December 22, 2024

Bhavana Tv

Its Your Channel

ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರಿಗೆ ‘ನವಿಲುಗರಿ’ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಗದಗ.’ನವಿಲುಗರಿ ‘ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ) ಧಾರವಾಡ, ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಪ್ರಯುಕ್ತ ಧಾರವಾಡದ ರಂಗಾಯಣದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ಧ ಕನ್ನಡ ಹಬ್ಬದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳ ಮೂಲಕ ಸಹಸ್ರಾರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜನಪದ ಕೂಗು ಶಿಕ್ಷಣ ನೀಡಿದ ಸಾಮಾಜಿಕ ಹೋರಾಟಗಾರ ಖ್ಯಾತ ಜನಪದ ಕಲಾವಿದ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠರವರಿಗೆ ‘ನವಿಲುಗರಿ’ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಧಾರವಾಡದ ಹಿರಿಯ ಸಾಹಿತಿ ಮಾಲತಿ ಪಟ್ಟಣಶೆಟ್ಟಿ, ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನಿರ್ದೇಶಕರಾದ ಶರಣು ಅಂಗಡಿ, ನಂದಗಡದ ಸಿ,ಪಿ,ಐ, ಸತೀಶ ಮಳಗೊಂಡ, ಹುಬ್ಬಳ್ಳಿ ಇನ್ಸ್ಪೆಕ್ಟರ್ ಹೆಸ್ಕಾಂ ಮುರಗೇಶ ಚೆನ್ನನ್ನವರ,ನವಿಲುಗರಿ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಪ್ರತಿಭಾ ಪಾಟೀಲ,ಮೇಘಾ ಹುಕ್ಕೇರಿ, ಹಿರಿಯ ಸಾಹಿತಿಗಳಾದ ಶಂಕರ ಹಲಗತ್ತಿ, ಸಾಯಿ ಪದವಿ ಪೂರ್ವ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ವೀಣಾ ಬಿರಾದರ್, ಪಿ.ಟಿ.ಎಲಿಗಾರ ಶಿಕ್ಷಣ ಸಂಸ್ಥೆಯ ಶಶಿಧರ ಎಲಿಗಾರ,ಉಪನ್ಯಾಸಕರಾದ ಸಂತೋಷ ಬದ್ರಾಪೂರ ಸೇರಿದಂತೆ ಕವಿಗಳು, ಕಲಾವಿದರು ಪಾಲ್ಗೋಂಡಿದ್ಧರು.

error: