December 22, 2024

Bhavana Tv

Its Your Channel

ಜಿಗಳೂರ ಗ್ರಾಮದಲ್ಲಿ ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ.

ರೋಣ: ಅಂಬೇಡ್ಕರ ಅವರು ಯಾವಾಗಲು ಶೋಷಿತರ ಪರ ಹೋರಾಟ ಮಾಡಿದ ಧೀಮಂತ ವ್ಯಕ್ತಿ ಎಂದು ಶಾಸಕ ಕೆ.ಜಿ.ಬಂಡಿ ಹೇಳಿದರು. ಅವರು ತಾಲೂಕಿನ ಜಿಗಳೂರ ಗ್ರಾಮದಲ್ಲಿ 20 ಲಕ್ಷ ಅನುದಾನದಲ್ಲಿ ಅಂಬೇಡ್ಕರ ಸಮುದಾಯ ಭವನದ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು, ನಮ್ಮ ರಾಜ್ಯ ಸರಕಾರ 30 ಸಾವಿರ ಎಸ್.ಸಿ, ಎಸ್.ಟಿ ಜನಗಳಿಗೆ ಉದ್ಯೋಗ ಕಲ್ಪಿಸಿದ್ದಾರೆ, ಅದರಂತೆ ಈ ಸಮುದಾಯದ ಭವನದ ಸಮುದಾಯದ ಜನರು ಉಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ಸಮುದಾಯ ಭವನದಲ್ಲಿ ಜನರು ತಮ್ಮ ಕಾರ್ಯಗಳನ್ನು ಮಾಡಿಕೊಳ್ಳಬಹುದು ಹಾಗೂ ಅಂಬೇಡ್ಕರ ಅವರು ತಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಮತದಾನ ಹಕ್ಕು ಸಿಗಲಿ ಎಂದು ಬರೆದಿದ್ದಾರೆ, ಅದರಂತೆ ಎಲ್ಲರೂ ಮತದಾನ ಮಾಡಬೇಕು ಹಾಗೂ ಸಂವಿದಾನದ ಮಹತ್ವವನ್ನು ತಿಳಿದುಕೊಂಡು ಜನರು ತಮ್ಮ ಮತದಾನ ಹಕ್ಕನ್ನು ಪಡೆದುಕೊಂಡು ಮತ ಚಲಾವಣೆ ಮಾಡಬೇಕು. ಬಹಿಸ್ಕಾರವನ್ನು ಬಿಟ್ಟು ಮತದಾನ ಮಾಡಿ ನಿಮ್ಮ ಊರಿನ ಜನರು ಗ್ರಾ.ಪಂ ಸದಸ್ಯರಾದರೆ ನಿಮ್ಮ ಊರಿಗೆ ಅನೇಕ ಯೋಜನೆಗಳನ್ನು ತಂದು ಅನೇಕ ಸುಧಾರಣೆ ಮಾಡಬಹುದು. ನಿಮ್ಮ ಬೇಡಿಕೆಯಾದ ನಿಮ್ಮ ಊರಿಗೆ ಗ್ರಾ.ಪಂ ಸ್ಥಾನಮಾನಕ್ಕೆ ನೀವು ನೀಡಿದ ಅರ್ಜಿಯು ಕೋರ್ಟಿನಲ್ಲಿ ಇದೆ ಮುಂದೆ ತೀರ್ಪೂ ಹೇಗೆ ಬರುತ್ತದೆ ಅದೇ ರೀತಿ ನಿಮಗೆ ಅನೂಕೂಲವಾಗಲಿದೆ ಆದ್ದರಿಂದ ನೀವು ಚುನಾವಣೆ ಬಹಿಷ್ಕಾರವನ್ನು ಬಿಟ್ಟು ಮತದಾನ ಮಾಡಿ ನಿಮ್ಮ ಹಕ್ಕನ್ನು ಚಲಾವಣೆ ಮಾಡಿಕೊಳ್ಳಿ ಹಾಗೂ ಕ್ಷೇತ್ರದ ಅಭಿವೃಧ್ದಿ ಜೊತೆಗೆ ಇನ್ನಷ್ಟು ಅನುದಾನವನ್ನು ಊರಿಗೆ ತಂದು ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ, ಬಾಬುಗೌಡ ಪಾಟೀಲ, ಶೇಕಪ್ಪ ಗೂಳಪ್ಪನ್ನವರ, ಸಿದ್ದಲಿಂಗಪ್ಪ ಬಸರಿವಡ್ಡರ, ಬಸವರಾಜ ಚಿಕೊಪ್ಪ, ಪಕೀರಪ್ಪ ಎರಗಾರ, ಹನುಮಂತ ಮಣ್ಣೇರಿ, ಮಲ್ಲು ಮಾದರ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿ: ವೀರಣ್ಣ ಸಂಗಳದ

error: