December 22, 2024

Bhavana Tv

Its Your Channel

ದಲಿತರ ವಿರುದ್ದ ಸಿದ್ದರಾಮಯ್ಯಯವರ ಹೇಳಿಕೆ ಖಂಡಿಸಿ ರೋಣದಲ್ಲಿ ಪ್ರತಿಭಟನೆ

ರೋಣ: ಇಂದು ರೋಣ ನಗರದಲ್ಲಿ ಬಿಜೆಪಿ ಎಸ್ ಸಿ ಮೊರ್ಚಾ ವತಿಯಿಂದ ವಿರೋಧ ಪಕ್ಷದನಾಯಕರಾದ ಸಿದ್ದರಾಮಯ್ಯನವರು ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು ಈ ಸಮಯದಲ್ಲಿ ಪುರಸಭೆ ಸದಸ್ಯ ಸಂಗಪ್ಪ ಜಿಡ್ಡಿಬಾಗಿಲ ಮಾತನಾಡಿ ದಲಿತರಿಗೆ ಅವಹೇನಮಾಡಿದ ಸಿದ್ದರಾಮಯ್ಯ ದಲಿತರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು ಬಿಜೆಪಿ ಎಸ್ ಸಿ ಮೊರ್ಚಾ ಅಧ್ಯಕ್ಷರಾದ ಮಲ್ಲು ಮಾದರ ಮಾತನಾಡಿ ರಾಜ್ಯದಲ್ಲಿ ಈ ಹಿಂದೆ ದಲಿತರ ಮತಪಡೆದು ಮುಖ್ಯಮಂತ್ರಿಯಾಗಿ ಜೆಡಿಎಸ್ ಬಿಟ್ಟು ಕಾಂಗ್ರೇಸ್‌ಗೆ ಹೋಗಿ ಕಾಂಗ್ರೇಸ್‌ನಲ್ಲಿ ಇರುವ ದಲಿತರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿ ಖರ್ಗೆ ಪರಮೇಶ್ವರ ಅವರನ್ನು ಸೋಲಿಸಿ ಅನ್ಯಾಯ ಮಾಡಿದ್ದಿರಿ ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೊಗಿದ್ದಾರೆ ಅಂತಾ ಹೇಳಿದ್ದಿರಿ ನೀವು ಕಾಂಗ್ರೇಸ್‌ಗೆ ಯಾವ ಪಾಡಿಗೆ ಹೊಗಿದ್ದಿರಿ?? ಎಂದರು ತಕ್ಷಣ ರಾಜ್ಯದ ದಲಿತರ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ರಾಜ್ಯದ ತುಂಬಾ ಬಿಜೆಪಿ ಎಸ್ ಸಿ ಮೊರ್ಚಾ ಉಗ್ರ ಹೊರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹನಮಂತ ಪೂಜಾರ ಯಲ್ಲಪ್ಪ ಪೂಜಾರ ಪರಸು ಮಾದರ ಗೋಪಾಲ್ ಚವ್ಹಾನ ಕುಮಾರ ಹಲಗಿ ಭರಮಪ್ಪ ಪೂಜಾರ ಶರಣಪ್ಪ ಅರಳಿಗಿಡದ ಬಸು ಭಜಂತ್ರಿ ರೋಣಪ್ಪ ಹಲಗಿ ರುದ್ರೇಶ ಅಕ್ಷಯ ದೊಡಮನಿ ಅರಳಿಗಿಡ ಬಿಜೆಪಿ ಮುಖಂಡರು ಹಾಜರಿದ್ದರು

ವರದಿ ವೀರಣ್ಣ ಸಂಗಳದ

error: