ರೋಣ ಸಾಹಿತ್ಯ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯು ನಡೆಯಿತು.
ಈ ಸಭೆಯು ಶ್ರೀ ಬಸವಂತಪ್ಪ ಹೆಚ್. ತಳವಾರ ರೋಣ ತಾಲೂಕ ನಾಯಕ ಸಂಘದ ಅಧ್ಯಕ್ಷರು ಇವರು ರೋಣ ತಾಲೂಕಿನ ಹಳ್ಳಿಗಳ ಜಾತ್ರೆಯ ಪೋಸ್ಟರ ದೇಣಿಗೆ ಪುಸ್ತಕ ಉದ್ಘಾಟಿಸಿ ಮಾತನಾಡಿದರು. ಶ್ರೀ ವಾಲ್ಮೀಕಿ ಜಾತ್ರೆಯ ದೇಣಿಗೆ ಪುಸ್ತಕ ಹಾಗೂ ಪೋಷ್ಟರ್ಗಳನ್ನು ಎಲ್ಲಾ ಹಳ್ಳಿಗೆ ಮುಟ್ಟಿಸಿ ದೇಣಿಗೆ ಸಂಗ್ರಹ ಮಾಡಿಕೊಡಬೇಕೆಂದು ವಾಲ್ಮೀಕಿ ಜನಾಂಗದವರಿಗೆ ಕರೆ ನೀಡಿದರು.
ಶ್ರೀ ಪ್ರಸನ್ನಂದಾ ಮಹಾಸ್ವಾಮಿಗಳು ಅಪ್ಪಣೆ ಮೇರೆಗೆ ಎಲ್ಲಾ ಕೆಲಸಗಳನ್ನು ನಿಂತು ಮಾಡಿಕೊಡುವೆ ಎಂದು ಭರವಸೆ ನೀಡಿದರು. ಎಂತಾ ಕಷ್ಟ ಬಂದರು ವಾಲ್ಮೀಕಿ ಜನಾಂಗದವರಿಗೆ ಏಳಿಗೆಗಾಗಿ ಶ್ರಮಪಟ್ಟು ದುಡಿಯುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಯಾವ ರೀತಿ ಗ್ರಾಮದ ವಾಲ್ಮೀಕಿ ಜನಾಂಗದವರಿಗೆ ೫ ಜನ ಕಮೀಟಿ ಮಾಡಿ ದೇಣಿಗೆ ಪುಸ್ತಕವನ್ನು ಚಾಲನೆ ನೀಡಿದರು. ಈ ಸಭೆಯಲ್ಲಿ ಉಮೇಶ ಗೌಡರ, ಜಾತ್ರಾ ಸಮಿತಿ ಅಧ್ಯಕ್ಷರು ಮಾತನಾಡಿ ಎಲ್ ಹಳ್ಳಿಗಳಿಗೆ ಹೋಗಿ ದೇಣಿಗೆ ಪುಸ್ತಕವನ್ನು ಕೊಟ್ಟು ಶ್ರಮಿಸಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ ತಳವಾರ ಉಪಾಧ್ಯಕ್ಷರು, ಶಿವಕುಮಾರ ತಳವಾರ, ಸಂತೋಷ ಕಡಿವಾಲ, ಹನಮಪ್ಪ ತಳವಾರ, ಪಿ. ಪಿ. ಜಿಗಳೂರ, ನಾಗಪ್ಪ ತಳವಾರ, ಬಾಳಪ್ಪ ತಳವಾರ, ರಾಜು ಅಮರಗೋಳ, ಗೋವಿಂದ ಜುಮ್ಮನವರ, ಯಲ್ಲಪ್ಪ ಕೋಡಿ, ಮುಂತಾದವರು ಸಭೆಯಲ್ಲಿದ್ದರು.
ವರದಿ ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ