December 20, 2024

Bhavana Tv

Its Your Channel

ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ರವರಿಗೆ ಅಭಿಮಾನಿ ಬಳಗದಿಂದ ಶ್ರದ್ಧಾಂಜಲಿ

ರೋಣ: ಡಾಕ್ಟರ್ ರಾಜ್ ಕುಮಾರ ಅಭಿಮಾನಿ ಬಳಗ ಮತ್ತು ಪುನೀತ ರಾಜ್ ಕುಮಾರ್ ಒಕ್ಕೂಟ ಮತ್ತು ಅಭಿವೃದ್ಧಿ ಹೋರಾಟ ಸಮಿತಿ ರೋಣ ಇವರಿಂದ ಭಾವಪೂರ್ಣ ಶ್ರದ್ಧಾಂಜಲಿ ಇಂದು ರೋಣ ನಗರದಲ್ಲಿ ಸಲ್ಲಿಸಲಾಯಿತು.
‘ನಟ ಪುನೀತ್ ರಾಜ್‌ಕುಮಾರ್ ಸಾವಿನಿಂದ ಚಿತ್ರಪ್ರದರ್ಶಕರಿಗೆ ದೊಡ್ಡ ಹಾನಿ’
ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸಾಮರ್ಥ್ಯವಿದ್ದ ನಟ ಪುನೀತ್ ರಾಜ್‌ಕುಮಾರ್ ಅವರ ಸಾವಿನಿಂದ ಸ್ಯಾಂಡಲ್‌ವುಡ್ ಶೇ ೫೦ರಷ್ಟು ಸತ್ತಂತೆಯೇ ಎಂದು ಹೇಳಿದ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್.ಆರ್.ಓದುಗೌಡರು ಕ್ಷಣಕಾಲ ಮೌನಕ್ಕೆ ಜಾರಿದರು.ರಾಜರತ್ನನ ಸಾವಿನಿಂದ ಚಿತ್ರಪ್ರದರ್ಶಕರಿಗಂತೂ ಬಹುದೊಡ್ಡ ಹಾನಿಯಾಗಿದೆ ಎಂದು ಹೇಳಿದರು.

ಮೇರುನಟ ರಾಜ್‌ಕುಮಾರ್ ಅವರ ಹಾದಿಯಲ್ಲೇ ಸಾಗುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದಿಂದಷ್ಟೇ ಅಲ್ಲದೇ; ಹೃದಯ ಶ್ರೀಮಂತಿಕೆಯಿAದಲೂ ಅಪಾರ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದರು. ವಿವಾದಗಳಿಂದ ದೂರ ಉಳಿದಿದ್ದ ಸಜ್ಜನ ನಟರಾದ ಪುನೀತ್, ತಮ್ಮ ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ಎಲ್ಲರಿಗೂ ಹತ್ತಿರವಾಗಿದ್ದರು ಎಂದು ಅವರು ಅಪ್ಪು ವ್ಯಕ್ತಿತ್ವವನ್ನು ನೆನೆದರು.

ನಿರ್ಮಾಪಕರು ಮತ್ತು ಚಿತ್ರ ಪ್ರದರ್ಶಕರ ಬಗ್ಗೆ ಪುನೀತ್ ಅಪಾರ ಪ್ರೀತಿ ಹೊಂದಿದ್ದರು. ಅವರ ಅಕಾಲಿಕ ಸಾವು ಕನ್ನಡ ಚಿತ್ರರಂಗವನ್ನು ಖಂಡಿತವಾಗಿಯೂ ಸಂಕಷ್ಟಕ್ಕೆ ದೂಡಲಿದೆ. ಅವರ ಸ್ಥಾನವನ್ನು ಮತ್ತೊಬ್ಬರು ತುಂಬುತ್ತಾರೆ ಎಂಬ ನಂಬಿಕೆ ಚಿತ್ರ ಪ್ರದರ್ಶಕರಿಗೆ ಇಲ್ಲವಾಗಿದೆ. ಅಪ್ಪನ ಮುತ್ತಿನಂತ ವ್ಯಕ್ತಿತ್ವದ ಜತೆಗೆ ತನ್ನದೇ ಛಾಪಿನಿಂದ ಚಿತ್ರರಂಗದಲ್ಲಿ ಬೆಳೆಯುತ್ತಿದ್ದ ಪುನೀತ್ ಅವರ ನಿಧನದಿಂದ ಕನ್ನಡ ಚಿತ್ರೋದ್ಯಮ ಇಂದು ಎರಡನೇ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿದೆ ಎಂದು ಹೇಳಿದರು.

ಗದಗ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಎಲ್ಲ ಜಿಲ್ಲೆಗಳಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ಚಾಲೆಂಜಿAಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪುನೀತ್ ಅಭಿನಯದ ಸಿನಿಮಾಗಳು ಹೆಚ್ಚು ದಿನಗಳು ನಡೆಯುತ್ತಿತ್ತು

ಈ ಸಂದರ್ಭದಲ್ಲಿ ಅಭಿಷೇಕ್ ನವಲಗುಂದ ರುದ್ರಪ್ಪ ಹೆಬ್ಬಳ್ಳಿ ಮಂಜುನಾಥ ಪ್ರಮೋದ ಗಂಗಯ್ಯ ರಾಜು ನವಲಗುಂದ ಅಬ್ಬು ಹೊಸೂರ ಇನ್ನೂ ಅನೇಕರು ಪುನೀತ್ ಅಭಿಮಾನಿಗಳು ಹಾಜರಿದ್ದರು

ವರದಿ ವೀರಣ್ಣ ಸಂಗಳದ

error: