December 22, 2024

Bhavana Tv

Its Your Channel

ಶ್ರೀಲಂಕಾ ದೇಶದಲ್ಲಿ ನಡೆಯಲಿರುವ ಸಾಂಸ್ಕೃತಿಕ ಉತ್ಸವಕ್ಕೆ ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಆಯ್ಕೆ

ಗದಗ:- ಶ್ರೀಲಂಕಾ ದೇಶದ ಕೊಲಂಬೊ ನಗರದಲ್ಲಿ ಇಂಟರ್ನ್ಯಾಷನಲ್ ಕಲ್ಚರಲ್ ಪೆಸ್ಟ್ ಕೌನ್ಸಿಲ್ ಮತ್ತು ಗ್ಲೋಬಲ್ ಪೀಸ್ ಫೌಂಡಿಶನ್ ಸಮಿತಿ ವತಿಯಿಂದ ೧೪-೧೨-೨೦೨೧ರಂದು ಮೊವಿನಪಿಕ್ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆಯಲಿರುವ ೨೭ ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಖ್ಯಾತ ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಆಯ್ಕೆ ಆಗಿದ್ಧಾರೆ.

ನೂರಾರು ಶಿಕ್ಷಣ ಸಂಸ್ಥೆಗಳ ಮೂಲಕ ಸಹಸ್ರಾರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಜನಪದ ಕೂಗು ಶಿಕ್ಷಣ ನೀಡುವದರೋಂದಿಗೆ ನಾಡು ನುಡಿಯ ಹೋರಾಟಗಳಲ್ಲಿ ಪಾಲ್ಗೋಳ್ಳತ್ತಾ ತಮ್ಮ ಕೃಷಿಯ ಬದುಕಿನೊಂದಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಳ್ಳಿಕೇರಿಮಠ ರವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ೨೦೨೧ರ ಗ್ಲೋಬಲ್ ಐಕಾನಿಕ್ ಅವಾರ್ಡ್ ಪ್ರದಾನ ಮಾಡಲಿದ್ಧು ೨೭ನೇ ಅಂತರಾಷ್ಟ್ರೀಯ ಕನ್ನಡ ಹಬ್ಬದಲ್ಲಿ ಜನಪದ ಕಲಾ ಪ್ರದರ್ಶನದ ಕಾರ್ಯಕ್ರಮ ನಡೆಯಲಿದೆ .

error: