December 22, 2024

Bhavana Tv

Its Your Channel

ಶಾಲಾ ಆವರಣ ಸ್ವಚ್ಚಗೊಳಿಸಲು ಆಗ್ರಹ

ನರೇಗಲ್: ಸ್ಥಳೀಯ ಬಸ್ ನಿಲ್ದಾಣದ ಎದುರಿಗೆ ಇರುವ ಸರ್ಕಾರಿ ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಹುಲ್ಲು ಹಾಗೂ ಕಂಟಿಗಳು ಹೇರಳವಾಗಿ ಬೆಳೆದಿದ್ದು ಶಾಲೆಗೆ ಬರುವ ಮಕ್ಕಳಿಗೆ ತೊಂದರೆ ಆಗುತ್ತಿದೆ ಆದಕಾರಣ ಹುಲ್ಲು ಹಾಗೂ ಕಂಟಿಗಳನ್ನು ತೆಗೆದು ಹಾಕಿ ಸ್ವಚಗೊಳಿಸಬೇಕು ಎಂದು ಗ್ರಾಮಸ್ಥರಾದ ಪ್ರಸಾದ ಸತ್ಯಣ್ಣವರ, ಶಿವುಕುಮಾರ ಗೌಡರ, ಈರಪ್ಪ ಮಾದರ ಆಗ್ರಹಿಸಿದ್ದಾರೆ.
ಕೊರೊನಾ ಹಾವಳಿಯಿಂದ ಎರಡು ವರ್ಷಗಳ ನಂತರ ಆರಂಭವಾದ ಶಾಲೆಗಳಿಗೆ ಮಕ್ಕಳು ಬರಲು ಭಯದ ವಾತಾವರಣ ನಿರ್ಮಾಣವಾಗಿದೆ. ಅಲ್ಲಲ್ಲಿ ಹುಲ್ಲಿನಲ್ಲಿ ಹಾಗೂ ಕಂಟಿಗಳಲ್ಲಿ ಹಾವಿನ ಮರಿಗಳು ಕಾಣುತ್ತಿದ್ದು ಹೆಜ್ಜೆ ಹಾಕಲು ಹಿಂದೇಟು ಹಾಕುವಂತಾಗಿದೆ. ಅದಲ್ಲದೆ ಶಾಲಾ ಆವರಣದ ಹುಲ್ಲಿನಲ್ಲಿ ಮದ್ಯದ ಬಾಟಲಿಗಳು, ಪ್ಯಾಕೇಟುಗಳು ಕಂಡು ಬರುತ್ತಿವೆ ಆದ ಕಾರಣ ಶಾಲಾ ಆವರಣವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಲು ಸ್ಥಳೀಯ ಆಡಳಿತ ಹಾಗೂ ಶಾಲಾ ಆಡಳಿತ ಮಂಡಿಯವವರು, ಶಿಕ್ಷಕರು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ವರದಿ ವೀರಣ್ಣ ಸಂಗಳದ

error: