December 22, 2024

Bhavana Tv

Its Your Channel

ರೋಣ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿ ಜಯಂತಿ

ರೋಣ: ಆರ್ ಎಸ್ ಪಾಟೀಲ್ ಜಿನ್ನಿಂಗ್ ಫ್ಯಾಕ್ಟರಿ ಆವರಣದಲ್ಲಿರುವ ರೋಣ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಭಾರತದ ಏಕೈಕ ಮಹಿಳಾ ಪ್ರಧಾನಿ, ಭಾರತದ ಉಕ್ಕಿನ ಮಹಿಳೆ ಹಾಗೂ ಬಡವರ ತಾಯಿಯಂದೇ ಖ್ಯಾತರಾದ ದಿ. ಇಂದಿರಾಗಾAಧೀಯವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ರೋಣ ಪುರಸಭೆ ಅಧ್ಯಕ್ಷರಾದ ವಿದ್ಯಾ ದೊಡ್ಡ ಮನಿ, ಉಪಾಧ್ಯಕ್ಷರಾದ ಮಿಥುನ ಜಿ ಪಾಟೀಲ, ವ್ಹಿ.ಬಿ. ಸೋಮನಕಟ್ಟಿಮಠ ಮಹಾಪ್ರಧಾನ ಕಾರ್ಯದರ್ಶಿಗಳು, ಸಂಗು ನವಲಗುಂದ, ರೋಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಕಾಂತ ಜಾಲಿಹಾಳ, ರೋಣ ಶಹರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯಲ್ಲಪ್ಪ ಕಿರೇಸೂರ, ಪುರಸಭೆ ಸದಸ್ಯರುಗಳಾದ ಅಂದಪ್ಪ ಗಡಗಿ, ದುರಗಪ್ಪ ಹಿರೇಮನಿ, ಶ್ರೀಮತಿ ಶಕುಂತಲಾ ಚಿತ್ರಗಾರ, ಗೀತಾ ಮಲ್ಲಪ್ಪ ಮಾಡಲಗೇರಿ, ಹಾಗೂ ಸಂಜಯ ದೊಡ್ಡಮನಿ, ಮಲ್ಲನಗೌಡ ರಾಯನಗೌಡ್ರ, ಅಸ್ಲಾಂ ಕೊಪ್ಪಳ, ಆನಂದ ಚಂಗಳಿ, ಶ್ರೀ ಸಂಜಯ ದೊಡ್ಡಮನಿ, ಶಿ ಮಲ್ಲನಗೌಡ ರಾಯನಗೌಡ್ರ, ಅಸ್ಲಾಂ ಕೊಪ್ಪಳ, ಮಹೇಶ್ ಬ್ಯಾಳಿ,ಸೇರಿದಂತೆ ಮತ್ತೀರರು ಉಪಸ್ಥಿತರಿದ್ದರು.

ವರದಿ ವೀರಣ್ಣ ಸಂಗಳದ ರೋಣ

error: