December 21, 2024

Bhavana Tv

Its Your Channel

ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಎಸ್.ಸಿ ಮೋರ್ಚಾದಿಂದ ಪ್ರತಿಭಟನೆ

ಗದಗ : ಇಂದು ರಾಜ್ಯ ಬಿಜೆಪಿ ಎಸ್.ಸಿ ಮೋರ್ಚಾದ ರಾಜ್ಯಾಧ್ಯಕ್ಷರಾದ ಶ್ರೀ ಚಲವಾದಿ ನಾರಾಯಣ ಸ್ವಾಮಿ ಯವರ ಅದೇಶದಂತೆ ನರಗುಂದ ಮತಕ್ಷೇತ್ರದ ಹೊಳೆಆಲೂರ ಮಂಡಲ ಬಿಜೆಪಿ ಎಸ್.ಸಿ ಮೋರ್ಚಾದ ವತಿಯಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿ ಸೇರುತ್ತಿದ್ದಾರೆ ಅಂತ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ ಆ ಒಂದು ಹೇಳಿಕೆ ಖಂಡಿಸಿ ಹೊಳೆಆಲೂರ ಗ್ರಾಮದ ಆಲೂರ ವೆಂಕಟರಾಯರ ವೃತ್ತದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಗದಗ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಶರಣು ಚಲವಾದಿ ಹೊಳೆಆಲೂರ ಮಂಡಲ ಬಿಜೆಪಿ ಅಧ್ಯಕ್ಷರಾದ ಶೇಖಪ್ಪ ಮಾದರ ಮಾತನಾಡಿದರು, ಪ್ರಧಾನ ಕಾರ್ಯದರ್ಶಿ ಮುದಿಯಪ್ಪ ದಾನಿ, ಮುಖಂಡರಾದ ಯಲ್ಲಪ್ಪ ಚಲವಾದಿ ಮಾತನಾಡಿದರು.

*ಸಿದ್ದರಾಮಯ್ಯನವರು ಈ ಕೂಡಲೇ ದಲಿತರ ವಿರುದ್ಧದ ಈ ಹೇಳಿಕೆಯನ್ನು ವಾಪಸು ತೆಗೆದುಕೊಂಡು ರಾಜ್ಯದ ದಲಿತ ಸಮುದಾಯದ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯದರ್ಶಿ ಶರಣು ಚಲವಾದಿ, ಹೊಳೆಆಲೂರ ಮಂಡಲ ಬಿಜೆಪಿ ಅಧ್ಯಕ್ಷರಾದ ಶೇಖಪ್ಪ ಮಾದರ, ಹೊಳೆಆಲೂರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುದಿಯಪ್ಪ ದಾನಿ, ಉಮೇಶ ಪೂಜಾರ, ಯಲ್ಲಪ್ಪ ಚಲವಾದಿ, ರಾಜು ಕೊಳ್ಳಪ್ಪನವರ, ದುರ್ಗಪ್ಪ ಮಾದರ, ಕರಿಯಪ್ಪ ಚಲವಾದಿ, ಲೆಂಕೆಪ್ಪ ಹೊಸಮನಿ, ಬಸವರಾಜ ಹಾದಿಮನಿ, ಪಡಯಪ್ಪ ಮಾದರ, ಶಿವು ಮಾದರ, ಹನಮಂತ ನಂದಿ, ಕುಮಾರ ಕಾಳೆ, ರವಿ ಲಮಾಣಿ, ಶರಣಪ್ಪ ಚಲವಾದಿ, ಬಸವರಾಜ ಪುನಗುಂಡಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ವೀರಣ್ಣ ಸಂಗಳದ ರೋಣ

error: