December 22, 2024

Bhavana Tv

Its Your Channel

ಶಾಲಾ ಮಕ್ಕಳಿಂದ ಕಾನೂನು ಅರಿವು ಜಾಥ

ರೋಣ: ಪಟ್ಟಣದ ವಿವಿಧ ಶಾಲೆಯ ಸಹಕಾರದಲ್ಲಿ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಶಾಲಾ ಮಕ್ಕಳಿಂದ ಕಾನೂನು ಅರಿವು ಜಾಥ ನಡೆಯಿತು.
ಈ ವೇಳೆ ಮಾತನಾಡಿದ ಹಿರಿಯ ನ್ಯಾಯಾಧೀಶರಾದ ರಮಾಕಾಂತ ಚವಾಣ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ಶಿಕ್ಷಣ ಮುಖ್ಯವಾಗಿದೆ. ಆದ್ದರಿಂದ ನೀವುಗಳು ಶಿಕ್ಷಣವನ್ನು ಕಲಿಯುವುದರ ಜೊತೆಗೆ ಕಾನೂನಿನ ಅರಿವನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜನ್ಮ ಪಡೆದ ನಂತರ ಪ್ರತಿಯೊಬ್ಬರಿಗೂ ಕಾನೂನಿ ಅಗತ್ಯತೆ ಅವಶ್ಯಕವಾಗಿದೆ ಆದ್ದರಿಂದ ಕಾನೂನು ಅರಿವು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಬಹುತೇಕ ಜನರಲ್ಲಿ ಕಾನೂನುಗಳ ಬಗ್ಗೆ ಸಮರ್ಪಕವಾದ ಮಾಹಿತಿ ಇಲ್ಲದ್ದರಿಂದ ನಾನಾ ಅವಘಡಗಳು ನಡೆಯುತ್ತವೆ. ಇವುಗಳು ಆಗಬಾರದು ಎಂದರೆ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಮಾಹಿತಿ ಪಡೆಯಬೇಕು ಎಂದರು. ಸಂವಿಧಾನದಲ್ಲಿ ಅಳವಡಿಸಿರುವ ಎಲ್ಲ ಕಾನೂನುಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಪ್ರತಿನಿತ್ಯದ ಚಟುವಟಿಕೆಗಳನ್ನು ನೆಮ್ಮದಿಯಾಗಿ ಜೀವನ ನಡೆಸಲು ಕಾನೂನು ಅರಿವು ಪಡೆಯುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟರು.
ಎಂ.ಸಿ.ಎಸ್. ಸರ್ಕಾರಿ ಶಾಲೆಯ ಆವರಣದಿಂದ ಆರಂಭವಾದ ಜಾಥ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಈ ಸಂದರ್ಭದಲ್ಲಿ ಪ್ರಧಾನ ದಿವಾಣಿ ನ್ಯಾಯಾಧೀಶ ಮಹಮ್ಮದ್ ಯೂನಸ್ ಅಥಣಿ, ರೋಣ ವಕೀಲರ ಸಂಘದ ಬಿ. ಎಸ್. ರಂಗನಗೌಡ್ರ, ಹೆಚ್ಚುವರಿ ನ್ಯಾಯಾಧೀಶ ಮತ್ತು ಪ್ರ. ದ. ನ್ಯಾ ದಂಡಾಧಿಕಾರಿ ಸಚಿನ್ ಎಚ್. ಆರ್, ತಹಶೀಲ್ದಾರ ಜೆ. ಬಿ. ಜಕ್ಕಣಗೌಡ್ರ, ಎಸ್. ಎಚ್. ಚವಾಣ, ಶಿವಕುಮಾರ ಚಿತ್ರಗಾರ, ಬಿ. ಎಂ. ಮಾಳಿಕೊಪ್ಪ, ಸಂತೋಷಕುಮಾರ ಪಾಟೀಲ,ಪ್ರವೀಣ ಪಲ್ಲೇದ ಸುಧೀರ ಬೆಂಕಿ, ಜಿ. ಜಿ. ಮತ್ತಿಕಟ್ಟಿ ಇದ್ದರು.

ವರದಿ ವೀರಣ್ಣ ಸಂಗಳದ ರೋಣ

error: