December 22, 2024

Bhavana Tv

Its Your Channel

ಕೃಷಿಯಲ್ಲಿ ಈಗಿನ ಯುವಕರು ತೊಡಗಿಕೊಳ್ಳಬೇಕು -ರಂಗನಾಥ ರೆಡ್ಡಿ.

ರೋಣ: ಕೃಷಿಯಲ್ಲಿ ಈಗಿನ ಯುವಕರು ತೊಡಗಿಕೊಳ್ಳಬೇಕು ಎಂದು ಕೃಷಿಕ ಹಾಗೂ ಕೃಷಿ ಶ್ರೇಷ್ಠ ಪ್ರಸಸ್ತಿ ವಿಜೇತ ರಂಗನಾಥ ರೆಡ್ಡಿ ಹೇಳಿದರು. ಅವರು ತಾಲೂಕಿನ ಹೊಳೆಆಲೂರ ಗ್ರಾಮದಲ್ಲಿ ರೈತ ಆಶಾಕೀರಣ ಕೃಷಿ ವಿಕಾಸ ಪ್ರೋಡ್ಯೂಸರ್ ಕಂಪನಿ ಲಿಮಿಟೆಡೆ ಶಾಖೆ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೃಷಿಯಲ್ಲಿ ಯಾವುದೆ ವ್ಯಕ್ತಿ ನಂಬಿ ದುಡಿದರೆ ಭೂಮಿ ತಾಯಿ ಯಾವತ್ತು ದ್ರೋಹ ಮಾಡುವುದಿಲ್ಲ, ಆದರಿಂದ ಕೃಷಿಯಲ್ಲಿ ತೊಡಗಿಕೊಂಡು ತಮ್ಮ ಜೀವನವನ್ನ ಸಾಗಿಸಬಹುದು ಹಾಗೂ ಈ ಕಂಪನಿ ಸ್ಥಾಪನೆಯಿಂದ ಸಣ್ಣ ಮತ್ತು ದೊಡ್ಡ ರೈತರಿಗೆ ಸಹಾಯಕಾರಿಯಾಗುತ್ತದೆ ಮತ್ತು ಕೃಷಿ ತೊಡಗಿಕೊಳ್ಳುವ ಯುವಕರಿಗೆ ಪ್ರೋತ್ಸಾಹ ದೊರೆಯುತ್ತದೆ ಹಾಗೂ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗಲು ರೈತರಿಗೆ ಕಂಪನಿ ಸಹಾಯಕಾರಿಯಾಗುತ್ತದೆ. ನಾನು ಒಂದು ಎಕರೆಯಲ್ಲಿ ಅನೇಕ ನೀರಾವರಿ ಬೆಳೆ ಮತ್ತು ಪಶು ಸಂಗೋಪನೆ, ಕುರಿ ಸಾಕಾನಿಕೆ, ಕೋಳಿ ಸಾಕಾನಿಕೆ ಒಗ್ಗೂಡಿಸಿ ಇತರೆ ಬೆಳೆಗಳನ್ನು ಬೆಳೆದು ವರ್ಷಕ್ಕೆ ೫ ಲಕ್ಷ ರೂ. ಲಾಭವನ್ನ ಪಡೆಯುತ್ತಿದ್ದೇನೆ ಹಾಗೂ ಲಾಭದಾಯಕ ಬೆಳೆಗಳನ್ನು ರೈತರು ಬೆಳೆದು ತಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಬೇಕು ಎಂದು ಹೇಳಿದರು. ಈ ವೇಳೆ ದಿವ್ಯ ಸಾನಿಧ್ಯವನ್ನ ಯಚ್ಚರಸ್ವಾಮಿ-ಮಠದ ಯಚ್ಚರಸ್ವಾಮಿಗಳು ವಹಿಸಿದ್ದರು. ಈ ವೇಳೆ ಪ್ರಕಾಶ ಭಜಂತ್ರಿ, ಸಂಗಪ್ಪ ದುಗಲದ, ತೋಟಗಾರಿಕೆ ಇಲಾಖೆ ಅಧಿಕಾರಿ ಬಸಪ್ಪ.ಬೆನಹಾಳ, ಪಿಡಿಓ ಬಸವರಾಜ ಗಿರಿತಿಮ್ಮಣ್ಣವರ, ಕೃಷಿ ಅಧಿಕಾರಿ ಸಾವಿತ್ರಿ ಶಿವನಗೌಡ್ರ, ಖೇಖಪ್ಪ ಕೋಳೆರಿ, ರವಿ ಬೊಮ್ಮನಗೌಡ್ರ, ಈಶಪ್ಪ ಬಿಳೆಕಲ್ಲ, ತಿಪ್ಪಣ್ಣ ಹೆಗ್ರಿ, ವೀರಣ್ಣ ಅಂಗಡಕಿ, ಬಸವರಾಜ ಕಾತರಕಿ, ಸರೋಜಮ್ಮ ಗೌರಿಮಠ, ಫಕ್ಕೀರಪ್ಪ ಹೆಬ್ಬಳ್ಳಿ, ಹಾಗೂ ರೈತರು, ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: