ರೋಣ: ಇಂದು ಗಜೇಂದ್ರಗಡದಲ್ಲಿ ನಡೆದ ಧಾರವಾಡ,ಗದಗ,ಹಾವೇರಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಭಾಜಪ ಅಭ್ಯರ್ಥಿ ಪ್ರದೀಪ ಶೆಟ್ಟರ ಅವರ ಚುನಾವಣಾ ಪ್ರಚಾರ ಸಭೆಯನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ.ಸಿ.ಪಾಟೀಲ ಅವರು ಉದ್ಘಾಟನೆ ಮಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಿಧಾನ ಸಭೆ ಚುನಾವಣೆ ಭಾಜಪ ಅಭ್ಯರ್ಥಿ ಪ್ರದೀಪ ಶೆಟ್ಟರ ಮಾತನಾಡಿ ಡಿಸೆಂಬರ್ ೧೦ರಂದು ನಡೆಯುವ ಚುನಾವಣೆಯ ಮತದಾನದಲ್ಲಿ ಪ್ರಥಮ ಪ್ರಾಶಸ್ತದ ಮತವನ್ನು ನೀಡಿ ಆರ್ಶೀವದಿಸಬೇಕೆಂದು ವಿನಂತಿಸಿದರು..
ಈ ಸಭೆಯಲ್ಲಿ ಗದಗ ಜಿಲ್ಲಾ ಭಾಜಪ ಅಧ್ಯಕ್ಷರಾದ ಮೋಹನ ಮಾಳಶೆಟ್ಟರು ,ರೋಣ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕೆ.ಎಸ್.ಎಸ್.ಐ.ಡಿ.ಸಿ ಅಧ್ಯಕ್ಷರಾದ ಕಳಕಪ್ಪ.ಜಿ.ಬಂಡಿ ,ವಿಧಾನಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ್ ,ವಿಭಾಗ ಸಹ ಪ್ರಭಾರಿಯಾದ ನಾರಾಯಣ ಜರ್ತಾರಕರ್ ,ಮಂಡಲ ಅಧ್ಯಕ್ಷರಾದ ಮುತ್ತಣ್ಣ ಕಡಗದ ,ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಮುತ್ತಣ್ಣ ಲಿಂಗನಗೌಡ್ರು ,ಮುಖಂಡರಾದ ಬಿ.ಎಮ್.ಸಜ್ಜನರ್ ,ಅಶೋಕ್ ವನ್ನಾಲ್, ಮೋಹನ ರಾಯಬಾಗಿ,ಎಸ್.ಎಸ್.ಬೆಲ್ಲದ್,ವಿರುಪಾಕ್ಷಪ್ಪ ಕರಿಹೋಳಿ,ಸಂಗನಗೌಡ ಮಾಲಿಪಾಟೀಲ್, ಅಶೋಕ ನವಲಗುಂದ,ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಮಲ್ಲಾಪುರ,ನೀಲಪ್ಪ ಗುರಿಕಾರ್,ಬಿಜೆಪಿ ಬೆಂಬಲಿತ ಗ್ರಾ.ಪಂ ಅಧ್ಯಕ್ಷರು, ಸದಸ್ಯರು,,ಗಜೇಂದ್ರಗಡ ,ರೋಣ,ನರೇಗಲ್ ಪುರಸಭೆ/ಪಟ್ಟಣ ಪಂಚಾಯತಿಗಳ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ