ರೋಣ: ಕರ್ನಾಟಕದ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾದ ಕೆ.ಎಸ್. ಈಶ್ವರಪ್ಪ ರವರು ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಬದಲಾಗಿ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿರುತ್ತಾರೆ. ಇದು ದೇಶವಿರೋಧಿ, ಅಸಂವಿಧಾನಿಕ ಹೇಳಿಕೆಯಾಗಿದ್ದು, ಸಚಿವ ಸಂಪುಟದಿAದ ಇವರನ್ನು ಕೆಳಗಿಳಿಸಿ ಇವರ ಮೇಲೆ ದೇಶದ್ರೊಹದ ಪ್ರಕರಣ ದಾಖಲಿಸಲು ಒತ್ತಾಯಿಸಿ ರೋಣ ಬ್ಲಾಕ್ ಕಾಂಗ್ರೇಸ್ ಸಮಿತಿ ವತಿಯಿಂದ ಪ್ರತಿಭಟನೆಯನ್ನು ನಗರದ ಸೂಡಿ ಕ್ರಾಸ್ ನಿಂದ ತಹಶೀಲ್ದಾರ ಕಚೇರಿಯವರೆಗೆ ತಲುಪಿ ತಹಶೀಲ್ದಾರವರಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಎ.ಐ.ಸಿ.ಸಿ. ಮಾಜಿ ಅಧ್ಯಕ್ಷರಾದ ರಾಹುಲ್
ಗಾಂಧಿüಯವರ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು ಖಂಡಿಸಿ ಪ್ರತಿಭಟನೆ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ರೋಣ ಬ್ಲಾಕ್ ಕಾಂಗ್ರಸ್ ಸಮಿತಿ ಅಧ್ಯಕ್ಷರಾದ ವೀರಣ್ಣ ಶೆಟ್ಟರ, ಮಹಿಳಾ ಬ್ಲಾಕ್ ಅಧ್ಯಕ್ಷರಾದ ನಾಜಬೇಗಂ ಯಲಿಗಾರ, ವಿದ್ಯಾ ದೊಡ್ಡಮನಿ ಅಧ್ಯಕ್ಷರು ಪುರಸಭೆ ರೋಣ, ರೋಣ ಪುರಸಭೆ ಉಪಾಧ್ಯಕ್ಷರಾದ ಮಿಥುನ್ ಜಿ ಪಾಟೀಲ, ಯುಸೂಪ್ ಇಟಗಿ, ಮಾಜಿ ಉಪಾಧ್ಯಕ್ಷರು ಗದಗ ಜಿಲ್ಲಾ ವಕ್ಫ ಬೋರ್ಡ್, ಯುವ ಕಾಂಗ್ರಸ್ ಅಧ್ಯಕ್ಷರಾದ ಯಲ್ಲಪ್ಪ ಕಿರೇಸೂರ, ಸಂಗು ನವಲಗುಂದ ಅಧ್ಯಕ್ಷರು ಸಾಮಾಜಿಕ ಜಾಲತಾಣ, ಇನ್ನುಳಿದ ಪುರಸಭೆ ಸದಸ್ಯರು, ಹಿರಿಯ ಕಾಂಗ್ರಸ್ ಮುಖಂಡರು, ಯುವ ಕಾಂಗ್ರಸ್ ಸಮಿತಿ, ಕಾರ್ಯಕರ್ತರು ಸೇರಿದಂತೆ ಮತ್ತೀರರು ಭಾಗವಹಿಸಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ