December 22, 2024

Bhavana Tv

Its Your Channel

ಶಿವಮೊಗ್ಗ ಹರ್ಷನ ಕೊಲೆ ಪ್ರಕರಣ ಎನ್.ಐ.ಎ ತನಿಖೆಗೆ ಹಿಂದು ಭಾಂದವರಿOದ ಆಗ್ರಹ

ರೋಣ: ಶಿವಮೊಗ್ಗದಲ್ಲಿ ನಡೆದ ಹಿಂದು ಕಾರ್ಯಕರ್ತ ಹರ್ಷ ಅವರ ಕೊಲೆ ಪ್ರಕರಣ ಎನ್.ಐ.ಎ ತನಿಖೆ ಆಗಬೇಕೆಂದು ಆಗ್ರಹಿಸಿ ರೋಣ ತಾಲೂಕ ಹಿಂದು ಭಾಂಧವರು ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ ಜಿ.ಬಿ.ಜಕ್ಕನಗೌಡ್ರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ತಾಲೂಕ ವಿ.ಎಚ್.ಪಿ ಕಾರ್ಯದರ್ಶಿ ರಾಘವೇಂದ್ರ ಹಬೀಬ ಮಾತನಾಡಿ, ಕತ್ತಲಲ್ಲಿ ಗುಂಪು ಕಟ್ಟಿಕೊಂಡು ಬಂದು ಹಿಂದಿನಿAದ ಇರಿಯುವ ಕುತಂತ್ರ ಹೇಡಿತನದ ಪರಮಾವಧಿ, ಓಟಿನ ರಾಜಕೀಯದ ಡೋಂಗಿ ಸೆಕ್ಯೊಲರ್‌ವಾದಿಗಳ ಬೆಂಬಲದಿAದ ಕೊಬ್ಬಿದ ಹಂದಿಗಳAತಾದ ತಾಲಿಬಾನ ಐಸಿಸ್ ಮಾನಸಿಕತೆಯ ಇಸ್ಲಾಮಿಕ್ ಭಯೋತ್ಪಾದಕರು ಹೇಡಿತನದ ಹೇಯ ಕೃತ್ಯಕ್ಕೆ ಮತ್ತೊಂದು ಬಲಿ ಶಿವಮೊಗ್ಗದ ಹಿಂದು ಕಾರ್ಯಕರ್ತ ಹರ್ಷ ಈ ಪಾಶವೀ ಕೃತ್ಯವನ್ನು ಸಮಸ್ತ ರೋಣ ತಾಲೂಕು ಹಿಂದೂ ಭಾಂಧವರು ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ. ಸೈದ್ದಾಂತಿಕ ನೆಲೆಯಲ್ಲಿ ಹೋರಾಡುವುಕ್ಕೆ ಬದಲಾಗಿ ತಮ್ಮ ವಿಚಾರ
ಒಪ್ಪದವರನ್ನು ಹತ್ಯೆ ಮಾಡುವ ಮೂಲಕ ಹಿಂದುತ್ವವನ್ನು ನಾಶ ಮಾಡಬಹುದೆಂಬ ಭ್ರಮೆಗೊಳಗಾದ ಮತಾಂಧ ಪಾಶವೀ ಶಕ್ತಿಗಳ ಮಾನಸಿಕತೆಗೆ ಈ ಕೊಲೆ ಮತ್ತೊಂದು ಸಾಕ್ಷಿ ಈ ಕೊಲೆಯಲ್ಲಿ ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ನೇರ ಭಾಗಿಯಾಗಿದೆ ಎಂದು ಬಲವಾದ ಸಂದೇಹ ಇದೆ. ಈ ಹಿಂದೆಯೂ ನಡೆದ ಹಲವಾರು ಹಿಂದು ಕಾರ್ಯಕರ್ತರ ಕೊಲೆ ಪ್ರಕರಣಗಳಲ್ಲಿಯೂ ಇದೆ ಸಾಮ್ಯತೆ ಇರುವ ಹಾಗಿದೆ. ಕತ್ತಲ್ಲಲಿ ಗುಂಪು ಕಟ್ಟಿಕೊಂಡು ಬಂದು ಹಿಂದಿನಿAದ ಇರಿಯುವ ಕುತಂತ್ರ ಬಳಕೆಯಾಗಿದೆ. ಹರ್ಷ ಕೊಲೆ ಪ್ರಕರಣದ ಜೊತೆಗೆ ಈ ಹಿಂದೆ ನಡೆದ ಎಲ್ಲ ಹಿಂದೂ ಕಾರ್ಯಕರ್ತರ ಕೊಲೆಗಳನ್ನು ಎನ್.ಐ.ಎ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳವಂತೆ ಹಾಗೂ ಹರ್ಷನ ಕುಟುಂಬಕ್ಕೆ ತಕ್ಷಣ 25 ಲಕ್ಷ ರೂ. ಪರಿಹಾರ ನೀಡುವಂತೆ ವೇದಿಕೆ ಆಗ್ರಹಿಸುತ್ತದೆ ಎಂದು ಹೇಳಿದರು.

ಈ ವೇಳೆ ಜಯರಾಂ ಬೊಳಾಜೆ, ರಘುನಾಥ ಕೊಂಡಿ, ರವಿ ಕೊಪ್ಪದ, ರವಿ ದೇಶಣ್ಣವರ, ಮಂಜು ಸಂಗಟಿ, ವಿರೇಶ ದೊಡ್ಡಣ್ಣವರ, ಮಾಂತೇಶ ಜಿಡ್ಡಿಬಾಗಿಲ, ರಾಕೇಶ ಗಾಣಗೇರ, ವೀರಭದ್ರಗೌಢ ರಾಯನಗೌಡ್ರ, ರಮೇಶ ನಾಯಕ, ಮಂಜು ಅಂಗಡಿ, ಸುಭಾಷ ಕಿರೇಸೂರ, ಲೋಹಿತ ಕುಂಬಾರ, ಕುಮಾರ ಕೊಪ್ಪದ, ಶಿವಾನಂದ ಶಿಘ್ರ, ಸಂತೋಷ ಕಡಿವಾಲ, ಬಸನಗೌಡ ಪಾಟೀಲ, ಸಿದ್ದು ಪುರಾಣಿಕ, ಅಭಿಷೇಕ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ ವೀರಣ್ಣ ಸಂಗಳದ ರೋಣ

error: