ರೋಣ: ಗುರುಭವನದಲ್ಲಿ ಮಂಗಳವಾರ ವಾಲ್ಮೀಕಿ ಮಹರ್ಷಿಗಳ ಜಯಂತಿಯ ಸಂಭ್ರಮದಿAದ ಆಚರಣೆ ರೋಣ ತಾಲ್ಲೂಕು ಆಡಳಿತ ಮಂಡಳಿಯಿAದ ವಾಲ್ಮೀಕಿ ಜಯಂತಿ ಆಚರಿಸಲಾಯಿತು
ಲೋಕ ಕಲ್ಯಾಣಕ್ಕಾಗಿ ನಮ್ಮ ದೇಶದ ಮರ್ಯಾದಾ ಪುರುಷೋತ್ತಮ “ಶ್ರೀರಾಮಚಂದ್ರನ”ನ ಮಹಾಕಾವ್ಯ ರಾಮಾಯಣವನ್ನು ರಚಿಸಿದ ಆದಿಕವಿ, ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿ ಜಯಂತಿಯAದು ನಾಡಿನ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ರತ್ನಾಕರರಾಗಿರುವ ಇವರು ಹೇಗೆ ವಾಲ್ಮೀಕಿಯಾದರು ಎಂಬುದಕ್ಕೆ ಇದಕ್ಕೊಂದು ಪೌರಾಣಿಕ ಹಿನ್ನಲೆ ಇದೆ. ಶ್ರೀ ವಾಲ್ಮೀಕಿ ಮಹರ್ಷಿಗಳು ಗುರುವಿನ ಅನುಗ್ರಹದಿಂದ ಪ್ರಾಣಿಹಿಂಸೆಯನ್ನು ಬಿಟ್ಟು “ರಾಮತಾರಕ” ಎಂಬ ಮಂತ್ರವನ್ನು ದಿನನಿತ್ಯ ಪಠಿಸುತ್ತಾ ಜಪದಲ್ಲಿ ತೊಡಗಿ, ಅದರಲ್ಲಿಯೇ ತನು ಮನದಿಂದ ತಲ್ಲೀನರಾಗುತ್ತಾರೆ.
ಆ ಸಂದರ್ಭದಲ್ಲಿ ಅವರ ಸುತ್ತಲು ಹುತ್ತ ಬೆಳೆದುಕೊಂಡರೂ ಅದರ ಪರಿವಿಲ್ಲದೆ ಜಪ ಮಾಡುವುದರಲ್ಲಿ ತಮ್ಮನ್ನು ತಾವು ಮರೆತಿರುತ್ತಾರೆ. ಮುಂದೆ ಅದೇ ದಾರಿಯಲ್ಲಿ ಗುರುಗಳು ಬಂದು ವಲ್ಮಿಕದಲ್ಲಿರುವ(ಹುತ್ತಿನಲ್ಲಿರುವ) ರತ್ನಾಕರರನ್ನು ಎಚ್ಚರಗೊಳಿಸುತ್ತಾರೆ, ಆಗ ಹುತ್ತೆನ್ನುವ ಜಡತ್ವದಿಂದ ಹೊರಬಂದ ರತ್ನಾಕರ ಅವರು ವಾಲ್ಮೀಕಿಯಾಗುತ್ತಾರೆ.
ಪ್ರಪಂಚದಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಯ ಮೂಲಕ ಪರಿಚಿತರಾಗಿ, ರಾಮಾಯಣಕ್ಕೆ ಒಂದು ವಿಶೇಷ ಸ್ಥಾನವನ್ನು ಒದಗಿಸಿದ ಕೀರ್ತಿ ಆದಿಕವಿ ವಾಲ್ಮೀಕಿ ಮಹರ್ಷಿ ಅವರಿಗೆ ಸಲ್ಲುತ್ತದೆ. ವಾಲ್ಮೀಕಿ ಮಹರ್ಷಿ ಅವರು ಸರ್ವತೋಮುಖ ಚಿಂತಕ, ಚರಿತ್ರೆಗಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ತತ್ವಜ್ಞಾನಿ ಹಾಗೂ ಆದಿಕವಿಯಾಗಿ ಬಹು ವೈವಿದ್ಯಮಯವಾಗಿ ಜನರ ಮನಸೊರೆಗೊಂಡಿದ್ದಾರೆ.
ಸಾಹಿತ್ಯ ಇತಿಹಾಸದ ಅತ್ಯುನ್ನತ ಕೃತಿ ರಾಮಾಯಣದ ಕರ್ತೃ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯAದು ಶತಕೋಟಿ ನಮನಗಳನ್ನು ಸಲ್ಲಿಸೋಣ.ರಾಮಾಯಣದ ಮೂಲಕ ಜೀವನ ಮೌಲ್ಯ ಸಾರಿದ, ತತ್ವಾದರ್ಶಗಳನ್ನು ಬೋಧಿಸಿದ ದಾರ್ಶನಿಕ ಋಷಿಕವಿಗೆ ಅನಂತ ಪ್ರಣಾಮಗಳು.
ಈ ಸಂದರ್ಭದಲ್ಲಿ ರೋಣ ತಾಲೂಕಾ ದಂಡಾಧಿಕಾರಿ ಜೆ ಬಿ ಜಕನಗೌಡ ರೋಣ ಪುರಸಭೆಯ ಉಪಾಧ್ಯಕ್ಷ ಮಿಥುನ ಪಾಟೀಲ ರೋಣ ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷರು ಬಸವಂತಪ್ಪ ತಳವಾರ ಮಂಜುಳಾ ಎನ್ ಸಮಾಜ ಕಲ್ಯಾಣ ಅಧಿಕಾರಿ ಸಂತೋಷ ಪಾಟೀಲ ಪುರಸಭೆಯ ಸದಸ್ಯರು ಸಂತೋಷ ಕಡಿವಾಲ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತ ಸಜನ ಇನ್ನೂ ಅನೇಕರು ಉಪಸ್ಥಿತರಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ