December 22, 2024

Bhavana Tv

Its Your Channel

ರಸ್ತೆ ಅಭಿವೃದ್ದಿಗೆ ಮೊದಲ ಆದ್ಯತೆ ನೀಡಲಾಗುವುದು -ಶಾಸಕ ಕೆ.ಜಿ.ಬಂಡಿ

ರೋಣ ಮತಕ್ಷೇತ್ರದ ರಸ್ತೆಗಳ ಅಭಿವೃದ್ದಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಕೆ.ಜಿ.ಬಂಡಿ ಹೇಳಿದರು. ಅವರು ಬುಧವಾರ ತಾಲೂಕಿನ ಸವಡಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಎಮ್.ಆರ್.ಎಲ್.-15 ಯೋಜನೆ ಅಡಿಯಲ್ಲಿ ಸವಡಿ-ಮಲ್ಲಾಪೂರ ಸಂಪರ್ಕಿಸುವ ರಸ್ತೆ ಅಭಿವೃದ್ದಿ ಹಾಗೂ ದೇವಿತಿ ಹಳ್ಳದ ಸೇತುವ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿ ಮಾತನಾಡಿದರು, ರಸ್ತೆಗಳ ಸುಧಾರಣೆಯಿಂದ ಮಾತ್ರ ಗ್ರಾಮಗಳು ಅಭಿವೃದ್ದಿ ಹೊಂದುತ್ತವೆ. ಕ್ಷೇತ್ರದ ಪ್ರತಿ ಹಳ್ಳಿಗಳ ರಸ್ತೆಗಳ ಅಭಿವೃದ್ದಿಗೆ ಆದ್ಯತೆ ನೀಡಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಟ್ಟು 5.24 ಕಿ.ಮೀ ರಸ್ತೆ ಅಭಿವೃದ್ದಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಒಟ್ಟು 4.23 ಲಕ್ಷ ರೂ ಅನುದಾನದಲ್ಲಿ ರಸ್ತೆ ಅಭಿವೃದ್ದಿ ಮಾಡಲಾಗುವುದು ಹಾಗೂ ಪ್ರಧಾನ ಮಂತ್ರಿ ಅವರು ಪ್ರತಿ ಹಳ್ಳಿಗಳ ರಸ್ತೆ ಸುಧಾರಣೆಯಾಗಬೇಕೆಂದು ಈ ಯೋಜನೆಯನ್ನು ತಂದಿದ್ದಾರೆ ಇದರಿಂದ ಅನೇಕ ಹಳ್ಳಿಗಳ ರಸ್ತೆಗಳು ಸುಧಾರಣೆಗೊಂಡು ಜನರಿಗೆ ಅನುಕೂಲಕರವಾಗಿವೆ, ಆದರಿಂದ ಗುತ್ತಿಗೆದಾರರು ಗುಣವiಟ್ಟದ ರಸ್ತೆ ನಿರ್ಮಾಣ ಮಾಡಬೇಕು ಮತ್ತು ಗ್ರಾಮದ ಜನರು ಗುತ್ತಿಗೆದಾರರೊಂದಿಗೆ ಸಹಕರಿಸಿ ಒಳ್ಳೆಯ ರಸ್ತೆಯನ್ನು ನಿರ್ಮಾಣಕ್ಕೆ ಕೈಜೋಡಿಸಬೇಕು, ಇನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ದಿಗೆ ಒತ್ತು ನೀಡಿ ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ, ಅಶೋಕ ನವಲಗುಂದ, ರಾಜಣ್ಣ ಹೂಲಿ, ಶಿವಾನಂದ ಜಿಡ್ಡಿಬಾಗಿಲ, ಅನೀಲ ಪಲ್ಲೇದ, ಪಿ.ಡಿ.ಓ
ಅನೀಲಕುಮಾರ ಬೇವಿನಗಿಡದ, ತಾ.ಪಂ ಇಓ ಸಂತೋಷ ಪಾಟೀಲ, ಶ್ರೀಶೈಲ ಇಟಗಿ, ಗ್ರಾ.ಪಂ ಸದಸ್ಯರಾದ ಮುತ್ತಪ್ಪ, ಪ್ರೇಮಾ ಮುಂತಾದವರು ಉಪಸ್ಥಿತರಿದ್ದರು

ವರದಿ: ವೀರಣ್ಣ ಸಂಗಳದ

error: