕ್ಷ ಮತ್ತು ಯರೆ ಬೇಲೆರಿ ಗ್ರಾಮಕ್ಕೆ ೧೦ ಲಕ್ಷ, ಸಿ ಸಿ ರಸ್ತೆಗೆ ೭೫ಲಕ್ಷ ಮಂಜೂರುಮಾಡಲಾಗಿದೆ, ಈ ಮೂರು ಗ್ರಾಮದ ನಾಗರಿಕರು ತಮ್ಮ ಗ್ರಾಮದ ಹಿತ ದೃಷ್ಟಿಯಿಂದ ಯೋಜನೆಯ ಸದುಪಯೋಗ ಮಾಡಿಕೂಳ್ಳಲು ತಿಳಿಸಿದರು.
ಬಿಜಿಪಿ ಮಂಡಲ ಅಧ್ಯಕ್ಷರು ನಿಂಗಪ್ಪ ಮಣ್ಣೂರ ಹಾಗು ವಿ ಎಸ್ ಮೇಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಪಿಡಿಒಗಳು ಕಾರ್ಯಕ್ರಮದಲಿ ಉಪಸ್ಥತರಿದರು.
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ