December 22, 2024

Bhavana Tv

Its Your Channel

ರೋಣ; ವಿವಿಧ ಸಂಘಟನೆಗಳಿOದ ಬೃಹತ ಪ್ರತಿಭಟನೆ .

ರೋಣ ತಾಲ್ಲೂಕಿನ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳು ಹಾಗೂ ಅಭಿವೃದ್ಧಿ ಹೋರಾಟ ಸಮಿತಿ ರೋಣ ಕ್ರಾಂತಿವರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಹಾಗೂ ವಾಲ್ಮೀಕಿ ಅಭಿಮಾನಿ ಬಳಗ ಕರ್ನಾಟಕ ರಕ್ಷಣಾ ವೇದಿಕೆ ರಾಯಚೂರು ಜಿಲ್ಲಾ ಕೋರ್ಟ್ ಆವರಣದಲ್ಲಿ ನಡೆದ ಗಣರಾಜೋತ್ಸವದ ಆಚರಣೆಯಲ್ಲಿ ರಾಯಚೂರಿನ ಪ್ರಧಾನ ಜಿಲ್ಲಾ ನ್ಯಾಯಧೀಶರು ಮಲ್ಲಿಕಾರ್ಜುನ ಗೌಡರವರು ನನ್ನ ಅಪ್ಪಣೆ ಇಲ್ಲದೆ ಅಂಬೇಡ್ಕರರವರ ಭಾವಚಿತ್ರವನ್ನು ಇಡಲಾಗಿದೆ. ಅವರ ಭಾವಚಿತ್ರವನ್ನು ತೆಗೆದರೆ ಮಾತ್ರ ನಾನು ಧ್ವಜಾರೋಹಣ ಮಾಡುತ್ತೇನೆ ಇಲ್ಲವಾದರೆ ಧ್ವಜಾರೋಹಣ ಮಾಡುವುದಿಲ್ಲಾ ಎಂದು ಹೇಳಿದ್ದಾರೆ. ನಂತರ ಬಾಬಾ ಸಾಹೇಬ ಅಂಬೇಡ್ಕರವರ ಭಾವಚಿತ್ರವನ್ನು ತಮ್ಮ ಪ್ರಭಾವ ಬಳಸಿ ತೆಗೆಸಿರುತ್ತಾರೆ ಇದು ಖಂಡನಿಯ. ಭಾರತದ ಪ್ರಜಾಪ್ರಭುತ್ವದ ಬಹುಮುಖ್ಯ ಅಂಗ ನ್ಯಾಯಾಂಗ ಅಂತಹ ಶ್ರೇಷ್ಠ ನ್ಯಾಯಾಂಗದ ಜಿಲ್ಲಾ ನ್ಯಾಯಾಧೀಶರ ಈ ನಡೆ ನಾಗರಿಕ ಸಮಾಜಕ್ಕೆ ತೀವ್ರ ಆತಂಕ ಮತ್ತು ನೋವು ತಂದೊಡ್ಡಿದೆ. ಸಂವಿಧಾನದ ನಿರ್ಮಾತೃಗಳ ಬಗ್ಗೆ ಇಷ್ಟು ಪೂರ್ವಾಗ್ರಹ ಪೀಡಿತ ಮನಸ್ಥಿತಿ ಇರುವ ನ್ಯಾಯಾಧೀಶರಿಂದ ನಿಪಕ್ಷಪಾತ ನ್ಯಾಯದಾನವನ್ನು ನಿರೀಕ್ಷಿಸಲು ಹೇಗೆ ಸಾಧ್ಯ.
ಇಂತಹ ನ್ಯಾಯಾಧೀಶರ ಮೇಲೆ ಕ್ರಮ ಕೈಗೊಳ್ಳಬೇಕು ಮುಂದೆ ಯಾರು ಈ ತರಹದ ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದೆಂದು ಹೇಳಿದರು
ಪ್ರಕಾಶ ಹೊಸಳ್ಳಿ ಮೌನೇಶ ಹಾದಿಮನಿ ಮುತ್ತು ನಂದಿ ಹನಮಂತ ಚಲವಾದಿ ಇನ್ನೂ ಅನೇಕ ಯುವಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ವರದಿ: ವೀರಣ್ಣ ಸಂಗಳದ

error: