December 22, 2024

Bhavana Tv

Its Your Channel

ರೋಣ; ಖುಷಿಯಿಂದ ಶಾಲೆಗೆ ಬಂದ ಮಕ್ಕಳು

ರೋಣ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬಹು ದಿನಗಳ ನಂತರ ಸೋಮವಾರ ಆರಂಭವಾದ ಪ್ರಾಥಮಿಕ ಶಾಲೆಯ ಮಕ್ಕಳು ಖುಷಿಯಿಂದ ಶಾಲೆಗೆ ಬಂದರು. ಕೈಮುಗಿದು ವಿದ್ಯಾ ದೇಗುಲ ಪ್ರವೇಶಿಸಿ ಶಿಕ್ಷಕರ ಆಶೀರ್ವಾದ ಪಡೆಯುತ್ತಿರುವ ದೃಶ್ಯಗಳು ಕೆಲವೆಡೆ ಕಂಡು ಬಂದವು ಅಷ್ಟೇ ಅಲ್ಲದೆ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಸಿಹಿ ಊಟವನ್ನು ಉಣಬಡಿಸಲಾಯಿತು. ಮೊದಲ ದಿನದ ಹಿಗ್ಗಿನಲ್ಲಿ ವಚನಪದ ಹೇಳಿ ಚಪ್ಪಾಳಿ ಗೀಟಿಸಿಕೊಂಡ ಖುಷಿಯಲ್ಲಿ ತೇಲುತ್ತಿದ್ದರು.

        ಸ್ಥಳೀಯ ಗ್ರೀನ್ ವುಡ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಹಾಗೂ ಸಿದ್ದರಾಮೇಶ್ವರ ವಿದ್ಯಾವರ್ದಕ ಶಾಲೆಯಲ್ಲಿ ಮಕ್ಕಳನ್ನು ಖುಷಿಯಿಂದ ಬರಮಾಡಿಕೊಂಡರು. 

ಈ ವೇಳೆ ಮಾತನಾಡಿದ ಸಿದ್ದರಾಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅವಿನಾಶ ಸಾಲಿಮನಿ, , ಮಕ್ಕಳು ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು. ಯಾರೂ ಪರಸ್ಪರ ಜೊತೆಯಲ್ಲಿ ಸೇರಬಾರದು. ಅಂತರ ಕಾಪಾಡಿಕೊಳ್ಳಬೇಕು. ಶಾಲೆಗೆ ಬರುತ್ತಿದ್ದಂತೆ ಸ್ಯಾನಿಟೈಸರ್ ಹಾಕಿಕೊಳ್ಳಬೇಕು. ಯಾರಿಗಾದರೂ ಜ್ವರ, ನೆಗಡಿ, ಕೆಮ್ಮಿನ ಲಕ್ಷಣ ಕಂಡುಬAದರೆ ಅಂತಹವರು ತಕ್ಷಣ ಶಿಕ್ಷಕರ ಗಮನಕ್ಕೆ ತರಬೇಕು ಹಾಗೂ ಆಸ್ಪತ್ರೆಗೆ ಹೋಗಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ಪೋಷಕರೂ ಕೂಡ ಮಕ್ಕಳ ಕಡೆಗೆ ಹೆಚ್ಚು ಕಾಳಜಿವಹಿಸಬೇಕು ಎಂದು ಜಾಗೃತಿ ಮೂಡಿಸಿದರು
ವರದಿ ವೀರಣ್ಣ ಸಂಗಳದ

error: