December 22, 2024

Bhavana Tv

Its Your Channel

ರೋಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಾಲಯದಲ್ಲಿ ಜವಾಹರಲಾಲ್ ನೆಹರುರವರ ಜಯಂತಿ ಆಚರಣೆ

ಇಂದು ರೋಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಾಲಯದಲ್ಲಿ ಭಾರತದ ಪ್ರಥಮ ಪ್ರಧಾನಿ ಹಾಗೂ ಸ್ವಾತಂತ್ರ‍್ಯ ಸೇನಾನಿ ಪಂಡಿತ ಜವಾಹರಲಾಲ್ ನೆಹರು ಅವರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ರೋಣ ಪುರಸಭೆ ಉಪಾಧ್ಯಕ್ಷರಾದ ಮಿಥುನ್ ಜಿ ಪಾಟೀಲ್ ಅವರು ಮಾತನಾಡಿ ನೆಹರೂ ಅವರು ಆಧುನಿಕ ಭಾರತದ ನಿರ್ಮಾತೃ ಆಗಿದ್ದಾರೆ. ಅವರ ಆದರ್ಶ ಮತ್ತು ಜೀವನ ತತ್ವಗಳು ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿವೆಎಂದು ಹೇಳಿದರು.

ಈ ಸಂದರ್ಭದಲ್ಲಿ ಅಣ್ಣಪ್ಪ ನವಲಗುಂದ, ಪುರಸಭೆ ಸದಸ್ಯರಾದ ಬಾವಾಸಾಬ ಬೆಟಗೇರಿ, ದಾವಲಸಾಬ ಬಾಡಿನ, ನಾಗಪ್ಪ ದೇಶಣ್ಣವರ, ಆನಂದ್ ಚಂಗಳಿ, ಶ್ರೀ ಎ ಎಸ್ ಗದಗಕರ್, ಶ್ರೀ ಅನಿಲ್ ನವಲಗುಂದ, ಯಲ್ಲಪ್ಪ ಕೀರೆಸೂರ, ಅಧ್ಯಕ್ಷರು ರೋಣ ಶಹರ ಯುವ ಕಾಂಗ್ರೆಸ್ ಸಮಿತಿ, ಶ್ರೀ ಅಸ್ಲಾಂ ಕೊಪ್ಪಳ ಉಪಾಧ್ಯಕ್ಷರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ, ಶ್ರೀ ಎಮ್ ಬಿ ರಾಯನಗೌಡ್ರ, ರಫೀಕ್ ಮದರಂಗಿ, ಬಸವರಾಜ್ ಹಲಗಿ ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: